ಬೆಂಗಳೂರಿನ ಅಪಘಾತ ಸಂತ್ರಸ್ಥನಿಗೆ 1.47 ಕೋಟಿ ರೂ. ದಾಖಲೆಯ ಪರಿಹಾರ!
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನ ಜೆಪಿ ನಗರದ ಬಳಿಯ ರಿಂಗ್ ರೋಡ್ ನಲ್ಲಿ 2016 ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮೃತರಾದ ಬ್ರಹ್ಮನ್ ಲಾಚಿ ಅವರ ಕುಟುಂಬಕ್ಕೆ 1.47 ಕೋಟಿ ರೂಪಾಯಿ ಪರಿಹಾರ ನೀಡಲು ಹೈಕೋರ್ಟ್ ಆದೇಶಿಸಿದೆ.
ಈ ಮೂಲಕ ಅಪಘಾತ ಪ್ರಕರಣವೊಂದರಲ್ಲಿ ನೀಡುತ್ತಿರುವ ಅತೀ ಹೆಚ್ಚಿನ ಪರಿಹಾರ ಎಂಬ ದಾಖಲೆಯನ್ನು ಈ ಪ್ರಕರಣ ಪಡೆದಿದೆ!
ಬೆಂಗಳೂರಿನ ಎಂಫಸಿಸ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ ಬ್ರಹ್ಮನ್ ಎಂಬ ವ್ಯಕ್ತಿ ಜನವರಿ 5, 2016 ರಂದು ಜೆಪಿನಗರದ ಬಳಿ ರಿಂಗ್ ರೋಡ್ ಅಂಡರ್ ಪಾಸ್ ನಲ್ಲಿ ಸಂಚರಿಸುತ್ತಿದ್ದವೇಳೆ ಲಾರಿಯೊಂದು ಬಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ರಾಜಶೇಖರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಂತರ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದರು.

ಘಟನೆಯ ನಂತರ 2017 ರಲ್ಲಿ Motor Accidents Claims Tribunal ನೀಡಿದ ಆದೇಶದಲ್ಲಿ ಮೃತರ ಕುಟುಂಬಕ್ಕೆ 1,39,83,595 ಕೋಟಿ ರೂ. ಪರಿಹಾರ ನೀಡುವಂತೆ ಹೇಳಲಾಗಿತ್ತು. ಆದರೆ ಇನ್ಶುರೆನ್ಸ್ ಕಂಪನಿ ಇಷ್ಟು ಭಾರೀ ಮೊತ್ತವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸಂತ್ರಸ್ಥರಿಗೆ ಪತ್ನಿ, ಮತ್ತು ಒಬ್ಬರು ಚಿಕ್ಕ ಮಕ್ಕಳಿರುವುದನ್ನು, ಮತ್ತು ಸಂತ್ರಸ್ಥರು ಸಾವಿಗೀಡಾಗುವ ಸಂದರ್ಭದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರಿಂದ ಅವರ ಮೇಲೆ ಅವಲಂಬಿತರಾಗಿರುವವರು ಹೆಚ್ಚು ಜನರಿದ್ದರು ಎಂಬ ವಿಷಯಗಳನ್ನೆಲ್ಲ ಪರಿಗಣಿಸಿ ಹೈಕೋರ್ಟ್ ದಾಖಲೆಯ 1.47 ಕೋಟಿ ರೂ .ಪರಿಹಾರ ನೀಡುವಂತೆ ಆದೇಶಿಸಿತು.












Click it and Unblock the Notifications