'ಕನ್ನಡ ನಾಡಿನ ಜನರಿಗೆ ಪ್ರಾಮಾಣಿಕ ಸೇವೆಗೈಯಲು ಇರುವಂತಹ ನಾಯಿ ನಾನು' -ಬೊಮ್ಮಾಯಿ
ಬೆಂಗಳೂರು ಜನವರಿ 4: 'ಪ್ರತಿಯೊಂದು ಪ್ರಾಣಿಗಳಿಗೂ ಒಂದೊಂದು ರೀತಿಯ ಗುಣಧರ್ಮಗಳಿವೆ. ಅದರಲ್ಲಿಯೂ ನಾಯಿ ಎಂದರೇ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಸಂಕೇತ. ನಾನು ಕನ್ನಡ ನಾಡಿನ ಜನರಿಗೆ ಪ್ರಾಮಾಣಿಕ ಸೇವೆಗೈಯಲು ಇರುವಂತಹ ನಾಯಿ, ಹಾಗೂ ಕನ್ನಡ ನಾಡಿನ ಜನರಿಗೆ ದ್ರೋಹ ಬಗೆಯುವರನ್ನು ವಿರೋಧಿಸುವ ನಾಯಿ ಸಹ' ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಪ್ರತಿಯೊಂದು ಪ್ರಾಣಿಗಳಿಗೂ ಒಂದೊಂದು ರೀತಿಯ ಗುಣಧರ್ಮಗಳಿವೆ. ಅದರಲ್ಲಿಯೂ ನಾಯಿ ಎಂದರೇ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಸಂಕೇತ. ನಾನು ಕನ್ನಡ ನಾಡಿನ ಜನರಿಗೆ ಪ್ರಾಮಾಣಿಕ ಸೇವೆಗೈಯಲು ಇರುವಂತಹ ನಾಯಿ, ಹಾಗೂ ಕನ್ನಡ ನಾಡಿನ ಜನರಿಗೆ ದ್ರೋಹ ಬಗೆಯುವರನ್ನು ವಿರೋಧಿಸುವ ನಾಯಿ ಸಹ. pic.twitter.com/QCkSQjTYOR
— Basavaraj S Bommai (@BSBommai) January 4, 2023
ಪ್ರಧಾನಿ ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿ ಮರಿ ರೀತಿ ಆಡ್ತಾರೆ ಅಂದಿದ್ದ ಸಿದ್ದರಾಮಯ್ಯ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 'ನಾಯಿ ನಿಯತ್ತಿನ ಪ್ರಾಣಿ, ಜನರಿಗೆ ನಾನು ನಿಯತ್ತಾಗಿ ಕೆಲಸ ಮಾಡ್ತಿದ್ದೀನಿ, ನಿಯತ್ತಿನ ಗುಣವನ್ನ ಜನರ ಪರವಾಗಿ ಉಳಿಸಿಕೊಂಡಿದ್ದೇನೆ' ಎಂದು ಬೊಮ್ಮಾಯಿ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಕೂಡ ಕಿಡಿಕಾರಿದ್ದಾರೆ.

'ಇದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರಿಸುತ್ತದೆ. ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದ್ದ ಸಿದ್ದರಾಮಯ್ಯ ಈ ರೀತಿ ಮಾತನಾಡಿರುವುದು ದುರದೃಷ್ಟಕರ' ಎಂದು ಶ್ರೀರಾಮುಲು ಹೇಳಿದ್ದಾರೆ. ಸಿದ್ದರಾಮಯ್ಯ ಬಹಿರಂಗವಾಗಿ ಬಿಜೆಪಿಯ ಕ್ಷಮೆ ಕೇಳಬೇಕು. ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ. ಬೆಕ್ಕು. ಜಿರಳೆ ಹಾಗೆ ಇರುತ್ತಾರೆ ಅಂತ ನಾವು ಹೇಳಲ್ಲ ಅಂತಾ ಕಾಲೆಳೆದಿದ್ದಾರೆ.












Click it and Unblock the Notifications