ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!

ಬೆಂಗಳೂರು, ಮೇ 4: ಗಂಟೆ ಹೊಡೆದು, ಜಾಗಟೆ ಬಾರಿಸಿ, ತೀರ್ಥಕ್ಕಾಗಿ ಕಾದು ಕುಳಿತಿದ್ದ ಮದ್ಯಪ್ರಿಯರಿಗೆ ಇಂದು ಸಂಭ್ರಮವೋ ಸಂಭ್ರಮ. ಲಾಕ್ ಡೌನ್ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಎಣ್ಣೆ ಇಲ್ಲದೆ ಕಂಗಾಲಾಗಿದ್ದ ಕುಡುಕರ ಪಾಲಿನ ದೇವಸ್ಥಾನ ಇವತ್ತು ತೆರೆದಿದೆ.

Recommended Video

      ಕೊರೊನಾ ಹೆಚ್ಚಾದ್ರೆ ಅದಕ್ಕೆ ರಾಜಕಾರಣಿಗಳೇ ಕಾರಣ,,ಸರ್ಕಾರದ ನಿರ್ಧಾರ ಮೂರ್ಖತನದ್ದು | Oneindia Kannada

      ಲಾಕ್ ಡೌನ್ 3.0 ಮಾರ್ಗಸೂಚಿ ಅನುಸಾರ, ಮದ್ಯ ಮಾರಾಟಕ್ಕೆ ಇದ್ದ ನಿಷೇಧ ತೆರವುಗೊಂಡಿದೆ. ಪರಿಣಾಮ, ಮದ್ಯದಂಗಡಿಗಳು ಓಪನ್ ಆಗಿದ್ದು, ಇಂದು ಬೆಳಗ್ಗಿನಿಂದಲೇ ಜನ ಸರದಿ ಸಾಲಿನಲ್ಲಿ ನಿಂತು ತಮ್ಮ ಶಕ್ತಾನುಸಾರ 'ಎಣ್ಣೆ' ಖರೀದಿ ಮಾಡಿದ್ದಾರೆ.. ಮಾಡುತ್ತಿದ್ದಾರೆ.

      ಎರಡು ಹಂತಗಳ ಲಾಕ್ ಡೌನ್ ಮುಗಿದ ಬಳಿಕ ಆರಂಭವಾದ ಮದ್ಯ ಮಾರಾಟದ ವಹಿವಾಟಿನಲ್ಲಿ ಮೊದಲ ದಿನವೇ ಅಬಕಾರಿ ಇಲಾಖೆಯ ಬೊಕ್ಕಸ ತುಂಬಿಸುವಲ್ಲಿ ಮದ್ಯಪ್ರಿಯರು ಯಶಸ್ವಿ ಆಗಿದ್ದಾರೆ. ಫಸ್ಟ್ ಡೇ ಭರ್ಜರಿ ಕಲೆಕ್ಷನ್ ನ ಭಾಗವಾಗಿರುವ 'ಸಾಕ್ಷಿ'ಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಅಟೆಂಡೆನ್ಸ್ ಹಾಕಿದೆ. ಬೇಕಾದ್ರೆ ನೀವೇ ನೋಡಿ....

      ಅಬ್ಬಬ್ಬಾ.. ಈ ಬಿಲ್ ನೋಡಿ...

      ಅಬ್ಬಬ್ಬಾ.. ಈ ಬಿಲ್ ನೋಡಿ...

      ಇಷ್ಟು ದಿನ 'ಎಣ್ಣೆ' ಇಲ್ಲದೆ ಉಪವಾಸ ಮಾಡಿದ ಪರಿಣಾಮವೋ ಏನೋ.. ಇಂದು ಮದ್ಯದಂಗಡಿ ಓಪನ್ ಆದ ಕೂಡಲೆ ಗ್ಯಾಲನ್ ಮದ್ಯಪ್ರಿಯರೋರ್ವರು ಮಾಡಿರುವ ವ್ಯಾಪಾರದ ಬಿಲ್ ಇದು.

      17 ಬ್ರ್ಯಾಂಡ್, 128 ಬಾಟಲ್

      17 ಬ್ರ್ಯಾಂಡ್, 128 ಬಾಟಲ್

      ಬರಗಾಲದ ದಿನಗಳಲ್ಲಿ ಇಂದು ಒಯಾಸಿಸ್ ನಂತೆ ಕಾಣಿಸಿಕೊಂಡ ಎಣ್ಣೆ ಅಂಗಡಿಗೆ ನುಗ್ಗಿದ ಮದ್ಯಪ್ರಿಯರೊಬ್ಬರು ಲೀಟರ್ ಗಟ್ಟಲೆ ಸ್ಟಾಕ್ ಅನ್ನೇ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. 17 ವಿವಿಧ ಬ್ರ್ಯಾಂಡ್ ಗಳ 128 ಬಾಟಲ್ ಗಳನ್ನು ಕಲೆಹಾಕಿಕೊಂಡಿರುವ 'ಕುಡುಕ' ಮಹಾಶಯ 10 ಕ್ಕೂ ಹೆಚ್ಚು ಲೀಟರ್ ಎಣ್ಣೆಯನ್ನು ಕೊಂಡೊಯ್ದಿದ್ದಾರೆ.

      ಬರೋಬ್ಬರಿ 52,841 ಸಾವಿರ ರೂಪಾಯಿ!

      ಬರೋಬ್ಬರಿ 52,841 ಸಾವಿರ ರೂಪಾಯಿ!

      ಒಂದು ಬಾರಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿ ದಿನಗಳ ಕಾಲ ತೀರ್ಥಸೇವನೆಯಿಂದ ವಂಚಿತರಾಗಿದ್ದ ಎಣ್ಣೆಪಾರ್ಟಿಗಳು ಮುಂದಕ್ಕೆ ತಮ್ಮಿಂದ ಅಂತಹ ಮಹಾಪರಾಧ ಜರುಗದಿರುವಂತೆ ಎಚ್ಚರಿಕೆ ವಹಿಸಿಕೊಂಡಂತೆ ಕಾಣುತ್ತಿದೆ ಈ ಬಿಲ್. ಲಾಕ್ ಡೌನ್ ದಿನಗಳಲ್ಲಿ ಇಷ್ಟದ ಬ್ರ್ಯಾಂಡ್ ಮಿಸ್ ಮಾಡಿಕೊಂಡು ಖಾಲಿ ನಾಲಿಗೆ ಚಪ್ಪರಿಸುತ್ತಿದ್ದವರು, ಇದೀಗ ಒಣಗಿದ್ದ ಗಂಟಲಿಗೆ ಇಳಿಸುವ ಸಲುವಾಗಿ ಇದ್ದ-ಬದ್ದ ಬ್ರ್ಯಾಂಡ್ ಗಳನ್ನೆಲ್ಲ ಬ್ಯಾಗ್ ಗೆ ಸೇರಿಸಿ ಬರೋಬ್ಬರಿ 52,841 ಸಾವಿರ ರೂಪಾಯಿ ಬಿಲ್ ಮಾಡಿದ್ದಾರೆ.

      ಇಂಥ ಇನ್ನೆಷ್ಟು ಬಿಲ್ ಗಳು ಇರಬಹುದು.?

      ಇಂಥ ಇನ್ನೆಷ್ಟು ಬಿಲ್ ಗಳು ಇರಬಹುದು.?

      ಸದ್ಯ ಸೋಷಿಯಲ್ ಮೀಡಿಯಾದ ಬಾಗಿಲು ಬಡಿದಿರುವ ಮೊದಲ 'ಎಣ್ಣೆ' ಬಿಲ್ ಇದು. ಇಂಥ ಅಥವಾ ಇದನ್ನೂ ಮೀರಿಸುವ ಅದಿನ್ನೆಷ್ಟು ಬಿಲ್ ಗಳು ಇಂದು ಅದಿನ್ಯಾವ್ಯಾವ ಅಂಗಡಿಗಳ ಗಲ್ಲಾಪೆಟ್ಟಿಗೆಗಳಲ್ಲಿ ದಾಖಲಾಗಿದವೋ.. ಅಬಕಾರಿ ಇಲಾಖೆಯ ಅಧಿಕಾರಿಗಳೇ ಬಲ್ಲ.!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+