ಲವ್ ಸೋಗಿನಲ್ಲಿ 'ಹನಿ ಟ್ರ್ಯಾಪ್' ಜಾಲ ರಹಸ್ಯ ಕಾರ್ಯಾಚರಣೆ!
ಬೆಂಗಳೂರು, ಅ. 11: ಲವ್ ಹೆಸರಿನಲ್ಲಿ ಟೆಕ್ಕಿಗಳ ಮನಸು ಕದಿಯುವ ಸೋಗಿನಲ್ಲಿ ಹನಿಟ್ರ್ಯಾಪ್ ಮಾಡಿ ದರೋಡೆ ಮಾಡುವ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ಹಣ ಇರುವ ಟೆಕ್ಕಿಗಳೇ ಈ ಗ್ಯಾಂಗ್ ನ ಟಾರ್ಗೆಟ್. ಲವ್ ಮಾಡುವ ಸೋಗಿನಲ್ಲಿ ಪರಿಚಯವಾದ ಯುವತಿ ತನ್ನ ಗ್ಯಾಂಗ್ ಜತೆ ಸೇರಿಕೊಂಡು ಸಾಫ್ಟ್ ವೇರ್ ಇಂಜಿನಿಯರ್ ಗೆ ಹೆದರಿಸಿ 37 ಸಾವಿರ ರೂ. ನಗದು ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಾರ್ವೆಭಾವಿ ಪಾಳ್ಯದಲ್ಲಿ ನೆಲೆಸಿದ್ದ ಟೆಕ್ಕಿ ಯೋಗಾನಂದ ರೆಡ್ಡಿ ಹನಿಟ್ರ್ಯಾಪ್ ಗೆ ಒಳಗಾಗಿ ಹಣ ಕಳೆದುಕೊಂಡ ವ್ಯಕ್ತಿ. ನೇಹಾ ಫಾತಿಮಾ ಎಂದು ಪರಿಚಯಿಸಿಕೊಂಡಿದ್ದ ಯುವತಿ ಮತ್ತು ಇತರೆ ಐವರು ಮೋಸ ಮಾಡಿದ ಗ್ಯಾಂಗ್. ಯೋಗಾನಂದ ರೆಡ್ಡಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ನೀಡಿದ್ದಾರೆ.
ಯೋಗಾನಂದರೆಡ್ಡಿಗೆ ಪರಿಚಯವಾಗಿದ್ದ ಯುವತಿ, ಸ್ವಂತ ಮನೆಗೆ ಕರೆದುಕೊಂಡು ಹೋಗಿದ್ದಳು. ಔಟಿಂಗ್ ಹೋಗೋಣ ಎಂದು ಯೋಗಾನಂದ್ ನನ್ನು ಮನೆಗೆ ಕರೆದುಕೊಂಡು ಹೋಗಿ ಲಾಕ್ ಮಾಡಿಕೊಂಡಿದ್ದ ಫಾತಿಮಾ ಮತ್ತು ಯೋಗಾನಂದ್ ಬಿಯರ್ ಕುಡಿದಿದ್ದರು. ಈ ವೇಳೆ ಇಬ್ಬರೂ ಅರೆ ಬೆತ್ತಲೆಯಲ್ಲಿರುವಾಗಲೇ, ಫಾತೀಮಾ ನಿಡಿದ ಸಂದೇಶದ ಮೇರೆಗೆ ನಾಲ್ವರು ಹನಿಟ್ರ್ಯಾಪ್ ಗ್ಯಾಂಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅರಬೆಲೆತ್ತಲೆಯಲ್ಲಿದ್ದ ಯೋಗಾನಂದ್ ಅವರ ಪೋಟೋ ಹಾಗೂ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದಾರೆ.

ಗ್ಯಾಂಗ್ ನ ಸದಸ್ಯನೊಬ್ಬ ನನ್ನ ತಂಗಿ ಜೊತೆ ಏನು ಮಾಡುತ್ತಿದ್ದೀಯ. ನಿನ್ನ ಫೋಟೋ ಮತ್ತು ವಿಡಿಯೋ ನಿಮ್ಮ ಪೋಷಕರಿಗೆ ಕಳುಹಿಸುತ್ತೇವೆ. ನಿನ್ನ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ವೈರಲ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ.
ಫಾತಿಮಾ ಮನೆಗೆ ಹೋಗಿ ಲಾಕ್ ಆಗಿದ್ದ ಯೋಗಾನಂದ್ ಬೆಚ್ಚಿ ಬಿದ್ದಿದ್ದಾನೆ. ಈ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ಹಾಕಬಾರದು ಎಂದರೆ ಹತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದರೆ ನಿನ್ನ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಮರ್ಯಾದೆ ತೆಗೆಯುವುದಾಗಿ ಈ ಗ್ಯಾಂಗ್ ಹೆದರಿಸಿದೆ. ಹತ್ತು ಲಕ್ಷ ರೂ. ನೀಡಲು ನಿರಾಕರಿಸಿದ ಟೆಕ್ಕಿ ಬಳಿಯಿದ್ದ 37 ಸಾವಿರ ರೂ. ನಗದು ಹಣ, ಟಾಟಾ ನೆಕ್ಸಾನ್ ಕಾರು ಕೀ, ಒನ್ ಪ್ಲಸ್ ಪೋನ್ ಹಾಗೂ ಮತ್ತಿತರ ವಸ್ತು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೋಸ ಹೋದ ಟೆಕ್ಕಿ ಯೋಗಾನಂದ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮೈಕೋ ಲೇಔಟ್ ಪೊಲೀಸರು ತನಿಖೆ ನಡೆಸುತ್ತದ್ದಾರೆ. ಹನಿ ಟ್ರ್ಯಾಪ್ ಗ್ಯಾಂಗ್ ನ ಸದಸ್ಯೆಗಾಗಿ ಶೋಧ ನಡೆಸುತ್ತಿದ್ದಾರೆ.

ಹನಿ ಟ್ರ್ಯಾಪ್ ಹೊಸ ಜಾಲ: ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ, ಕೆಲವು ವೆಬ್ ತಾಣದಲ್ಲಿ ಬಾಡಿ ಮಸಾಜ್ ಸೇವೆ ಒದಗಿಸುವ ನೆಪದಲ್ಲಿ ಅಶ್ಲೀಲ ದಂಧೆ ಹುಟ್ಟು ಹಾಕಿವೆ. ಬೆಂಗಳೂರು ಸೇರಿದಂತೆ ಮಹಾ ನಗರಗಳಲ್ಲಿ ಆನ್‌ಲೈನ್ ವೇಶ್ಯಾವಾಟಿಕೆ ದಂಧೆ ಜಾಲ ಊಹೆಗೂ ಮೀರಿ ತಲುಪಿದೆ. ಮಸಾಜ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಭಾಗವಾಗಿಯೇ ಇದೀಗ ಹನಿಟ್ರ್ಯಾಪ್ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಯುವತಿಯರ ಸಂಪರ್ಕ ಪಡೆಯುವರನ್ನೇ ಟಾರ್ಗೆಟ್ ಮಾಡುತ್ತಾರೆ. ಅಶ್ಲೀಲ ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟು ವಸೂಲಿ ಮಾಡುವ ದೊಡ್ಡ ಜಾಲಗಳು ಸಕ್ರಿಯವಾಗಿವೆ. ಅದರಲ್ಲೂ ಉತ್ತರ ಪ್ರದೇಶ ಹಾಗೂ ಬಾಂಗ್ಲಾದೇಶಿಯರೇ ಹೆಚ್ಚಾಗಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೂರಾರು ಮಂದಿ ಮರ್ಯದೆಗೆ ಹೆದರಿ ಹನಿ ಟ್ರ್ಯಾಪ್ ಗೆ ಒಳಗಾದವರು ದೂರು ಕೊಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಅಮಾಯಕರನ್ನು ಟಾರ್ಗೆಟ್ ಮಾಡಿ ವಸೂಲಿ ಮಾಡುವ ದಂಧೆ ಸಕ್ರಿಯವಾಗಿದೆ.

Recommended Video
ವೈಟ್ ಫೀಲ್ಡ್ ನಲ್ಲಿ ಬಂಧನ: ಇತ್ತೀಚೆಗೆ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ್ದ ಗ್ಯಾಂಗ್ ನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದರು. ಆಂಧ್ರ ಪ್ರದೇಶ ಮೂಲದ ಇಂಜಿನಿಯರ್ ಬಳಿ 50 ಲಕ್ಷ ರೂ. ಸುಲಿಗೆ ಮಾಡಿತ್ತು. ಇತ್ತೀಚೆಗೆ ಉಳ್ಳಾಲ ಉಪ ನಗರದಲ್ಲಿ ದಂಪತಿಯನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದರು. ಆನ್‌ಲೈನ್ ನಲ್ಲಿ ವೇಶ್ಯಾವಟಿಕೆ ದಂಧೆ ನಡೆಸುವ ಸೋಗಿನಲ್ಲಿ ಗಿರಾಕಿಗಳ ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಸಂಗತಿ ತನಿಖೆ ವೇಳೆ ಬಯಲಿಗೆ ಬಂದಿತ್ತು. ಮಸಾಜ್, ಆನ್‌ಲೈನ್ ಮಾನನಿಯರ ಆಸೆಗೆ ಬಿದ್ದರೆ ಒಂದು ದಿನ ಹನಿಟ್ರ್ಯಾಪ್ ಗ್ಯಾರೆಂಟಿ. ಹೀಗಾಗಿ ಸಾರ್ವಜನಿಕರು ಅದರಲ್ಲೂ ಟೆಕ್ಕಿ ಸಮುದಾಯ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಪೊಲೀಸರು ಸಲಹೆ ನೀಡಿದ್ದಾರೆ.











Click it and Unblock the Notifications