ಕುಮಾರಸ್ವಾಮಿ ಪ್ರಮಾಣವಚನಕ್ಕೆ ಬಂದವರ ಲಕ್ಷ ಲಕ್ಷ ಖರ್ಚು ನೋಡಿದ್ರಾ?

Recommended Video

      ಕುಮಾರಸ್ವಾಮಿ ಪ್ರಮಾಣವಚನಕ್ಕೆ ಬಂದವರ ಲಕ್ಷ ಲಕ್ಷ ಖರ್ಚು ನೋಡಿದ್ರಾ? | Oneindia Kannada

      ಬೆಂಗಳೂರು, ಆಗಸ್ಟ್ 9: ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿಯೂ, ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿದ ಆ 7 ನಿಮಿಷದ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿರಬಹುದು? ಕೇವಲ 42 ಲಕ್ಷ ರುಪಾಯಿ ಮಾತ್ರ. ಯಾವುದ್ಯಾವುದಕ್ಕೆ ಖರ್ಚು ಮಾಡಿದರು ಅಂತ ಕೇಳಿದರೆ ಇಂಥಿಂಥದ್ದಕ್ಕೆ ಅಂತ ಹೇಳಲು ಸಾಧ್ಯವಿಲ್ಲ.

      ಏಕೆಂದರೆ, ಮಾಹಿತಿ ಹಕ್ಕು ಕಾಯ್ದೆ ಅಡಿ ಯಾರು ಮಾಹಿತಿ ಕೇಳಿದ್ದರೋ ಅವರಿಗೆ ಸಿಕ್ಕಿರುವುದು ಕೂಡ ಅಷ್ಟೇ. ಆದರೆ ಪತ್ರಿಕೆಯೊಂದಕ್ಕೆ ಸಿಕ್ಕಿರುವ ಮಾಹಿತಿ ಬಲು ಆಸಕ್ತಿಕರವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸುವಾಗ, ಈ ಬಾರಿ ಯಡಿಯೂರಪ್ಪನವರು ಪ್ರಮಾಣ ವಚನ ಪಡೆಯುವಾಗ ಈ ರೀತಿ ದುಬಾರಿಯಾಗಿ ಯಾವುದೇ ಖರ್ಚು ಮಾಡಿಲ್ಲ.

      ಆದರೆ, ಕುಮಾರಸ್ವಾಮಿ ಅವರದು ದಾಖಲೆ ಮೊತ್ತದ ಖರ್ಚು. ತಾಜ್ ವೆಸ್ಟ್ ಎಂಡ್ ಹಾಗೂ ಶಾಂಗ್ರಿಲಾ ಹೋಟೆಲ್ ಗಳಲ್ಲಿ ಗಣ್ಯರು ತಂಗುವುದಕ್ಕೆ- ಊಟ-ತಿಂಡಿಗೆ 37.53 ಲಕ್ಷ ಖರ್ಚಾಗಿದ್ದರೆ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಹೈ ಟೀ ಔತಣಕ್ಕೆ 4.35 ಲಕ್ಷ ಖರ್ಚಾಗಿದೆ.

      Here is the detail of costliest swearing ceremony of HD Kumaraswamy

      ನಲವತ್ತೆರಡು ಮಂದಿ ದೇಶದ ನಾನಾ ಪ್ರಮುಖರು- ಬಿಜೆಪಿಯೇತರ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಯಾರಿಗೆ ಎಷ್ಟು ಖರ್ಚಾಗಿದೆ ಅನ್ನೋದರ ಪಟ್ಟಿ ಇಲ್ಲಿದೆ ನೋಡಿ. ಇದರಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಖರ್ಚಿನ ವಿವರಗಳಿಲ್ಲ.

      ಚಂದ್ರಬಾಬು ನಾಯ್ಡು ರು.8,72,485

      ಅರವಿಂದ್ ಕೇಜ್ರಿವಾಲ್ (ಊಟ-ಜ್ಯೂಸ್) ರು. 71,025, ಪಾನೀಯ ರು. 5,000

      ಕಮಲಹಾಸನ್ ರು. 1,02,040

      ಅಖಿಲೇಶ್ ಯಾದವ್ ರು. 1,02,400

      ಮಾಯಾವತಿ ರು. 1,41,443

      Here is the detail of costliest swearing ceremony of HD Kumaraswamy

      ಪಿಣರಾಯಿ ವಿಜಯನ್ ರು.1,02,400

      ಅಶೋಕ್ ಗೆಹ್ಲೋಟ್ ರು.1,02,400

      ಸೀತಾರಾಂ ಯೆಚೂರಿ ರು. 64,000

      Here is the detail of costliest swearing ceremony of HD Kumaraswamy

      ಹೇಮಂತ್ ಸೊರೇನ್ ರು. 38,400

      ಶರದ್ ಪವಾರ್ ರು. 64,000

      ಅಸಾದುದ್ದೀನ್ ಒವೈಸಿ ರು. 38,400

      ಬಾಬುಲಾಲ್ ಮರಾಂಡಿ ರು. 45,952

      ತೇಜಸ್ವಿ ಯಾದವ್ 1,02,400

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+