• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕರನ್ನು ಮಲೇಷ್ಯಾಗೆ ಕರೆದುಕೊಂಡು ಹೋಗುತ್ತಿಲ್ಲ: ಎಚ್‌ಡಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 2: ಮಗನ ಜೊತೆ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‌ಗೆ ಹೋಗುತ್ತಿದ್ದೇನೆ, ಶಾಸಕರನ್ನು ಮಲೇಷ್ಯಾಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಡಿಎಸ್ ಶಾಸಕರು, ಎಂಎಲ್‌ಸಿಗಳು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ ಹೀಗಾಗಿ ಪಕ್ಷದೊಳಗಿನ ಅಸಮಾಧಾನ ಶಮನಕ್ಕೆ ಮಲೇಷ್ಯಾಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗಿತ್ತು.

ಜೆಡಿಎಸ್‌ ಶಾಸಕರು ಪಕ್ಷ ಬಿಡ್ತಾರೆ ಎನ್ನುವ ಭಯಕ್ಕೆ ಬಿಜೆಪಿ ಪರ ಮಾತಾಡ್ತಿಲ್ಲ: ಎಚ್‌ಡಿಕೆ ಜೆಡಿಎಸ್‌ ಶಾಸಕರು ಪಕ್ಷ ಬಿಡ್ತಾರೆ ಎನ್ನುವ ಭಯಕ್ಕೆ ಬಿಜೆಪಿ ಪರ ಮಾತಾಡ್ತಿಲ್ಲ: ಎಚ್‌ಡಿಕೆ

ಇದಕ್ಕೆ ಸ್ಪಷ್ಟನೆ ನೀಡಿರುವ ಅವರು ನಾನು ಮಗನ ಸಿನಿಮಾ ವಿಚಾರವಾಗಿ ಲಂಡನ್‌ಗೆ ಹೋಗುತ್ತಿದ್ದೇನೆ. ಎಲ್ಲ ಪಕ್ಷದಲ್ಲೂ ಒಂದಷ್ಟು ಅಸಮಾಧಾನ ಇರೋದು ನಿಜ.‌ ನಮ್ಮಲ್ಲೂ ಇರಬಹುದು. ಆದರೆ ಇದು ನಿಯಂತ್ರಣದಲ್ಲಿದೆ.

ಶಾಸಕರ ಜತೆ ಗೌಡರು ಕರೆದಿರುವ ಸಭೆಯಲ್ಲಿ ನಾನು ಇರುವುದಿಲ್ಲ. ಲಂಡನ್ ನಿಂದ ನಾನು ವಾಪಸ್ ಬರೋದೇ ನವೆಂಬರ್ 8 ರಂದು ಎಂದು ಹೇಳಿದ್ದಾರೆ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ನಾನು ಹೆದರಿಕೊಂಡಿದ್ದೇನೆ ಅದಕ್ಕೇ ಬಿಜೆಪಿ ಪರ ಸಾಫ್ಟ್ ಆಗಿದ್ದೇನೆ ಅಂತಾ ಮಾತಾಡ್ತಾರೆ.

ನನ್ನ ಯಾರೇನು ಮಾಡೋಕಾಗುತ್ತೆ.? ಕೆಲವರು ನನ್ನ ಪಕ್ಷ ಬಿಟ್ಟು ಹೋಗ್ತಾರೆ ಅಂತೆಲ್ಲಾ ಹೇಳ್ತಾರೆ. ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಸಾದ್ಯವೇ ಎಂದು ಹೇಳಿದ್ದಾರೆ.

English summary
Former Chief Minister HD Kumaraswamy Said that , I am going to London with my son for a movie, not taking MLAs to Malaysia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X