ಹುಡುಗಿಯರೇ ಇಲ್ಲಿ ಕೇಳಿ ! ಬೆಂಗಳೂರಿನಲ್ಲಿ ಶುಚಿ-ರುಚಿಯಾದ ಪಾನಿಪೂರಿ ಸಿಗುವ ಸ್ಥಳಗಳ ಪಟ್ಟಿ

ಬೆಂಗಳೂರು, ಜನವರಿ 10: ಹುಡುಗಿಯರೇ ಈ ಸುದ್ದಿ ನಿಮಗಾಗಿ. ಹಾಗಂತ ಹುಡುಗರು ಓದಲೇ ಬಾರದಂತಿಲ್ಲ. ಯಾಕೆಂದರೆ ಇದು ಪಾನಿಪೂರಿಯ ವಿಷಯ. ಪಾನಿಪೂರಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಲವು ಹುಡುಗಿಯರು ಅತಿಯಾಗಿ ಪಾನಿಪೂರಿಯನ್ನು ಇಷ್ಟಪಡುತ್ತಾರೆ. ಸಂಜೆಯ ಸ್ನ್ಯಾಕ್ಸ್‌ಗೆ ಪಾನಿಪೂರಿ ಇದ್ದರೆ ಅದೊಂದು ಪರಿಪೂರ್ಣ ಸಂಜೆಯಾಗಿರುತ್ತದೆ.

ಪಾನಿಪೂರಿಯು ನಗರಗಳ ಬೀದಿಗಳಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಚಾಟ್‌. ಕೆಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೂ ಪಾನಿಪೂರಿ ಸಿಗುತ್ತದೆ. ಆದರೆ ರಸ್ತೆಯ ಬದಿಯಲ್ಲಿರುವ ಪಾನಿಪೂರಿ ಅಂಗಡಿಯಲ್ಲಿ 'ಬೈಯಾ ಏಕ್‌ ಪ್ಲೇಟ್‌ ಪಾನಿಪುರಿ' ಎನ್ನುವ ಡೈಲಾಗ್‌ ಹೇಳಿ ತಿನ್ನುವ ಪಾನಿಪೂರಿಯ ರುಚಿಯೇ ಬೇರೆ ಇರುತ್ತದೆ. ಹೀಗಾಗಿ ಪಾನಿಪೂರಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿ ಸಿಗುವ 7 ಜನಪ್ರಿಯ ಪಾನಿಪೂರಿ ಸ್ಟಾಲ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

Here Is The Best Pani Puri Stalls In Bengaluru

1. ರಾಮರಾಜ್ ಪಾನಿಪೂರಿ, ಫ್ರೇಜರ್‌ ಟೌನ್‌

ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿರುವ ರಾಮರಾಜ್ ಪಾನಿಪುರಿ ಅತ್ಯಂತ ಜನಪ್ರಿಯ ಪಾನಿ ಪುರಿ ಸ್ಟಾಲ್‌ಗಳಲ್ಲಿ ಒಂದು. ರಾಮರಾಜ್ ಪಾನಿಪುರಿ ಕೋಲ್ಕತ್ತಾದ ಶೈಲಿಯ ರುಚಿಯನ್ನು ಕೊಡುತ್ತದೆ. ಪಾನಿ ಸಂಪೂರ್ಣವಾಗಿ ಖಾರ ಖಾರವಾಗಿರುತ್ತದೆ. ಪುರಿಗಳು ಕುರುಕುಲಾಗಿರುತ್ತದೆ. ಪೂರಿಗೆ ಆಲೂಗಡ್ಡೆ ಸ್ಟಫಿಂಗ್ ಹಾಗೂ ಮಸಾಲೆಗಳ ಮಿಶ್ರಣ ರುಚಿಕೊಡುತ್ತದೆ. ಇಲ್ಲಿ ಕೊಡುವ ಸುಖ ಪುರಿ ಕೂಡ ಚೆನ್ನಾಗಿದೆ ಎನ್ನುವುದು ಇಲ್ಲಿನ ಖಾಯಂ ಗ್ರಾಹಕರ ಮಾತಾಗಿದೆ.

2. ಪಾನಿಪೂರಿ ಜೆಸಿಎನ್‌, ಕೋರಮಂಗಲ

ಕೋರಮಂಗಲದ ಜೆಎನ್‌ಸಿ ಕಾಲೇಜಿನ ಹೊರಗಿರುವ ಈ ಪಾನಿಪೂರಿ ಸ್ಟಾಲ್ ವಿದ್ಯಾರ್ಥಿಗಳ ಅತ್ಯಂತ ಮೆಚ್ಚಿನ ತಾಣವಾಗಿದೆ. ಸಾಮಾನ್ಯವಾಗಿ ಸ್ಟಾಲ್‌ನ ಸುತ್ತಲೂ ಜೆಎನ್‌ಸಿ ಕಾಲೇಜಿನ ವಿದ್ಯಾರ್ಥಿಗಳು ತುಂಬಿತುಳುಕುತ್ತಿರುತ್ತಾರೆ. ಇಲ್ಲಿ ಸುತ್ತಮುತ್ತ ಇತರ ಪಾನಿಪೂರಿ ಸ್ಟಾಲ್‌ಗಳಿದ್ದರೂ, ಪಾನಿಪೂರಿ ಜೆಸಿಎನ್‌ ಮಾತ್ರ ತನ್ನ ರುಚಿಯಿಂದ ಖಾಯಂ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ. ಇಲ್ಲಿನ ಪರಿಪೂರ್ಣವಾದ ಪೂರಿಗಳು , ಆಲೂ ಸ್ಟಫಿಂಗ್ ಮತ್ತು ಪಾನಿಗಾಗಿ ಜನ ಮುಗಿ ಬೀಳುತ್ತಾರೆ.

Here Is The Best Pani Puri Stalls In Bengaluru

3. ಅನಿಲ್‌ ಕುಮಾರ್‌ ಪಾನಿಪೂರಿ ಬಿಇಎಲ್ ರಸ್ತೆ

ನ್ಯೂ ಬಿಇಎಲ್ ರಸ್ತೆಯಲ್ಲಿರುವ ಅನಿಲ್ ಕುಮಾರ್ ಎನ್ನುವವರ ಪಾನಿಪೂರಿ ಸ್ಟಾಲ್ ಎಂಎಸ್ ರಾಮಯ್ಯ ಕಾಲೇಜು ವಿದ್ಯಾರ್ಥಿಗಳ ಇಷ್ಟವಾದ ಸ್ಥಳ. ಹಾಗೂ ಇವರೇ ಇಲ್ಲಿನ ಖಾಯಂ ಗಿರಾಕಿಗಳು. ಅನಿಲ್ ಕುಮಾರ್ ಸುಮಾರು ಹನ್ನೊಂದು ವರ್ಷದಿಂದ ಈ ಸ್ಟಾಲ್‌ ನಡೆಸುತ್ತಿದ್ದಾರೆ. ಇಲ್ಲಿನ ಪಾನಿಯೂ ಮಸಾಲೆಗಳ ಜೊತೆ ಕೊತ್ತಂಬರಿ ಮತ್ತು ಪುದೀನಾ ಘಮವನ್ನು ಹೊಂದಿರುತ್ತದೆ. ಇಲ್ಲಿಗೆ ಭೇಟಿ ನೀಡುವವರು ಪೂರಿಗಿಂತ ಹೆಚ್ಚಾಗಿ ಪಾನಿಯನ್ನು ಇಷ್ಟಪಡುತ್ತಾರೆ.

4. ರಾಕೇಶ್‌ ಕುಮಾರ್‌ ಪಾನಿಪೂರಿ, ಜಯನಗರ

ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಹಳೆಯ ಪಾನಿಪೂರಿ ಸ್ಥಳಗಳಲ್ಲಿ ಒಂದಾದ ರಾಕೇಶ್ ಕುಮಾರ್‌ ಅವರ ಅಂಗಡಿ ಪಾನಿಪೂರಿ ಜೊತೆಗೆ ಉತ್ತರ ಭಾರತದ ಚಾಟ್‌ಗಳನ್ನು ನೀಡುತ್ತದೆ. 1994ರಲ್ಲಿ ಬನಾರಸ್‌ನಿಂದ ಬಂದ ರಾಕೇಶ್ ಬೆಂಗಳೂರಿನಲ್ಲಿ ಈ ಸ್ಟಾಲ್‌ ಪ್ರಾರಂಭಿಸಿದರು. ಇಲ್ಲಿನ ಪಾನಿಪೂರಿ ಹಾಗೂ ಆಲೂ ಚಾಟ್‌ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಸರಿ ಸುಮಾರು ಮೂರು ದಶಕಗಳಿಂದ ಈ ಚಾಟ್‌ ಸ್ಟಾಲ್‌ ನಡೆಯುತ್ತಿದ್ದು, ಇಂದಿಗೂ ಅದೇ ರುಚಿ ಉಳಿಸಿಕೊಂಡು ಬಂದಿದೆ.

Here Is The Best Pani Puri Stalls In Bengaluru

5. ಮಂಜು ಪಾನಿಪೂರಿ, ವಿಜಯನಗರ

25 ವರ್ಷ ಹಳೆಯದಾದ ಮಂಜು ಪಾನಿಪೂರಿ ಸ್ಟ್ರೀಟ್ ಕಾರ್ಟ್ ವಿಜಯನಗರದಲ್ಲಿ ಕರ್ನಾಟಕ ಶೈಲಿಯ ಚಾಟ್ ಮತ್ತು ಪಾನಿಪೂರಿಗೆ ಜನಪ್ರಿಯವಾಗಿದೆ. ಮಂಜು ಹಾಗೂ ಅವರ ಪತ್ನಿ ಈ ಸ್ಟಾಲ್‌ ಅನ್ನು ಪ್ರಾರಂಭಿಸಿದರು. ಆರಂಭದ ದಿನಗಳಿಂದ ಇಂದಿಗೂ ಎಲ್ಲಾ ವಯಸ್ಸಿನ ಗ್ರಾಹಕರನ್ನು ಹೊಂದಿದೆ. ಇಲ್ಲಿನ ಮೆನು ಸರಳವಾಗಿದ್ದು, ಪಾನಿಪೂರಿ, ಮಸಾಲಾಪುರಿ, ಸೇವ್ ಪುರಿ, ಭೇಲ್ ಪುರಿ, ದಹಿ ಪುರಿ ಲಭ್ಯವಿರುತ್ತದೆ.

6. ಶ್ರೀ ಚಾಟ್‌ ಪಾಯಿಂಟ್‌, ಜಯನಗರ

ಬೆಂಗಳೂರಿನ ಜಯನಗರದ 3 ನೇ ಬ್ಲಾಕ್‌ನಲ್ಲಿರುವ ಶ್ರೀ ಚಾಟ್‌ ಪಾಯಿಂಟ್‌ ವೈಟ್ ಪಾನಿಯಿಂದ ಹೆಚ್ಚು ಜನಪ್ರಿಯವಾಗಿದೆ. ಸಾಮಾನ್ಯವಾಗಿ ಪಾನಿಪೂರಿಯಲ್ಲಿ ಹುಣಸೆಹಣ್ಣು ಹಾಕಿರುವ ಪಾನಿ ಇರುತ್ತದೆ. ಆದರೆ ಇಲ್ಲಿ ಆಂಧ್ರಪ್ರದೇಶ ಮೂಲದ ಬಿಳಿ ಪಾನಿ ದೊರೆಯುತ್ತದೆ. ಇಲ್ಲಿನ ಪೂರಿಯು ರುಚಿಕರವಾಗಿರುತ್ತದೆ. ಶ್ರೀ ಚಾಟ್‌ ಪಾಯಿಂಟ್‌ ವೈಟ್‌ ಪಾನಿಯು ಹುಣಸೆ ಹಣ್ಣಿನ ವಾಸನೆ ಜೊತೆಗೆ ಖಾರ ಖಾರ ರುಚಿಕೊಡುತ್ತದೆ.

Here Is The Best Pani Puri Stalls In Bengaluru

7. ಸ್ವೀಟ್‌ ಮೂಮೆಂಟ್ಸ್, ಕಮ್ಮನಹಳ್ಳಿ

ಬೆಂಗಳೂರಿನ ಕಮ್ಮನ ಹಳ್ಳಿಯಲ್ಲಿರುವ ಸ್ವೀಟ್ ಮೂಮೆಂಟ್ಸ್ ಹೆಸರಿಗೆ ತಕ್ಕಂತೆ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ ಇಲ್ಲಿನ ಪಾನಿಪೂರಿ ಕೂಡ ಬಲು ರುಚಿಯಾಗಿರುತ್ತದೆ. ಭಾರತದ ಚಾಟ್‌ಗಳು ಹಾಗೂ ಪಾನಿಪೂರಿಯನ್ನು ಸವಿಯಲು ಸ್ವೀಟ್ ಮೂಮೆಂಟ್ಸ್ ಸ್ಟಾಲ್‌ಗೆ ಭೇಟಿ ನೀಡಬಹುದು. ಇದು ತನ್ನ ಶುಚಿ-ರುಚಿಯಿಂದ ಅನೇಕ ಖಾಯಂ ಗ್ರಾಹಕರನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+