• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂಟು ವರ್ಷದಿಂದ ಪೊಲೀಸರ ಕೈಗೆ ಸಿಗದೇ ಕಳವು ಮಾಡ್ತಿದ್ದ ಕಳ್ಳ ಸೆರೆ

|

ಬೆಂಗಳೂರು, ಫೆಬ್ರವರಿ 24: ಕಳೆದ ಎಂಟು ವರ್ಷದಿಂದ ಬೆಂಗಳೂರಿನಲ್ಲಿ ಪೊಲೀಸರ ಕೈಗೆ ಸಿಗದೇ ಮನೆಗಳಲ್ಲಿ ಕದಿಯುತ್ತಿದ್ದ ಉತ್ತರ ಪ್ರದೇಶ ಮೂಲದ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 61 ಲಕ್ಷ ರೂ. ಮೌಲ್ಯದ ಒಂದು ಕೆ.ಜಿಗೂ ಅಧಿಕ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಖುರ್ಷಿದ್ ಬಂಧಿತ ಆರೋಪಿ. ಮನೆ ಗಳ್ಳತನ ಮಾಡುವ ವೇಳೆ ಈತನನ್ನು ಹಿಡಿಯಲು ಯತ್ನಿಸಿದರೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದ. ಕಳೆದ 2013 ರಿಂದ ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ. ಎಂಟು ವರ್ಷದ ಬಳಿಕ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಖುರ್ಷಿದ್ ಬಗ್ಗೆ ಖಚಿತ ಮಹಿತಿ ಪಡೆದಿದ್ದ ಸಿಸಿಬಿ ಇನ್‌ಸ್ಪೆಕ್ಟರ್ , ಹತ್ತು ದಿನದಿಂದ ದೆಹಲಿ, ಹರ್ಯಾಣ ಸುತ್ತಾಡಿದ್ದರು. ಬಳಿಕ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿದ್ದಾರೆ. ಈ ವೇಳೆ ಪಿಸ್ತೂಲು ಹಾಗೂ ಗುಂಡು ಸಿಕ್ಕಿದೆ.

   40 ಲಕ್ಷ ಟ್ರ್ಯಾಕ್ಟರ್ ಗಳೊಂದಿಗೆ ಸಂಸತ್ ಮುತ್ತಿಗೆ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್ | Oneindia Kannada

   ಆರೋಪಿ ಖುರ್ಷಿದ್ ನನ್ನು ವಿಚಾರಣೆ ನಡೆಸಿದಾಗ, ಬೆಂಗಳೂರಿಗೆ ಬಂದು ಕಳ್ಳತನ ಮಾಡುತ್ತಿದ್ದ. ಇಲ್ಲಿಂದ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ. ಇನ್ನು ಖದ್ದ ಮಾಲನ್ನು ದೆಹಲಿಯ ವೀರೇಂದ್ರ ಕುಮಾರ್ ಎಂಬಾತನ ಮೂಲಕ ವಿಲೇವಾರಿ ಮಾಡಿಸುತ್ತಿದ್ದ. ವೀರೇಂದ್ರ ಕುಮಾರ್ ನನ್ನು ಸಹ ದೆಹಲಿಯಲ್ಲಿ ವಿಚಾರಣೆಗೆ ಒಳಪಡಿಸಿ ಕದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಕಳ್ಳತನ ಮಾಡಿದ್ದು, ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಅವರ ಕಾರ್ಯ ಶೈಲಿಯನ್ನು ಸಿಸಿಬಿ ಪೊಲೀಸರು ಪ್ರಶಂಸೆ ಮಾಡಿದ್ದಾರೆ.

   English summary
   CCB police was arrested a House theft thieve in Uttar Pradesh and recovered 1 kg gold know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X