ಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು, ಫೆಬ್ರವರಿ 22: ಬಾಡಿಗೆ ತಾಯ್ತನದಿಂದ ಹೆಚ್ಚು ಹಣ ಸಂಪಾದಿಸಬಹುದು ಎನ್ನುವ ಭ್ರಮೆಯಿಂದ ಮಹಿಳೆಯೊಬ್ಬಳನ್ನು ಕರೆತಂದಿದ್ದ ಓರ್ವ 10 ಸಾವಿರ ರೂ ಕೊಡಲಿಲ್ಲ ಎಂದು ಆಕೆಯ ಮೇಲೆ ಆ್ಯಸಿಡ್ ಎರಚಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ನಾಗರಭಾವಿ 2 ನೇ ಹಂತದ ತಪಸಿ ಬಿಸ್ತಾನ್ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ. ಚಿರಂಜಿತ್ ಬಿಸ್ವಾಸ್ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ತಪಸಿ ಮತ್ತು ಬಿಸ್ವಾಸ್ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಂದು ವರ್ಷದ ಹಿಂದೆ ಚಿರಂಜಿತ್ ಸ್ನೇಹಿತನಒಬ್ಬ ಬಾಡಿಗೆ ತಾಯ್ತನದಿಂದ ಹಣ ಸಂಪಾದನೆ ಮಾಡಬಹುದು ಎಂದು ಹೇಳಿ ದಂಪತಿಯನ್ನು ನಗರಕ್ಕೆ ಕರೆ ತಂದಿದ್ದ.

Husband pours acid on his wife

ನಾಗರಬಾವಿ ವರದಾ ಫರ್ಟಿಲಿಟಿ ಕೇಂದ್ರಕ್ಕೆ ಕರೆದೊಯ್ದು ಡಾ. ಪ್ರಕಾಶ್ ಪರಿಚಯಿಸಿದ್ದ ಅಲ್ಲೇ ಹದಿನೈದು ದಿನ ಇರಿಸಿಕೊಂಡು ತಪಸಿ ಗರ್ಭದಿಂದ ವೈದ್ಯರು ಅಂಡಾಣು ತೆಗೆದುಕೊಂಡಿದ್ದರು. ಬಳಿಕ ಎರಡು ವಾರ ಬಿಟ್ಟು ಬರುವಂತೆ ತಿಳಿಸಿದ್ದರು.

ಫೆ. 10ಕ್ಕೆ ಚಿರಂಜಿತ್ ಪತ್ನಿಯನ್ನು ಕರೆದುಕೊಂಡು ವರದಾ ಫರ್ಟಿಲಿಟಿ ಕೇಂದ್ರದಲ್ಲಿ ಬಿಟ್ಟು ಊರಿಗೆ ಹೋಗಿದ್ದ, ದೂರವಾಣಿ ಕರೆ ಮಾಡಿ 10 ಸಾವಿರ ರೂ ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಹೇಳಿದ್ದ. ಅದಕ್ಕೆ ಪತ್ನಿ ಇಲ್ಲಿ ಯಾವುದೇ ಕೆಲಸವಾಗಿಲ್ಲ, ಹಣ ಕೊಟ್ಟಿಲ್ಲ ಎಂದು ಹೇಳಿದ್ದಳು. ಆತ ವಾಪಸ್ ಬಂದ ಮೇಲೆ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ ಬಳಿಕ ಆ್ಯಸಿಡ್ ದಾಳಿ ನಡೆಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+