ಬೆಂಗಳೂರಿನ ಪ್ರತಿ ಆಸ್ಪತ್ರೆಯಲ್ಲಿ ಕೋವಿಡ್ ಸಹಾಯ ಕೇಂದ್ರ

ಬೆಂಗಳೂರು, ಆಗಸ್ಟ್ 04 : ಬೆಂಗಳೂರಿನ ಪ್ರತಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಈ ಕೇಂದ್ರದ ಮೂಲಕ ಕೋವಿಡ್ ರೋಗಿಗಳ ಜೊತೆ ಸಂಬಂಧಿಕರು ಸಂವಹನ ನಡೆಸಬಹುದು.

Recommended Video

      ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ಭೇಟಿ ಕೊಟ್ಟ ಯೋಗಿ | Oneindia Kannada

      ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಆಯುಕ್ತರು ಮಾಹಿತಿ ನೀಡಿದ್ದಾರೆ. "ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರ ಜೊತೆ ಬಂಧುಗಳು ನೇರವಾಗಿ ಮಾತನಾಡುವುದಕ್ಕೆ ಸದ್ಯ ಅವಕಾಶವಿಲ್ಲ" ಎಂದರು.

      "ಪ್ರತಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಲಾಗುತ್ತದೆ. ಸಹಾಯ ಕೇಂದ್ರಕ್ಕೆ ಬರುವ ರೋಗಿಗಳ ಜೊತೆ ದೂರವಾಣಿ ಮೂಲಕ ಬಂಧುಗಳು ಮಾತನಾಡಲು ಅವಕಾಶ ಸಿಗಲಿದೆ. ಈ ಕೇಂದ್ರದಲ್ಲಿ ಮೂವರು ಸಿಬ್ಬಂದಿಗಳು ಇರಲಿದ್ದು, 24 ಗಂಟೆ ಕಾರ್ಯ ನಿರ್ವಹಣೆ ಮಾಡಲಿದೆ" ಎಂದು ಆಯುಕ್ತರು ಹೇಳಿದರು.

      Help Desk In Each Hospital Of Bengaluru Says BBMP Commissioner

      ಈ ಸಹಾಯ ಕೇಂದ್ರಗಳು ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲು, ಗುಣಮುಖರಾಗುವ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಲು, ರೋಗಿಗಳು ಸಾವನ್ನಪ್ಪಿದರೆ ಮೃತದೇಹ ಹಸ್ತಾಂತರ ಮಾಡಲು ಈ ಕೇಂದ್ರ ಸಹಾಯ ಮಾಡಲಿದೆ.

      ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಈ ಕೇಂದ್ರಗಳಲ್ಲಿ ಸರ್ಕಾರ ಚಿಕಿತ್ಸೆಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿದರೆ ದೂರನ್ನು ಸಹ ನೀಡಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+