ಯಾರೂ ಇಲ್ಲದೆ ತಬ್ಬಲಿಯಾಗಿದ್ದೇನೆ: ಶರತ್ ಬಚ್ಚೇಗೌಡ
Recommended Video
ಹೊಸಕೋಟೆ, ನವೆಂಬರ್ 5: ರಾಜಕೀಯದಲ್ಲಿ ಇರುವವರಿಗೆ ಹೆತ್ತತಾಯಿ ಮತ್ತು ಪಕ್ಷ ಎನ್ನುವ ಇಬ್ಬರು ತಾಯಂದಿರು ಇರುತ್ತಾರೆ ಆದರೆ ನನಗೆ ಯಾರೂ ಇಲ್ಲ ಎಂದು ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರೋ ಒಬ್ಬರ ಕುತಂತ್ರ ಪಿತೂರಿಯಿಂದ ಪಕ್ಷಕ್ಕೆ ಬಂದು ನಮ್ಮನ್ನು ತಾಯಿಯಿಂದ ದೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ ವಿಚಾರ, ಪರೋಕ್ಷವಾಗಿ ಸಚಿವ ಆರ್ ಅಶೋಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೆ ಅವರು ಸ್ಪರ್ಧೆ ಮಾಡಬೇಕು, ಬೇರೆಯವರು ನಿಂತರೆ ಅವರು ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ.
ಬಚ್ಚೇಗೌಡ, ಶರತ್ ಬಚ್ಚೇಗೌಡ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ, ಬೇರೆ ರೀತಿ ಏನೂ ಇಲ್ಲ ಎಂದು ಹೇಳಿದ್ದರು.

ಪಕ್ಷ ಕಾಲಿನಲ್ಲಿ ತೋರಿಸಿದ ಕೆಲವನ್ನು ಕೈಯಲ್ಲಿ ಮಾಡಿದ್ವಿ
ಪಕ್ಷ ಕಾಲಿನಲ್ಲಿ ತೋರಿಸಿದ ಕೆಲಸವನ್ನು ಕೈನಲ್ಲಿ ಮಾಡಿ ತೋರಿಸಿದ್ವಿ.ಪಕ್ಷ ತಾಯಿ ಮತ್ತು ತಂದೆ ಬಚ್ಚೇಗೌಡ ಇಬ್ಬರು ನನ್ನಿಂದ ದೂರವಾಗಿ ತಬ್ಬಲಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಜೆಪಿಗೋಸ್ಕರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು
2008 ರಿಂದ ಬಿಜೆಪಿಗಾಗಿ ಹೊಡೆಸಿಕೊಂಡು, ಬೈಸಿಕೊಂಡು, ಪೊಲೀಸ್ ಠಾಣೆ, ಕೋರ್ಟ್ ಮೇಟ್ಟಿಲೇರಿ ನೋವನುಭವಿಸಿ ಪಕ್ಷ ಕಟ್ಟಿದ್ವಿ. ಆದರೆ ಕಷ್ಟಪಟ್ಟು ದುಡಿದವರಿಗಿಂತ ತೊಂದರೆ ಕೊಟ್ಟವರಿಗೆ ವೇದಿಕೆ ಮೇಲೆ ಗೌರವ, ಅಭಿಮಾನ, ಸನ್ಮಾನ ಸಿಗುತ್ತಿದೆ ಎಂದರು.

ನಮಗೆ ಗೆಲ್ಲುವ ಅರ್ಹತೆ ಇಲ್ವಾ?
ನಮಗೆ ಗೆಲ್ಲುವ ಅರ್ಹತೆಯಿಲ್ವಾ, ನಮ್ಮ ಶ್ರಮಕ್ಕೆ ಜಯ ಬೇಡ್ವಾ,ಪಕ್ಷದ ಹಿರಿಯರು ನಮಗೆ ಆಶಿರ್ವಾದ ಮಾಡಬಾರದ, ಅದಕ್ಕೆ ನಾನು ಅರ್ಹನಲ್ವಾ.....? ನೆನ್ನೆ ಕೇಳಿದ ಮಾತುಗಳಿಂದ ನನಗೆ ತುಂಬಾ ನೋವಾಗಿದೆ.

ನನ್ನ ರಾಜಕೀಯ ತೀರ್ಮಾನ ತೆಗೆದುಕೊಳ್ತೀನಿ
ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ತೀರ್ಮಾನ ತೆಗೆದುಕೊಳ್ಳುತ್ತೇನೆ, ಶೀಘ್ರವೇ ನಿರ್ಧಾರ ತಿಳಿಸುತ್ತೇನೆ. ಹೊಸಕೋಟೆ ತಾಲೂಕಿನ ಬೈರನಾಡು ಗ್ರಾಮದಲ್ಲಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.












Click it and Unblock the Notifications