Bengaluru Girl Video: ಗಂಡ-ಹೆಂಡ್ತಿ ಮಲಗಿದ್ರೆ ಕಿಟಕಿಲಿ ಕದ್ದು ನೋಡ್ತಾರೆ! ಯುವತಿಯರು ಚಡ್ಡೀಲೆ ಓಡಾಡ್ತಾರೆ..

ಬೆಂಗಳೂರು, ಮೇ 08: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅಸಹ್ಯಕರ ಸನ್ನಿವೇಶಗಳು, ಸಂಗತಿಗಳು ಜರುಗುತ್ತಿವೆ ಎಂಬುದಕ್ಕೆ ಆಗಾಗ ನಿದರ್ಶನಗಳು ಸಿಗುತ್ತಲೇ ಇವೆ. ಮೊನ್ನೆಯಷ್ಟೇ ಯುವತಿಯೊಬ್ಬಳು ಚೂರು ನಾಚಿಕೆ ಇಲ್ಲದೇ ನಡು ರಸ್ತೆಯಲ್ಲಿ ಓಡಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪಿಜಿ ಯುವಕ, ಯುವತಿಯರ ಹೊಸ ಚಟುವಟಿಕೆಗಳು ಸಹ ಬಹಿರಂಗಗೊಂಡಿವೆ. ನಾಗರಿಕೆ ಮನೆಗಳ ಕಾಂಪೌಂಡ್ ಜಂಪ್ ಮಾಡಿ ಮಾಡಬಾರದ್ದ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಿಬಿಎಂಪಿ, ಪೊಲೀಸರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆ ಪಿಜಿ ನಿವಾಸಿ ಎನ್ನಲಾಗುವ ಯುವತಿ ಇತ್ತೀಚೆಗೆ ಹಾಡ ಹಗಲೇ ರಸ್ತೆಯಲ್ಲಿ ಬಟ್ಟೆ ಇಲ್ಲದೇ ಓಡಾಡಿದ್ದಳು. ಈ ಭಾಗದ ಕೆಲವು ಪಿಜಿಗಳಲ್ಲಿ ವಾಸಿಸುವವರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿದೆ. ಈ ಕುರಿತು ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ. ಬೇಸರ ಹೊರ ಹಾಕಿದ್ದಾರೆ. ಪಿಜಿ ಹುಡುಗರು ಅಕ್ಕಪಕ್ಕದ ಮನೆಯ ಕಾಪೌಂಡ್ ಬಿಲ್ಡಿಂಗ್ ಜಂಪ್ ಮಾಡುತ್ತಾರೆ ಎಂದು ದೂರಿದ್ದಾರೆ.

HSR Layout Residents Complain About Harassment by Illegal PGs Girls Walk Around in Shorts Video

ಇವರಿಗೆ ಇಣುಕಿ ನೋಡುವ ಚಟ

ಇಲ್ಲಿನ ಪಿಜಿ ಯುವಕ, ಯುವತಿಯರ ಹಾವಳಿ ಹೆಚ್ಚಾಗಿದೆ. ನಿವಾಸಿಗಳು ಮನೆಯಲ್ಲಿ ಗಂಡ ಹೆಂಡತಿ ಇಲ್ಲವೇ ಯುವತಿಯರು ಮಲಗಿದ್ದರೆ ಕೋಣೆಯ ಕಿಟಕಿಯಲ್ಲಿ ಇಣುಕಿ ನೋಡುತ್ತಾರೆ. ಇಂತಹ ಸಂಗತಿಗಳು ಹೆಚ್ಚಾಗಿವೆ. ಈ ಸಂಬಂಧ ಕೆಲವು ಪ್ರಕರಣಗಳಲ್ಲಿ ಹುಡುಗರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರಿಗೆ ತಿಳಿಸಿದ್ದೆವು.

ಎಚ್‌ಎಸ್‌ಆರ್ ಬಡಾವಣೆಯ ಆಗರ ಕೆರೆ ಅಕ್ಕಪಕ್ಕದಲ್ಲಿ ಮನೆಗೆಂದು ಬಿಲ್ಡಿಂಗ್ ಕಟ್ಟುತ್ತಾರೆ. ಅಮೇಲೆ ಅವನ್ನು ಪಿಜಿ ಬಾಡಿಗೆಗೆ ನೀಡುತ್ತಾರೆ. ಸಾರ್ವಜನಿಕರಿಗೇನು ತೊಂದರೆ ಆಗುವುದಿಲ್ಲ ಎಂದು ಮಾಲೀಕರೇನೋ ಹೇಳುತ್ತಾರೆ. ಬಾಡಿಗೆಗೆ ಬಿಟ್ಟ ಮೇಲೆ ಅವರಿತ್ತ ಸುಳಿಯುವುದೇ ಇಲ್ಲ. ಇದರಿಂದ ನಾವು ಸಮಸ್ಯೆ ಎದುರಿಸುವಂತಾಗಿದೆ. ರಾತ್ರಿ ಅಲ್ಲ ಹಗಲೂ ಹೊತ್ತಿನಲ್ಲಿ ಮನೆ ಮುಂದಿನ ರಸ್ತೆಯಲ್ಲಿ ಓಡಾಡುವಂತಿಲ್ಲ, ಹಾಗಿದೇ ಪರಿಸ್ಥಿತಿ ಎಂದು ಸ್ಥಳೀಯರು ದೂರುತ್ತಿದ್ದಾರೆ.

Take a Poll

ಅರ್ಧಮರ್ಧ ಬಟ್ಟೆಯಲ್ಲೇ ಓಡಾಡುತ್ತಾರೆ..

ಯುವತಿಯರು ಸಣ್ಣ ಸಣ್ಣ ಬಟ್ಟೆ, ಚಡ್ಡಿ, ಬ್ರಾ ತೊಟ್ಟು ಓಡಾಡುತ್ತಾರೆ. ಸಿಗರೇಟ್ ಸೇದುತ್ತಾರೆ. ಅವರನ್ನು ನೋಡಲು ಬರುವ ಯುವಕರು ಇಲ್ಲಿ ನಿಂತು ಮಾತನಾಡಿದರೆ ಹೋಗಲಿ ಬಿಡಿ ಎನ್ನಬಹುದು. ಅವರು ತಬ್ಬಿಕೊಂಡು ಮುತ್ತಿಡುತ್ತಾರೆ. ಅನುಚಿತವಾಗಿ ವರ್ತಿಸುತ್ತಾರೆ. ಹೀಗಾಗಿ ನಾವು ನಮ್ಮ ಮನೆ ಹೆಣ್ಣುಮಕ್ಕಳು ಯುವಕರನ್ನು ಹೊರ ಕಳುಹಿಸುವುದಿಲ್ಲ. ಇದೆಲ್ಲ ಸಾಮಾಜಿಕವಾಗಿ ತುಂಬಾ ಕಿರಿ ಕಿರಿ ಉಂಟು ಮಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅಕ್ರಮ ಪಿಜಿಗಳ ವಿರುದ್ಧ ಕ್ರಮವಾಗಿಲ್ಲ

ಈ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಪೊಲೀಸರಿಗೂ ದೂರಿದ್ದೇವೆ. ಯಾರಿಗೇ ದೂರು ಕೊಟ್ಟರು ಉಪಯೋಗವಾಗಿಲ್ಲ. ಪೊಲೀಸರು ಬರ್ತಾರೆ! ಬಂದಾಗ ಎಚ್ಚರಿಕೆ ಕೊಟ್ಟು ಹೋಗುತ್ತಾರೆ. ರಾತ್ರಿ ಹೊಯ್ಸಳ ಸೈರನ್ ಕೇಳಿದರೂ ಇವರು ಖ್ಯಾರೆ ಎನ್ನಲ್ಲ. ಹಾಗೆ ನಡುರಾತ್ರಿವರೆಗೂ ನಿಂತಿರುತ್ತಾರೆ. ಅಕ್ರಮ ಪಿಜಿ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದರೆ ದುಟ್ಟು ಕೊಟ್ಟು ಅವರ ಬಾಯಿ ಮುಚ್ಚಿಸಿರಬಹುದ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಆಗಾಗ ಪಿಜಿಗಳಲ್ಲಿ ಯಾದ್ದಾದರೂ ಬರ್ತಡೆ ಇದ್ದರೆ ತಡರಾತ್ರಿವರೆಗೆ ಜೋರು ಸದ್ದು ಮಾಡಿಕೊಂಡು ತೊಂದರೆ ಕೊಡುತ್ತಾರೆ. ರಾತ್ರಿ 2 ಗಂಟೆಯಾದರೂ ಸಹ ಶಬ್ದ ನಿಲ್ಲಲ್ಲ. ಅವರ ಈ ಪ್ರವೃತ್ತಿಯಿಂದ ಜನರ ರೋಸಿಹೋಗಿದ್ದಾರೆ. ನಾವು ನಿತ್ಯವು ಯಾತನೆ ಅನುಭವಿಸುತ್ತಿದ್ದೇವೆ. ಸರ್ಕಾರ, ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಪಿಜಿ ಖಾಲಿ ಮಾಡಿಸುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+