ಬೆಂಗಳೂರು ವಿಮಾನ ನಿಲ್ದಾಣದಲ್ಲಿ 99 ಕೋಟಿ ಮೌಲ್ಯದ ಹೆರಾಯಿನ್ ವಶ
ಬೆಂಗಳೂರು, ಆಗಸ್ಟ್ 27: ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಥಿಯೋಪಿಯಾದಿಂದ ಬಂದಿದ್ದ ತೆಲಗಂಗಾಣ ಮೂಲದ ವ್ಯಕ್ತಿಯಿಂದ 99 ಕೋಟಿ ರೂ. ಮೌಲ್ಯದ 14 ಕೆಜಿ ಹೆರಾಯಿನ್‌ನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ತೆಲಂಗಾಣ ಮೂಲದ ಶಿಕ್ಷಕ ಎಂದು ಗುರುತಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡು ಟ್ರಾಲಿ ಬ್ಯಾಗ್‌ಗಳ ತಳದಲ್ಲಿ ಹೆರಾಯಿನ್ ಕಳ್ಳಸಾಗಣೆ ಮಾಡಿರುವುದನ್ನು ಪತ್ತೆ ಹಚ್ಚಿ ಆತನನ್ನು ಅಧಿಕಾರಿಗಳು ಬಂಧಿದ್ದಾರೆ. ಶಂಕಿತನನ್ನು ಶಿಕ್ಷಕ ಎಂದೂ ಸಹ ಕರೆಯಲಾಗುತ್ತಿದ್ದು, ಇಥಿಯೋಪಿಯಾದಲ್ಲಿ ಡ್ರಗ್ ಕ್ಯಾರಿಯರ್ ಆಗಿ ಕೆಲಸ ಮಾಡಲು ಇಂಟರ್ನೆಟ್ (ಅಂತರ್ಜಾಲ) ಉದ್ಯೋಗ ಹುಡುಕಾಟದ ಮೂಲಕ ಬಂದಿಳಿದ ಎನ್ನಲಾಗಿದೆ.
ಬೆಂಗಳೂರಿನ ಮೂಲಕ ದೆಹಲಿಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಭಾರಿ ಪ್ರಮಾಣದ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಡಿಆರ್‌ಐನ ಬೆಂಗಳೂರು ಘಟಕಕ್ಕೆ ಮಾಹಿತಿ ಸಿಕ್ಕಿತ್ತು ಎಂದು ಟಿಒಐದ ವರದಿ ಉಲ್ಲೇಖೀಸಿದೆ.
ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ತಂಡವು ಆಗಸ್ಟ್ 19 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ ನಿರ್ಧಿಷ್ಟ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಇಳಿಯುವುದನ್ನು ಕಾಯುತ್ತಿತ್ತು. ಬಳಿಕ ತಂಡವು ಎರಡು ಟ್ರಾಲಿ ಬ್ಯಾಗ್‌ಗಳನ್ನು ಹೊಂದಿದ್ದ ತೆಲಂಗಾಣದ ಶಂಕಿತ 52 ವರ್ಷದ ಭಾರತೀಯ ಪ್ರಜೆಯ ಬಳಿ ತೆರಳಿತು. ನಂತರ ಬ್ಯಾಗ್‌ಗಳ ತಪಾಸಣೆ ನಡೆಸಿದಾಗ ತಳಭಾಗದಲ್ಲಿ ಹೆರಾಯಿನ್ ಪತ್ತೆಯಾಗಿದೆ. ಒಳಗೆ ಕಪ್ಪು ಟೇಪ್‌ನಿಂದ ಮುಚ್ಚಿದ ಕಂದು ಬಣ್ಣದ 14 ಕೆಜಿ ಹೆರಾಯಿನ್ ಪ್ಯಾಕೆಟ್‌ಗಳಿದ್ದವು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 99 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications