ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಇಲ್ಲದ ಪ್ರಯಾಣ; 3.5 ಲಕ್ಷ ಕೇಸು ಹಾಕಿದ ಬೆಂಗಳೂರು ಪೊಲೀಸರು

|
Google Oneindia Kannada News

ಬೆಂಗಳೂರು, ಏಪ್ರಿಲ್ 08; ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸುವ ಬಗ್ಗೆ ಬೈಕ್ ಸವಾರರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ನಡೆಸುತ್ತಾರೆ. ಆದರೂ ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗಿಯೇ ಇದೆ.

ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುತ್ತಿದ್ದವರ ವಿರುದ್ಧ 3.5 ಲಕ್ಷ ಕೇಸುಗಳನ್ನು ದಾಖಲು ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುತ್ತಿದ್ದ ಹಿಂಬಂದಿ ಸವಾರರ ವಿರುದ್ದ 2.1 ಲಕ್ಷ ಕೇಸು ದಾಖಲಾಗಿದೆ.

ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ: ಸರ್ಕಾರದ ಹೊಸ ಸುರಕ್ಷತಾ ನಿಯಮಗಳುಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ: ಸರ್ಕಾರದ ಹೊಸ ಸುರಕ್ಷತಾ ನಿಯಮಗಳು

ಮಾರ್ಚ್ 16ರಂದು ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಸಂಚಾರ ನಡೆಸಿ ಎಂಬ ಅಭಿಯಾನವನ್ನು ನಗರದಲ್ಲಿ ಆರಂಭಿಸಿದ್ದಾರೆ. ಇದರ ಭಾಗವಾಗಿ ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುವ ಬೈಕ್ ಸವಾರರನ್ನು ತಡೆದು ದಂಡ ಹಾಕಲಾಗುತ್ತಿದೆ.

ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!

Helmetless Riding 3.5 Lakh Cases In Bengaluru In March

ಐಎಸ್‌ಐ ಮಾರ್ಕ್‌ ಇಲ್ಲದ, ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆಯನ್ನು ಇನ್ನೂ ಸಂಚಾರಿ ಪೊಲೀಸರು ಆರಂಭಿಸಿಲ್ಲ. ಅರ್ಧ ಹೆಲ್ಮಟ್ ಧರಿಸದಂತೆ ಬೈಕ್ ಸವಾರರಿಗೆ ಅರಿವು ಮೂಡಿಸುವ ಅಭಿಯಾನ ರಾಜ್ಯದಲ್ಲಿ ನಡೆಯುತ್ತಿದೆ.

ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದಿದ್ದರೆ ಲೈಸೆನ್ಸ್ ರದ್ದು! ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದಿದ್ದರೆ ಲೈಸೆನ್ಸ್ ರದ್ದು!

ಐಎಸ್‌ಐ ಮಾರ್ಕ್‌ ಇಲ್ಲದ ಹೆಲ್ಮೆಟ್ ಧರಿಸದಂತೆ ಸವಾರರಿಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಐಎಸ್‌ಐ ಮಾರ್ಕ್ ಹೆಲ್ಮೆಟ್ ಹೇಗೆ ಸುರಕ್ಷಿತ ಎಂದು ಜನರಿಗೆ ತಿಳಿಸಲಾಗುತ್ತಿದೆ. ಆದರೆ ನಾವಿನ್ನೂ ದಂಡ ಹಾಕುವ ಕಾರ್ಯಾಚರಣೆ ಆರಂಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ಬೈಕ್ ಸವಾರರು ಅರ್ಧ ಹೆಲ್ಮೆಟ್ ಧರಿಸಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಈಗಾಗಲೇ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಕೆಲವು ಕಡೆ ಅರ್ಧ ಹೆಲ್ಮೆಟ್ ವಶಕ್ಕೆ ಪಡೆದು ನಾಶಗೊಳಿಸಲಾಗುತ್ತಿದೆ.

ಸಂಚಾರಿ ಪೊಲೀಸರು ಆರಂಭಿಸಿರುವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಜನರು ಪೂರ್ಣ ಹೆಲ್ಮೆಟ್ ಧರಿಸಲು ಆರಂಭಿಸಿದ್ದಾರೆ. ಒಂದು ವೇಳೆ ಅಪಘಾತಗಳು ನಡೆದರೆ ಪೂರ್ಣ ಹೆಲ್ಮಟ್ ಶೇ 44ರಷ್ಟು ರಕ್ಷಣೆ ನೀಡುತ್ತದೆ.

ಐಎಸ್‌ಐ ಮಾನ್ಯತೆ ಹೊಂದಿರುವ ಹೆಲ್ಮೆಟ್‌ಗಳ ದರಗಳು ಹೆಚ್ಚಾಗಿವೆ. ಆದ್ದರಿಂದ ಸವಾರರು ಅದನ್ನು ಖರೀದಿ ಮಾಡದೆ ಕಡಿಮೆ ಬೆಲೆಗೆ ಸಿಗುವ ಅರ್ಧ ಹೆಲ್ಮೆಟ್ ಧರಿಸಿ ಸಂಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಅಪಘಾತಗಳು ಉಂಟಾದಾಗ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಅರ್ಧ ಹೆಲ್ಮಟ್ ಧರಿಸುವುದರ ವಿರುದ್ಧ ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿರುವುದನ್ನು ನಾವು ಸಹ ಸ್ವಾಗತಿಸುತ್ತೇವೆ. ಆದರೆ ಹೆಲ್ಮೆಟ್ ಧರಿಸಲು ಅವಕಾಶವೇ ಇಲ್ಲ ಎಂದಾಗ ಅದನ್ನು ತಯಾರು ಮಾಡಿ ಮಾರುಕಟ್ಟೆಗೆ ಏಕೆ ಬಿಡುಗಡೆ ಮಾಡಲಾಗುತ್ತಿದೆ? ಎಂದು ವಾಹನ ಸವಾರರು ಪ್ರಶ್ನಿಸಿದ್ದಾರೆ.

ಮಾರುಕಟ್ಟೆಯಲ್ಲಿ ಅರ್ಧ ಹೆಲ್ಮೆಟ್ ಸಿಗುತ್ತಿರುವುದರಿಂದ ಅದನ್ನು ಖರೀದಿ ಮಾಡಿದ್ದೇವೆ. ಆದರೆ ಈಗ ಪೊಲೀಸರು ಅದನ್ನು ಧರಿಸಬಾರದು ಎಂದು ಹೇಳುತ್ತಿದ್ದಾರೆ. ಈ ಕುರಿತು ಸಷ್ಟವಾದ ನಿಯಮ ಜಾರಿಗೆ ತರಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಅರ್ಧ ಹೆಲ್ಮೆಟ್ ಧರಿಸುವವರೇ ಹೆಚ್ಚು; ಬೆಂಗಳೂರು ನಗರದಲ್ಲಿ ಪೂರ್ಣ ಹೆಲ್ಮೆಟ್ ಧರಿಸುವವರಿಗಿಂತ ಅರ್ಧ ಹೆಲ್ಮೆಟ್ ಧರಿಸುವವರೇ ಅಧಿಕ ಎಂಬ ಸಂಗತಿ ಸಹ ಬೆಳಕಿಗೆ ಬಂದಿದೆ. ಶೇ 44 ರಷ್ಟು ಜನರು ಮಾತ್ರ ತಲೆ, ಮುಖಕ್ಕೆ ರಕ್ಷಣೆ ನೀಡುವ ಪೂರ್ಣ ಹೆಲ್ಮೆಟ್ ಧರಿಸುತ್ತಾರೆ. ಶೇ 26.75 ಮಂದಿ ಅರ್ಧ ಹೆಲ್ಮೆಟ್ ಧರಿಸುತ್ತಾರೆ ಎಂದು ಸಂಚಾರಿ ಪೊಲೀಸರು ಮತ್ತು ನಿಮ್ಹಾನ್ಸ್ ಜಂಟಿಯಾಗಿ ನಡೆಸಿ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಬೆಂಗಳೂರು ನಗರದಲ್ಲಿ ನಾಲ್ಕು ಚಕ್ರದ ವಾಹನಗಳಿಗಿಂತ ಹೆಚ್ಚು ದ್ವಿಚಕ್ರವಾಹನಗಳಿವೆ. ಬೈಕ್‌ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ ಕಾನೂನು ಪಾಲನೆ ಮಾಡುವವರ ಸಂಖ್ಯೆ ಕಡಿಮೆ ಇದೆ.

ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರೆ ಅಪಘಾತಗಳು ಸಂಭವಿಸಿದಾಗ ತಲೆಗೆ ಆಗುವ ಗಾಯದಿಂದ ಶೇ 69 ಮತ್ತು ಶೇ 42ರಷ್ಟು ಜೀವಹಾನಿಯನ್ನು ಕಡಿಮೆ ಮಾಡಬಹುದಾಗಿದೆ. ಹೆಲ್ಮೆಟ್ ಖರೀದಿ ಮಾಡುವಾಗ ಐಎಸ್‌ಐ ಮಾನ್ಯತೆ ಹೊಂದಿರುವುದನ್ನು ಮಾತ್ರ ಖರೀದಿ ಮಾಡಿ ಎಂದು ಪೊಲೀಸರು ಸಹ ಅರಿವು ಮೂಡಿಸುತ್ತಿದ್ದಾರೆ.

English summary
Bengaluru traffic police registered the 3.5 lakh cases in March who riding bike without helmet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X