Get Updates
Get notified of breaking news, exclusive insights, and must-see stories!

ಪೆಟ್ರೋಲ್‌ ಬಂಕ್‌ನಲ್ಲಿ ಮೋಸ ಹೋಗದೆ ಇರುವುದು ಹೇಗೆ ? ಇಲ್ಲಿದೆ ಸಿಂಪಲ್‌ ಟಿಪ್ಸ್‌

Petrol Pump Fraud: ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಈಗಾಗಲೇ ದುಬಾರಿಯಾಗಿದೆ. ಆದರೆ, ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದಿಗೂ ಮೋಸ ನಡೆಯುವ ಬಗ್ಗೆ ವಾಹನ ಸವಾರರಿಂದ ಆರೋಪಗಳು ಕೇಳಿ ಬರುತ್ತವೆ. ಪೆಟ್ರೋಲ್‌ ಬಂಕ್‌ಗಳಲ್ಲಿ ಹೇಗೆಲ್ಲ ಮೋಸ ನಡೆಯುತ್ತದೆ. ಅದರಿಂದ ನೀವು ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಟ್ರಿಕ್ಸ್‌ ಇಲ್ಲಿದೆ ಓದಿ.

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ನಿರೀಕ್ಷೆಗೂ ಮೀರಿ ದುಬಾರಿಯಾಗಿದೆ. ಸದ್ಯಕ್ಕಂತಲೂ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈ ನಡುವೆ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲಸ ಮಾಡುವವರು ಸಹ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎನ್ನುವುದು ವಾಹನ ಸವಾರರ ಆರೋಪವಾಗಿದೆ. ಈ ರೀತಿ ಮೋಸ ಹೋಗಬಾರದು ಎಂದರೆ ನೀವು ಪೆಟ್ರೋಲ್‌ ಅಥವಾ ಡೀಸೆಲ್ ಹಾಕಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಎಲ್ಲಾ ಪೆಟ್ರೋಲ್‌ ಬಂಕ್‌ನಲ್ಲಿ ಇರುವವರು ಕಳ್ಳರು, ಎಲ್ಲರೂ ಮೋಸ ಮಾಡ್ತಾರೆ ಎನ್ನುವುದು ಇದರ ಅರ್ಥವಲ್ಲ. ಜಗತ್ತಿನಲ್ಲಿ ಒಳ್ಳೆಯವರು ಕೆಟ್ಟವರು ಅಂತ ಎರಡು ವರ್ಗ ಇದೆಯಲ್ಲವೇ. ಅದೇ ತರ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲವು ಮೋಸಗಾರರು ಇದ್ದಾರೆ.

How not to get cheated at the petrol pump Here are some simple tips

ಜೀರೋ ಮಾಡಿಯೇ ಹಾಕಿಸಿ: ಪೆಟ್ರೋಲ್‌ ಅಥವಾ ಡೀಸೆಲ್ ಹಾಕಿಸುವಾಗ ಯಾವುದೇ ಕಾರಣಕ್ಕೂ ಜೀರೋ (ಬೋರ್ಡ್‌ನಲ್ಲಿ ಸೊನ್ನೆ) ಇಲ್ಲದೆ ಪೆಟ್ರೋಲ್‌ ಹಾಕುವುದಕ್ಕೆ ಬಿಡಬೇಡಿ. ಮುಂದೆ ಇದ್ದ ವಾಹನಕ್ಕೆ ನೂರು ರೂಪಾಯಿ ಹಾಕಿದ್ದೀನಿ ಸರ್‌. ನಿಮ್ಗೆ ಸೇರಿಸಿ ಹಾಕ್ತೀನಿ ಅಂತ ಹೇಳುವುದು ಇದೆ. ಅಂದ್ರೆ ನೀವು 400 ರೂಪಾಯಿ ಹಾಕಿ ಅಂತ ಕೇಳಿದ್ರೆ ಅವರು ಮೊದಲಿದ್ದವರಿಗೆ ನೂರು ರೂಪಾಯಿ ಹಾಕಿದ್ದೆ. ನಿಮ್ಗೆ 500 ರೂಪಾಯಿ ಹಾಕ್ತೀನಿ ಅಂತ ಹೇಳ್ತಾರೆ. ಇದರಲ್ಲೂ ಕೆಲವೊಂದು ಟ್ರಿಕ್ಸ್‌ಗಳಿವೆ. ಹೀಗಾಗಿ, ಜೀರೋದಿಂದಲೇ ಹಾಕಿಸಿಕೊಳ್ಳಿ.

ಗೊಂದಲ ಸೃಷ್ಟಿಸಿ, ಯಾಮಾರಿಸುತ್ತಾರೆ: ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಗೊಂದಲ ಸೃಷ್ಟಿ ಮಾಡ್ತಾರೆ. ಹಿಂಗೆ ಮಾಡಿ ಪೆಟ್ರೋಲ್‌ ಅಥವಾ ಡೀಸೆಲ್‌ ಕಡಿಮೆ ಹಾಕಿದರೂ, ಪೂರ್ತಿ ಕಾಸು ತಗೊಂಡು ಮೋಸ ಮಾಡ್ತಾರೆ. ಪೆಟ್ರೋಲ್ ಬಂಕ್‌ಗೆ ಹೋಗಿ ನೀವು 600 ರೂಪಾಯಿಗೆ ಪೆಟ್ರೋಲ್ ಅಥವಾ ಡಿಸೇಲ್ ಹಾಕಿ ಅಂತ ಕೇಳ್ತೀರಿ ಅಂತ ಇಟ್ಟುಕೊಳ್ಳಿ.

ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ನಿಮಗೆ ಮೊದಲು 200 ರೂಪಾಯಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕ್ತಾನೆ. ಸರ್‌ 200 ಆಗಿದೆ ನೋಡಿ ಅಂತಾನೆ. 200 ಅಲ್ಲ ಕಣ್ರೀ 600 ಹಾಕ್ರಿ ಅಂದ್ರೆ ಮೊದಲಿಂದ ಮೀಟರ್ ಚಲಾಯಿಸದೆ, 200 ಆಗಿದೆ ಸರ್‌ ಬಾಕಿ 400 ರೂ.ಗೆ ಹಾಕುತ್ತೇನೆ ಎಂದು ಬಾಕಿ ಹಣಕ್ಕೆ ಪೆಟ್ರೋಲ್ ಅಥವಾ ಡೀಸೆಲ್‌ ಹಾಕುತ್ತಾನೆ. ಅವನು ಜೀರೋ ಮಾಡಿದ್ರೆ ಮಾತ್ರ ಬಾಕಿ 400 ರೂಪಾಯಿ ಆಗುತ್ತದೆ. ಜೀರೋ ಆಗಿಲ್ಲ ಅಂದ್ರೆ ಒಟ್ಟು ತೋರಿಸುವಾಗ (ಬೋರ್ಡ್‌ನಲ್ಲಿ) 600 ಆಗಬೇಕು.

ಇದನ್ನು ನೀವು ಗಮನವಿಟ್ಟು ನೋಡಿಕೊಳ್ಳಬೇಕು. ಈ ರೀತಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದರೆ, ಸಾಕು ಬಿಡಿ ಅನ್ನಿ. ಇಲ್ಲವೇ ಜೀರೋ ಮಾಡಿ ಮೊದಲಿಂದ ಹಾಕಿ ಅಂತ ಕೇಳಿ. ಇದರಲ್ಲಿ ಕೆಲವೊಮ್ಮೆ ತಪ್ಪಾಗಿ ಕೇಳಿಸಿಕೊಂಡು ಸಹ ಹಾಕಿರುವ ಸಾಧ್ಯತೆ ಇರಬಹುದು. ಒಮ್ಮೆಗೆ ಒಂದು ನಿರ್ಧಾರಕ್ಕ ಬರಬೇಡಿ. ಆದರೆ, ಪರಿಶೀಲನೆ ಮಾಡಿ.

ದುಡ್ಡು ಲೆಕ್ಕದಲ್ಲೂ ಮೋಸ: ಇದು ತೀರ ಖತರ್ನಾಕ್‌ ಮೋಸಗಳಲ್ಲಿ ಒಂದು. ನೀವು ಸಾವಿರ ರೂಪಾಯಿ ಕೊಟ್ಟು 200 ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸಿಕೊಂಡಿದ್ದೀರಿ ಎಂದರೆ, ಬಾಕಿ 800 ರೂಪಾಯಿ ಕೊಡ್ಬೇಕಲ್ವಾ. ಕೆಲವೊಮ್ಮೆ ಅವರು 700 ಅಥವಾ 600 ರೂಪಾಯಿ ಮಾತ್ರ ಕೊಡ್ತಾರೆ. ನೂರು ರೂಪಾಯಿ ನೋಟುಗಳನ್ನು ಎಣಿಸುವಾಗ ವೇಗವಾಗಿ ಇನ್ನೂರು ಮುನ್ನೂರು ಅಂತಾರೆ. ಒಂದು ನೋಟ ಎಗರಿಸಿ ಲೆಕ್ಕ ಜೋರಾಗಿ ಹೇಳ್ತಾರೆ ಕಣ್ಣ ಮುಂದೆ ನೋಡಿದ್ದು ತಾನೆ ಸರಿ ಇರುತ್ತೆ ಅಂತ ಎಣಿಸದೆ ಜೋಬಿಗೆ ಇಳಿಸಿದರೆ, ನಿಮಗೆ ನೂರು ಅಥವಾ ಇನ್ನೂರು ಲಾಸ್‌ ಫಿಕ್ಸ್‌. ಇದು ಪೆಟ್ರೋಲ್‌ ಬಂಕ್‌ಗಳಲ್ಲಿ ಮಾತ್ರವಲ್ಲ ಹಲವು ಜಾಗದಲ್ಲಿ ನಡೆಯುತ್ತೆ.

ಎರಡು ವ್ಯತ್ಯಾಸ ಗಮನಿಸಿ: ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲೂ ಪೆಟ್ರೋಲ್‌ ಅಥವಾ ಡೀಸೆಲ್‌ ಪ್ರಮಾಣ ಹಾಗೂ ಬೆಲೆಯ ಎರಡು ಕಾಲಂ ಇರುತ್ತದೆ. ಈ ಎರಡೂ ಕಾಲಂ ಹಾಗೂ ವ್ಯತ್ಯಾಸವನ್ನು ನೀವು ಗಮನಿಸಬೇಕು. ಕೆಲವರು ಬೆಲೆ ಹಾಗೂ ಪೆಟ್ರೋಲ್‌ ಅಥವಾ ಡೀಸೆಲ್‌ ಪ್ರಮಾಣದ ವ್ಯತ್ಯಾಸದಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಇದನ್ನೇ ಕೆಲವು ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಲಾಭವಾಗಿಸಿಕೊಳ್ಳುತ್ತಾರೆ. ಒಂದೆರಡು ಕ್ಷಣ ಕಣ್ತಪ್ಪಿದರೂ ಬೆಲೆ ಫೀಡ್‌ ಮಾಡಿ ಆಗಿದೆ ಅಂತಾರೆ. ನಿಮಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿದ ಮೇಲೆ ಬೆಲೆ ಬ್ಲಿಂಕ್‌ ಆಗಲ್ಲ. ಒಂದೇ ರೀತಿ ಇರುತ್ತೆ. ಬೆಲೆ ಸಂಖ್ಯೆ ಬ್ಲಿಂಕ್‌ ಆಗ್ತಿದೆ ಎಂದರೆ ಸಿಬ್ಬಂದಿಯೇ ಫೀಡ್‌ ಮಾಡಿದ್ದಾರೆ ಅಂತ ಅರ್ಥ.

ಕೋಡ್‌ ವರ್ಡ್‌ ಬಳ್ಸತಾರೆ: ಕೆಲವು ಪೆಟ್ರೋಲ್‌ ಬಂಕ್‌ಗಳ ಸಿಬ್ಬಂದಿ ಕೆಲವು ಕೋಡ್‌ ವರ್ಡ್‌ಗಳನ್ನು ಬಳಸುವುದು ಇದೆ. ನಿಮ್ಮನ್ನು ಮೋಸ ಮಾಡುವುದಕ್ಕೆ ಬಳಸುವ ಟ್ರಿಕ್ಸ್‌ ಇದೆ. ಉದಾ: ಖಾಲಿ ಸೋಡ ಅಂತ. ಈ ಪದ ಬಳಸಿ ಪರಸ್ಪರ ಅವರೇ ಮಾತನಾಡಿಕೊಳ್ಳುತ್ತಾರೆ. ಈ ಪದಗಳನ್ನು ಬಳಸಿದರೆ, ಈ ಗ್ರಾಹಕನಿಗೆ ಮೋಸ ಮಾಡಬಹುದಾ ಅಂತ ಅವರವರೇ ಕೇಳಿಕೊಳ್ಳುವುದು. ಒಬ್ಬ ಗ್ರಾಹಕನಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕುವುದಕ್ಕೆ ಒಬ್ಬರು ಮೂವರು ಸಿಬ್ಬಂದಿ ಬಂದು ನಿಂತಿದ್ದಾರೆ ಎಂದರೆ ಮೋಸ ಮಾಡುವ ಮುನ್ಸೂಚನೆ ಆಗಿರುವ ಸಾಧ್ಯತೆ ಇರುತ್ತದೆ.

ಬಹುತೇಕ ಮಾಲೀಕರಿಗೆ ಗೊತ್ತಿರಲ್ಲ: ಈ ರೀತಿ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದಿಗೂ ಮೋಸ ಮಾಡುವುದು ಮುಂದುವರಿದಿದೆ ಎನ್ನುವ ಆರೋಪವಿರುವುದು ನಿಜ. ಆದರೆ, ಶೇ99.99% ರಷ್ಟು ಬಂಕ್‌ಗಳ ಮಾಲೀಕರಿಗೆ ಅವರ ಸಿಬ್ಬಂದಿ ಗ್ರಾಹಕರಿಗೆ ಮೋಸ ಮಾಡ್ತಾರೆ ಅಂತ ಗೊತ್ತಿರಲ್ಲ. ಸಾಮಾನ್ಯವಾಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಬೆಳಿಗ್ಗೆ ಅಥವಾ ಸಂಜೆ ವೇಳೆ ಶಿಫ್ಟ್‌ ಬದಲಾಗುತ್ತೆ. ಶಿಫ್ಟ್‌ ಬದಲಾಗುವಾಗ ಮಾತ್ರ ಆ ದಿನ ಎಷ್ಟು ಪೆಟ್ರೋಲ್‌ ಅಥವಾ ಡೀಸೆಲ್‌ ಸೇಲ್‌ ಆಗಿದೆ.

ಅದಕ್ಕೆ ಎಷ್ಟು ಹಣ ಬರಬೇಕು ಅಂತ ಲೆಕ್ಕ ಹಾಕ್ತಾರೆ. ಇದರ ನಡುವೆ ಕೆಲವು ಬಂಕ್‌ಗಳಲ್ಲಿನ ಕೆಲವು ಸಿಬ್ಬಂದಿ ಮೋಸ ಮಾಡಿ, ಆ ಹಣವನ್ನು ಅವರ ಜೇಬಿಗೆ ಇಳ್ಸತಾರೆ ಎನ್ನಲಾಗುತ್ತದೆ. ಮೇಲೆ ಹೇಳಿದ ಎಲ್ಲವೂ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಎಲ್ಲರೂ ಮಾಡುವುದಿಲ್ಲ. ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲವು ಸಿಬ್ಬಂದಿ ಮಾಡುವುದು ಇದೆ ಎನ್ನುವ ಆರೋಪ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+