• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿನಿಸ್ಟರ್ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಆರೋಪಿ ಬಂಧನ

|
Google Oneindia Kannada News

ಬೆಂಗಳೂರು, ಜುಲೈ09: ಹಿರಿಯ ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಅಂದರ್ ಆಗಿದ್ದಾನೆ. ಸಚಿವರ ಪಿಎ ಎಂದು ಐಎಎಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದ ಗೋವಿಂದರಾಾಜುವನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ಗೆ ಬೆದರಿಕೆ ಹಾಕಿ ಸಿಕ್ಕಿಬಿದ್ದಿದ್ದಾನೆ.

ಅಬಕಾರಿ ಸಚಿವ ಗೋಪಾಲಯ್ಯ ಪರ್ಸನಲ್ ಸೆಕ್ರೆಟರಿ ಎಂದು ಕರೆ ಮಾಡಿ ಬೆದರಿಕೆ ಹಾಕಿದ ವ್ಯಕ್ತಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆಯನ್ನು ಹಾಕಿದ್ದ. ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ಕಾರು ಚಾಲಕನ ವರ್ಗಾವಣೆ ಸಂಬಂಧ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿ ತಗ್ಲಾಕಿ ಕೊಂಡಿದ್ದಾನೆ.

ಜುಲೈ ಒಂದರಂದು ರಾತ್ರಿ 11 ಗಂಟೆಗೆ ಮುನೀಶ್ ಮೌದ್ಗಿಲ್‌ಗೆ ಕರೆ ಮಾಡಿದ್ದ ವ್ಯಕ್ತಿ. ಕಾರು ಚಾಲಕ ಆನಂದ್ ವರ್ಗಾವಣೆ ಮಾಡಿದ್ದಕ್ಕೆ ಕರೆಯನ್ನು ಮಾಡಿ ಬೆದರಿಕೆಯನ್ನು ಹಾಕಿದ್ದ ಹಾಕಿದ್ದ. ಈ ವೇಳೆ ತಾನೂ ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಹೇಳಿಕೊಂಡಿದ್ದಾನೆ. ಚಾಲಕ ಆನಂದನನ್ನ ಏಕೆ ವರ್ಗಾವಣೆ ಮಾಡಿದ್ದೀಯಾ ಎಂದು ಜೋರು ಅವಾಜ್ ಅನ್ನು ಸಹ ಹಾಕಿದ್ದಾನೆ.

ಈ ವೇಳೆ ಇದು ಆಡಳಿತಾತ್ಮಕ ವಿಷಯ, ಇದಕ್ಕೆ ಈ ಹೊತ್ತಿನಲ್ಲಿ ಕರೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದ ಮುನೀಶ್ ಮೌದ್ಗಿಲ್ ಈ ವೇಳೆ ಏರು ಧ್ವನಿಯಲ್ಲಿ ಮಾತನಾಡಿದ್ದ ವ್ಯಕ್ತಿ. ನಾನು ಸಚಿವರ ಪಿಎ, ನಿಮ್ಮನ್ನ ಸರ್ವೇ ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಹುದ್ದೆಯಿಂದ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ.

ಮಿನಿಸ್ಟರ್ ಪಿಎ ರಾಮೇಗೌಡ ಕರೆಯನ್ನೇ ಮಾಡಿರಲಿಲ್ಲ

ಮಿನಿಸ್ಟರ್ ಪಿಎ ರಾಮೇಗೌಡ ಕರೆಯನ್ನೇ ಮಾಡಿರಲಿಲ್ಲ

ತಡರಾತ್ರಿ ಸುಮಾರು 15 ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಟಾರ್ಚರ್ ಮಾಡಿದ್ದಾನೆ. ಮರು ದಿನ ಟ್ರೂ ಕಾಲರ್‌ನಲ್ಲಿ ಪೋನ್ ನಂಬರ್ ಪರಿಶೀಲನೆ ನಡೆಸಿದ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ರಾತ್ರಿ ಹೇಳಿದ್ದ ಹೆಸರು ಮತ್ತೆ ಟ್ರೂ ಕಾಲರ್ ಹೆಸರು ಬೇರೆ ಬೇರೆ ತೋರಿಸಿದೆ. ಟ್ರೂ ಕಾಲರ್ ನಲ್ಲಿ ಗೋವಿಂದರಾಜು ಟಿ ಎಂದು ಹೆಸರು ಪತ್ತೆಯಾಗಿದೆ. ಬಳಿಕ ಅಬಕಾರಿ ಸಚಿವರ ಪಿಎ ರಾಮೇಗೌಡ ಅವರಿಗೆ ವಿಷಯ ತಿಳಿಸಿದ ಮುನೀಶ್ ಮೌದ್ಗಿಲ್ ಅವರಿಂದ ಮಾಹಿತಿಯನ್ನು ಪಡೆದಿದ್ದಾರೆ. ರಾಮೇಗೌಡ ಈ ವೇಳೆ ಸಚಿವರ ಪಿಎ ಎಂದು ಯಾರೋ ಕರೆ ಮಾಡಿದ್ದಾರೆ ಆ ವ್ಯಕ್ತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಚಾಲಕ ಆನಂದ್ ಸಂಬಂಧಿಯೇ ಆರೋಪಿ

ಚಾಲಕ ಆನಂದ್ ಸಂಬಂಧಿಯೇ ಆರೋಪಿ

ತನಗೆ ತಡರಾತ್ರಿ ಕರೆಯನ್ನು ಮಾಡಿ ಬೆದರಿಕೆಯನ್ನು ಹಾಕಿದ್ದು ಗೋಪಾಲಯ್ಯರವರ ಪಿಎ ಅಲ್ಲ ಅನ್ನೋದು ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನೀಶ್ ಮೌದ್ಗಿಲ್ ದೂರನ್ನು ದಾಖಲಿಸಿದ್ದಾರೆ. ದೂರು ದಾಖಲಾತ ಬಳಿಕ ಸಂಪಿಗೆ ಹಳ್ಳಿ ಪೊಲೀಸರು ಆರೋಪಿ ಗೋವಿಂದರಾಜುವನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ವರ್ಗಾವಣೆಯಾಗಿದ್ದ ಚಾಲಕ ಆನಂದ್ ಸಂಬಂಧಿಯೇ ಆರೋಪಿ ಎಂಬುದು ಪತ್ತೆಯಾಗಿದೆ. ಆರೋಪಿಯನ್ನ ಬಂಧಿಸಿ ತನಿಖೆ ನಡೆಸಿರೋ ಸಂಪಿಗೆಹಳ್ಳಿ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಸಚಿವರ ಹೆಸರು ದುರುಪಯೋಗ ಪಡಿಸಿದ್ದ ಆರೋಪಿ

ಸಚಿವರ ಹೆಸರು ದುರುಪಯೋಗ ಪಡಿಸಿದ್ದ ಆರೋಪಿ

ಜುಲೈ ಒಂದರಂದು ತಮ್ಮ ಕಾರು ಚಾಲಕ ಆನಂದನನ್ನ ವರ್ಗಾಯಿಸಿದ್ದ ಮುನೀಶ್ ಮೌದ್ಗಿಲ್ ಆಡಳಿತಾತ್ಮಕ ದೃಷ್ಟಿಯಿಂದ ಕೋಲಾರಕ್ಕೆ ವರ್ಗಾವಣೆಯನ್ನು ಮಾಡಿದ್ದರು. ಚಾಲಕನ ವರ್ಗಾವಣೆ ಮಾಡಿದ್ದಕ್ಕೆ ಗೋವಿಂದರಾಜು ಎಂಬಾತನಿಂದ ಬೆದರಿಕೆ ಕರೆಯನ್ನು ಮಾಡಿದ್ದಾನೆ. ಈ ವೇಳೆ ಸಚಿವರ ಹೆಸರು ಬಳಸಿಕೊಂಡು ಬೆದರಿಕೆ ಹಾಕಿದ್ದಕ್ಕೆ ಕಂಬಿ ಹಿಂದೆ ಬಿದ್ದಿದ್ದಾನೆ.

ಆರೋಪಿಯನ್ನು ಬಂಧಿಸಿ ವಿಚಾರಣೆ

ಆರೋಪಿಯನ್ನು ಬಂಧಿಸಿ ವಿಚಾರಣೆ

ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ "ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಕೊಟ್ಟ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಮಿನಿಸ್ಟರ್ ಪಿಎ ಹೆಸರಿನಲ್ಲಿ ಕರೆಯನ್ನು ಮಾಡಲಾಗಿತ್ತು. ಚಾಲಕ ಆನಂದ್ ವರ್ಗಾವಣೆ ಸಂಬಂಧ ಕರೆಯನ್ನು ಮಾಡಲಾಗಿತ್ತು. ಮಿನಿಸ್ಟರ್ ಹೆಸರನ್ನು ಯಾಕೆ ಬಳಸಿದ ಅನ್ನೋದರ ತನಿಖೆಯನ್ನು ಮಾಡುತ್ತಿದ್ದೇವೆ.

Recommended Video

   Kamran Akmal ಮನೆಯಿಂದ ಕುರಿ ಕದ್ದ ದುಷ್ಕರ್ಮಿಗಳು | *Cricket | Oneindia Kanada

   English summary
   IAS Munish Moudgil Threatening call accused arrested by Sampige halli police, The Accused misused Minister Gopalaiah Name,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X