ಮಹಿಳೆಗೆ ಪತಿ ನೀಡಿದ್ದ ಚಿನ್ನದ ಉಡುಗೊರೆ ರಹಸ್ಯ ಬಯಲು ಮಾಡಿದ ಸರಗಳ್ಳರು !
ಬೆಂಗಳೂರು, ಫೆಬ್ರವರಿ 04: ಆತನಿಗೆ ತನ್ನ ಹೆಂಡತಿ ಎಂದರೆ ಪಂಚ ಪ್ರಾಣ. ಸಾಯುವ ಮುನ್ನ ಕೂಡ ತನ್ನ ಹೆಂಡತಿಗೆ ಮಾಂಗಲ್ಯ ಸರವನ್ನು ಉಡುಗೊರೆ ನೀಡಿ ಕೊನೆಯುಸಿರು ಎಳೆದಿದ್ದ ! ಆಕೆ ಗಂಡ ನೀಡಿದ ಸರ ಎಂದು ಯಾವಾಗಲೂ ಕೊರಳಿಗೆ ಹಾಕಿಕೊಂಡಿದ್ದಳು ! ಆ ಮಾಂಗಲ್ಯ ಸರವನ್ನು ಸರಗಳ್ಳರು ಕದ್ದು ಮಾರಾಟ ಮಾಡಲು ಹೋದಾಗ ಮಹಿಳೆಗೆ ಗಂಡ ನೀಡಿದ್ದ ಚಿನ್ನದ ಸರದ ನಿಜವಾದ ಸತ್ಯ ಗೊತ್ತಾಗಿ ಆಕೆ ಮೂರ್ಛೆ ಹೋಗಿದ್ದಾಳೆ ! ಪೊಲೀಸರು ನಕ್ಕಿ ನಕ್ಕಿ ಸುಸ್ತಾಗಿದ್ದಾರೆ .
ಹೌದು. ಇದು ಯಾವುದೊ ಸಿನಿಮಾ ಸ್ಟೋರಿಯ ಎಳೆಯಲ್ಲ. ಬೆಂಗಳೂರಿನಲ್ಲಿ ನಡೆದಿರುವ ನೈಜ ಅಪರಾಧ ಪ್ರಕರಣದ ವಿವರ. ಮೈತುಂಬ ಸಾಲ ಮಾಡಿಕೊಂಡಿದ್ದ ಸಂತೋಷ್ ಮತ್ತು ಜೈಕುಮಾರ್ ಎಂಬುವರು ಸರಕಳ್ಳತನ ಮಾಡಿ ಸಾಲ ತೀರಿಸುವ ಉಪಾಯ ಉಡುಕಿಕೊಂಟಿದ್ದರು. ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬಳ ಸರ ಎಗರಿಸಿದ್ದರು. ಈ ಸರವನ್ನು ಕದ್ದ ಖುಷಿಯಲ್ಲಿ ಇಬ್ಬರು ಸರಗಳ್ಳ್ರು ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ತೆರಳಿದ್ದಾರೆ. ಇಬ್ಬರ ಬಗ್ಗೆ ಅನುಮಾನಗೊಂಡ ಚಿನ್ನದ ಅಂಗಡಿ ಮಾಲೀಕ ಮೈಕೋ ಲೇಔಟ್ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಚಿನ್ನದ ಅಂಗಡಿ ಮಾಲೀಕ ನಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂಬುದು ಅರಿತ ಕೂಡಲೇ ಇಬ್ಬರು ಕಳ್ಳರು ಚಿನ್ನದ ಸರ ಸಮೇತ ಎಸ್ಕೇಪ್ ಆಗಿದ್ದಾರೆ.

ಚಿನ್ನದ ಅಂಗಡಿಗೆ ಬಂದು ಹೋದ ಕಳ್ಳರ ಸಿಸಿಟಿವಿ ದೃಶ್ಯ ಆಧರಿಸಿ ಜಯಕುಮಾರ್ ಮತ್ತು ಸಂತೋಷ್ ನನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಿದ್ದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿನ್ನದ ಸರ ಕಳೆದುಕೊಂಡಿದ್ದ ಮಹಿಳೆಯನ್ನು ಕರೆಸಿ ಮಾಂಗಲ್ಯ ಸರವನ್ನು ಮಹಿಳೆಗೆ ಕೊಟ್ಟಾಗ ಆಕೆಗೆ ಆದ ಸಂತೋಷ ಪಾರೇ ಇರಲಿಲ್ಲ. ನನ್ನ ಗಂಡ ಸಾಯುವ ಮುನ್ನ ಪ್ರೀತಿಯಿಂದ ಮಾಂಗಲ್ಯ ಸರ ಮಾಡಿಸಿದ್ದು ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ವೇಳೆ ಪೊಲೀಸರು ಚಿನ್ನದ ಸರದ ಅಸಲಿ ಸತ್ಯವನ್ನು ಹೇಳಿದ್ದಾರೆ. ನಿಮ್ಮ ಗಂಡ ನಿಮಗೆ ನೀಡಿರುವುದು ಚಿನ್ನದ ಸರವಲ್ಲ, ಇದು ರೋಲ್ಡ್ ಗೋಲ್ಡ್ ಚಿನ್ನ. ಇದರಲ್ಲಿ ಒಂದು ಗ್ರಾಂ ಕೂಡ ಚಿನ್ನ ಇಲ್ಲ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಮಹಿಳೆ ಮೂರ್ಛೆ ಹೋಗೋದು ಬಾಕಿ. ಸತ್ತು ಸ್ವರ್ಗ ಸೇರಿರುವ ಗಂಡ ಸಾಯುವ ಮುನ್ನ ಕೂಡ ಮೋಸ ಮಾಡಿ ಇಹ ಲೋಕ ತ್ಯಜಿಸಿದ್ದಾನೆ. ಕೊನೆಗೆ ರೋಲ್ಡ್ ಗೋಲ್ಡ್ ಚಿನ್ನದ ಸರವನ್ನು ತೆಗೆದುಕೊಂಡು ಮಹಿಳೆ ಮನೆಗೆ ಹೋಗಿದ್ದಾಳೆ. ಅಂತೂ ಕಳ್ಳರು ಮಹಿಳೆಯೊಬ್ಬಳಿಗೆ ತನ್ನ ಗಂಡ ಸಾಯುವ ಮುನ್ನ ರೋಲ್ಡ್ ಗೋಲ್ಡ್ ಮಾಂಗಲ್ಯ ಸರ ನೀಡಿ ಚಿನ್ನದ ಸರ ಎಂದು ನಂಬಿಸಿದ್ದ ಸಂಗತಿ ಗೊತ್ತಾಗಿದೆ. ಈ ವಿಷಯ ತಿಳಿದ ಪೊಲೀಸರು ಏನು ಮಾಡಬೇಕು ಅಂತಲೂ ತೋಚಿಲ್ಲ

Recommended Video
ಸಾಲ ತೀರಿಸಲು ಚಿನ್ನದ ಸರ ಕದಿಯಲು ಹೋಗಿ ರೋಲ್ಡ್ ಗೋಲ್ಡ್ ಸರ ಕದ್ದು ಸಂತೋಷ್ ಮತ್ತು ಜೈಕುಮಾರ್ ನನ್ನು ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications