ದಿಸ್‌ ಈಸ್‌ ಫಕಿ*ಗ್‌ ಇಂಡಿಯಾ, ನೀವೆಲ್ಲ ರೇಸಿಸ್ಟ್‌ಗಳು: ಕನ್ನಡಿಗನಿಗೆ ಹಿಂದಿ ಮಹಿಳೆ & ಸಹೋದರ ಧಮ್ಕಿ

ಕರ್ನಾಟಕದಲ್ಲಿ ಹಿಂದಿ ಭಾಷಿಕರ ಅಟ್ಟಹಾಸ, ದರ್ಪ ಮುಂದುವರಿದಿದೆ. ಇತ್ತೀಚೆಗೆ ಪರಭಾಷಿಕರು ಕನ್ನಡ, ಕನ್ನಡಿಗರ ವಿಚಾರವಾಗಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದೂ ಇದೆ. ಈ ಘಟನೆಗಳು ರಾಜಧಾನಿ ಬೆಂಗಳೂರಿನಲ್ಲೇ ಅಧಿಕವಾಗಿದೆ. ಇದೀಗ ಹಿಂದಿ ಮಹಿಳೆಯೊಬ್ಬರು ಕನ್ನಡಿಗರೊಂದಿಗೆ ಕಿರಿಕ್‌ ಮಾಡಿಕೊಂಡಿದ್ದಾರೆ. ಅಲ್ಲದೆ ವಾಗ್ವಾದ ಮಾಡುವ ಭಾರತದ ಬಗ್ಗೆಯೂ ಇಂಗ್ಲೀಷ್‌ನಲ್ಲಿ ಅತಿ ಕೆಟ್ಟ ಪದ ಬಳಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತದ ಬಗ್ಗೆಯೇ ಆ ಮಹಿಳೆ ಈ ರೀತಿ ಪದ ಬಳಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಮಹಿಳೆ ಬಳಸಿದ ಆ ಪದ ಯಾವುದು? ಏನಿದು ಘಟನೆ ಎಂಬುದನ್ನು ಮುಂದೆ ಓದಿ.

ಈ ವಿಡಿಯೋ ವೈರಲ್‌ ಆಗಿದ್ದು, ಅನಿಲ್‌ ಎಂಬುವವರು ಈ ಘಟನೆ ಏನು ಎಂದು ವಿವರಿಸಿದ್ದಾರೆ. ಇವರ ಪ್ರಕಾರ ಆ ಮಹಿಳೆ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಮನೆಯ ರಸ್ತೆಯಲ್ಲೇ ಇರುವ ಕನ್ನಡಿಗ ಯುವಕನೊಬ್ಬ ಕಾರಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರ ಮನೆ ಬಳಿ ಕಾರು ನಿಲ್ಲಿಸಿ ಏನಾಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದರು. ಆಗ ಕಾರಿನಿಂದ ಜೋರಾಗಿ ಸದ್ದು ಬಂದಿದ್ದರಿಂದ ಈ ಮಹಿಳೆ ಬಂದು ನೀನು ಯಾರು? ಇಲ್ಲೇನು ಮಾಡ್ತಿದ್ದೀಯಾ? ಎಂದು ಅವಾಜ್‌ ಹಾಕಿದ್ದಾರೆ ಎನ್ನಲಾಗಿದೆ.

hindi-woman-and-brother-in-viral-video-allegedly-insult-kannadiga-kannada-india

ಆ ಮಹಿಳೆ ಹಾಗೂ ತನ್ನ ಸಹೋದರ ಇಬ್ಬರೂ ಸೇರಿಕೊಂಡು ಕನ್ನಡಿಗನ ಮೇಲೆ ದರ್ಪ ತೋರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಆ ಯುವಕನೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಆ ಮಹಿಳೆ ಹಾಗೂ ಸಹೋದರ ಹಿಂದಿಯಲ್ಲೇ ಅವಾಜ್‌ ಹಾಕಿದ್ದಾರೆ. ಆಗ ಕನ್ನಡದಲ್ಲಿ ಮಾತನಾಡುವಂತೆ ಯುವಕ ಕೇಳಿದ್ದಾನೆ. ಅದಕ್ಕೆ ಆ ಮಹಿಳೆ ಕೋಪದಿಂದ "This is F***ing India" ಎಂದು ಎರಡೆರಡು ಭಾರಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಭಾರತದ ಬಗ್ಗೆ ಆ ಪದ ಬಳಸಿದ್ದಕ್ಕೆ ಅಲ್ಲಿದ್ದವರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಗೊತ್ತಿಲ್ಲ, ನೀವೆಲ್ಲ ರೇಸಿಸ್ಟ್‌ಗಳು!

ಆಗ ಕನ್ನಡಿಗ ಯುವಕ ಕೂಡ 'ನನ್ನನ್ನು ಗುರಾಯಿಸಬೇಡ, ಅಂತಹ ಕೆಟ್ಟ ಮಾತುಗಳನ್ನಾಡಬೇಡ' ಎಂದು ಮಹಿಳೆಗೆ ಎಚ್ಚರಿಕೆ ಕೊಟ್ಟಿದ್ದಾನೆ. ಬಳಿಕ ಆಕೆಯ ಸಹೋದರ ಮಧ್ಯಪ್ರವೇಶಿಸಿ ಇಂಗ್ಲೀಷ್‌ನಲ್ಲೇ ಜೋರು ಮಾಡಿದ್ದಾನೆ. 'ನನಗೆ ಕನ್ನಡ ಗೊತ್ತಿಲ್ಲ, ಇಂಗ್ಲಿಷ್‌ನಲ್ಲಿ ಮಾತಾಡು' ಎಂದು ಅವಾಜ್‌ ಹಾಕಿದ್ದಾನೆ. ಇದಕ್ಕೆ ಒಪ್ಪದ ಕನ್ನಡಿಗ 'ನಾನು ಕನ್ನಡದಲ್ಲೇ ಮಾತನಾಡ್ತೀನಿ' ಎಂದು ಬಿಸಿಮುಟ್ಟಿಸಿದ್ದಾನೆ. ಇದಕ್ಕೆ 'ನೀವೆಲ್ಲ ರೇಸಿಸ್ಟ್‌ಗಳು, ಇದನ್ನು ಬೇಕಾದ್ರೆ ನಾನು ನೂರು ಬಾರಿ ಹೇಳ್ತೀನಿ' ಎಂದು ಹಿಂದಿ ಭಾಷಿಕ ದರ್ಪದಿಂದ ಮಾತನಾಡಿರುವುದು ವಿಡಿಯೋದಲ್ಲಿದೆ.

ಈ ವಿಡಿಯೋ ಸದ್ಯ ವೈರಲ್‌ ಆಗಿದ್ದು, ಭಾರತದ ಬಗ್ಗೆ ಆ ಕೆಟ್ಟ ಪದ ಬಳಸಿದ ಆ ಮಹಿಳೆ ಹಾಗೂ ಕನ್ನಡಿಗರನ್ನು ರೇಸಿಸ್ಟ್‌ ಎಂದು ಅವಮಾನಿಸಿರುವ ಆಕೆಯ ಸಹೋದರ ಇಬ್ಬರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಈ ಭಿಕಾರಿ ವಲಸಿಗರಿಂದ ಕನ್ನಡಿಗರಿಗೆ ತೊಂದರೆ ಆಗದ ದಿನವೇ ಇಲ್ಲ, ಇಂತಹ ದೇಶದ್ರೋಹಿ ಹಾಗೂ ನಾಡದ್ರೋಹಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಧ್ವನಿ ಎತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+