River Project: ನದಿ ಜೋಡಣೆಯ DPR ಮೊದಲೇ ತಜ್ಞರಂತೆ ಮಾತನಾಡುವುದೇಕೆ?; ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯದ ಪ್ರಮುಖ ನದಿ ಯೋಜನೆಯಾದ 'ಬೇಡ್ತಿ ಮತ್ತು ವರದಾ' ನದಿಗಳ ಜೋಡಣೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಯೋಜನೆ ಇನ್ನು 'ವಿಸ್ತೃತ ಯೋಜನಾ ವರದಿ' ತಯಾರಿಕೆ ಹಂತದಲ್ಲಿದೆ. ಡಿಪಿಆರ್ ಗೆ ಕೆಲವು ಅಡ್ಡಿಪಡಿಸುತ್ತಿದ್ದಾರೆ. ವರದಿ ತಯಾರಾಗುವ ಮೊದಲೇ ಯೋಜನೆ ಬಗ್ಗೆ ತಜ್ಞರ ರೀತಿ ಮಾತನಾಡಬಾರದು ಎಂದು ಮಾಜಿ ಸಿಎಂ, ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪೂರ ಪಟ್ಟಣದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

Bedti-Varada River

ಬೇಡ್ತಿ- ವರದಾ ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದಿದ್ದೇನೆ. ಡಿಪಿ ಆರ್ ಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಡಿಪಿಆರ್ ಬಂದ ಮೇಲೆ ಎಷ್ಟು ಅರಣ್ಯಕ್ಕೆ ತೊಂದರೆ ಆಗುತ್ತದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಅದಕ್ಕು ಮುನ್ನವೇ ನಾವೇ ತಜ್ಞರ ತರ ಮಾತಾಡುವುದು ಬೇಡ ಎಂದು ವಿನಂತಿಸಿದರು.

ನದಿ ನೀರು ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಜನ ಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಇತ್ತೀಚೆಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರು ಶೀಘ್ರವೇ ಸಭೆ ಕರೆಯುವ ಭರವಸೆ ಇದೆ ಎಂದು ಬೊಮ್ಮಾಯಿ ತಿಳಿಸಿದರು.

ಕಬ್ಬಿನ ಬೆಲೆ ನಿಗದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಕ್ಟೋಬರ್ 12 ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಯಲಿದೆ. ಈ ವೇಳೆ ಅಲ್ಲಿ ಎಫ್ ಆರ್ ಪಿ, ಎಂ ಎಸ್ ಪಿ ಬಗ್ಗೆ ಚರ್ಚೆ ಆಗಲಿದ್ದು, ಅಂದು ನಿರ್ಧಾರವಾಗಲಿದೆ ಎಂದು ಹೇಳಿದರು.

ಮಠಾಧೀಶರ ಬಗ್ಗೆ ಹೇಳಿಕೆ: ಡಿಕೆಶಿ ಗುಣ ಹೊರಬಂತು!

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವೀರ ಶೈವ ಲಿಂಗಾಯತ ಮಠಾಧಿಪತಿಗಳ ಬಗ್ಗೆ ತಮ್ಮ ನೈಜ ಗುಣ ಒಳಗಡೆ ಮುಚ್ಚಿಟ್ಟುಕೊಂಡು ಬೇರೆ ತರ ಪ್ರೊಜೆಕ್ಟ್ ಮಾಡಲು ನೋಡಿದ್ದರು ಅವರ ನೈಜ ಗುಣಗುಣ ಇಷ್ಟು ದಿನ ಆದ ಮೇಲೆ ಹೊರಬರುತ್ತಿದೆ. ಅದು ಅವರ ಸಂಸ್ಕೃತಿ, ಅದು ಹೊರಗಡೆ ಬಂದಿದೆ. ಅವರ ಹೇಳಿಕೆ ಬಗ್ಗೆ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದರು.

ಸಿಎಂ ಡಿ. ಕೆ ಶಿವಕುಮಾರ್ ಅವರು ತಮ್ಮ ನೈಜ ಗುಣ ಒಳಗಡೆ ಮುಚ್ಚಿಟ್ಟುಕೊಂಡು ಬೇರೆ ರೀತಿಯಲ್ಲಿ ತಮ್ಮನ್ನು ಪ್ರೊಜೆಕ್ಟ್ ಮಾಡಲು ನೋಡಿದ್ದರು. ಆದರೆ ಮಠಾಧೀಶರ ಕುರಿತ ಅವರ ಹೇಳಿಕೆಯಿಂದ ಅವರಲ್ಲಿ ಎಂಥ ಗುಣವಿದೆ ಎಂಬುದು ಗೊತ್ತಾಗಿದೆ. ಅವರು ಹೇಳಿರೋದು ಸ್ಪಷ್ಟವಾಗಿ ಬಹಿರಂಗವಾಗಿ ಇದೆ. ಈಗ ನಾನು ಹಾಗೇ ಹೇಳಿಲ್ಲ ಅಂತಾರೆ. ಅದನ್ನ ಮರಳಿ ಪಡೆಯಲು ಆಗುವುದಿಲ್ಲ ಎಂದು ಟಾಂಗ್ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು 25 ವರ್ಷ ಜನ ಸೇವೆ ಮಾಡಿರುವ ಹಿನ್ನೆಲೆಯಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮ ಮಾಡಿದ್ದೇವೆ. ಆದರ್ಶಗಳು ನಶಿಸಿ ಹೋಗಿರುವ ಕಾಲದಲ್ಲಿ ಪ್ರಧಾನಿ ಮೋದಿಯವರು ಆದರ್ಶ ಆಡಳಿತ ತರುವ ಪ್ರಯತ್ನ ಮಾಡಿದ್ದಾರೆ. ಜಾಗತಿಕವಾಗಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಅದನ್ನು ಇನ್ನಷ್ಟು ಅಭಿವೃದ್ದಿ ಮಾಡುವ ದೃಢಸಂಕಲ್ಪ ಮಾಡಿದ್ದೇವೆ ಎಂದರು.

ಖಾಸಗಿ ದೂರಿಗೆ ಅವಕಾಶ ಇಲ್ಲ

ಎಸ್ ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಯವರು ಫಾರಂ ನಂ- 7 ಕೊಟ್ಟು ಕಾಂಗ್ರೆಸ್ ಮತದಾರನ್ನು ತೆಗೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಸ್ ಐ ಆರ್ ನಲ್ಲಿ ಅರ್ಜಿ ಕೊಡಲು ಅಧಿಕಾರ ಇದೆ. ಸಾಮಾನ್ಯ ವ್ಯಕ್ತಿಯೂ ಅರ್ಜಿ ‌ಕೊಡಬಹುದು.

ಅದನ್ನ ನಾವು ಮಾಡಲು ಸಾಧ್ಯವೇ? ಎಸ್ ಐ ಆರ್ ಪಾರದರ್ಶಕ ವಾಗಿ ನಡೆದಿದೆ. ಜಸ್ಟಿಸ್ ಗಂಗಾಧರ್ ಅವರು ಕೂಡಾ ಅದನ್ನೇ ಹೇಳಿದ್ದಾರೆ. ಅರ್ಜಿ ಕೊಟ್ಟ ತಕ್ಷಣ ತಪ್ಪು ಅಂತ ಅಲ್ಲ, ಪರಿಶೀಲನೆ ಮಾಡಬೇಕು. ಕಾಂಗ್ರೆಸ್ ನವರು ನೀಡುತ್ತಿರುವುದು ಖಾಸಗಿ ದೂರುಗಳು. ಇವರಿಗೆ ಕಂಪ್ಲೇಂಟ್ ಮಾಡಲು ಅಧಿಕಾರವೇ ಇಲ್ಲ. ಎಲೆಕ್ಷನ್ ವಿಚಾರದಲ್ಲಿ ಲೋಪ ಆಗಿದ್ದರೆ ಎಲೆಕ್ಷನ್ ಕಮಿಷನ್ ಮಾತ್ರ ಕಂಪ್ಲೇಂಟ್ ಮಾಡಲು ಸಾಧ್ಯ. ಕಾಂಗ್ರೆಸ್ ನವರು ಅಲ್ಪ ಸಂಖ್ಯಾತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬೇಸರದ ಸಂಗತಿ

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಎಂ ಆರ್ ಪೂವಮ್ಮ ಅವರಿಗೆ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಆಯಿತಾ ಪ್ರಶ್ನೆಗೆ ಅವರು, ಈ ವಿಚಾರದಿಂದ ನನಗೆ ಬೇಸರ ಆಯ್ತು. ನಮ್ಮ ಸರ್ಕಾರ ಇದ್ದಾಗ ಓಲಂಪಿಕ್ ಟ್ರೇನಿಂಗ್ ಗೆ 10 ಲಕ್ಷ ರೂಪಾಯಿ ಕೊಡುತ್ತಿದ್ದೆವು. ಇವರಿಗೆ ಮಕ್ಕಳ ಸಾಧನೆ ಗುರುತಿಸಲೂ ಪುರುಸೊತ್ತಿಲ್ಲ. ಕಾಂಗ್ರೆಸ್ ನವರು ತಮ್ಮ ಅಧಿಕಾರದ ದರ್ಬಾರ್ ನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರದ ಎಂ ಎಲ್ ಸಿ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ್ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ ಎಂದು ಇದೇ ವೇಳೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+