ಶನಿವಾರ ಹೆಬ್ಬಾಳ ಉಪ ಚುನಾವಣೆ, ಮತ ಹಾಕಲು ಸಿದ್ಧವಾಗಿ

ಬೆಂಗಳೂರು, ಫೆಬ್ರವರಿ 09 : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. 2 ಲಕ್ಷ ಮತದಾರರು ಫೆ.13ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಪಡೆದಿದ್ದಾರೆ. ಫೆ.16ರಂದು ಚುನಾವಣಾ ಫಲಿತಾಂಶ ಪ್ರಟಕಗೊಳ್ಳಲಿದೆ.

ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಉಪ ಚುನಾವಣೆ ಬಗ್ಗೆ ಮಾಹಿತಿ ನೀಡಿದ್ದು, 'ಒಟ್ಟು 2,43,703 ಮತದಾರರು ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಪಡೆದಿದ್ದಾರೆ. 2013ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ 12 ಸಾವಿರ ಮತದಾರರು ಹೆಚ್ಚಾಗಿದ್ದಾರೆ' ಎಂದು ಹೇಳಿದರು. [2013ರ ವಿಧಾನಸಭೆ ಚುನಾವಣಾ ಫಲಿತಾಂಶ]

voting

'ಫೆ.13ರ ಶನಿವಾರ ಮತದಾನ ನಡೆಯಲಿದೆ. ಫೆ.16ರ ಮಂಗಳವಾರ ಬಳ್ಳಾರಿ ರಸ್ತೆ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಡೇರಿ ಸೈನ್ಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ' ಎಂದು ಹೇಳಿದರು. '237 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇವುಗಳಲ್ಲಿ 71 ಅತಿ ಸೂಕ್ಷ್ಮ, 85 ಸೂಕ್ಷ್ಮ ಮತಗಟ್ಟೆಗಳಿವೆ' ಎಂದರು. [ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ]

'783 ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಲಾಗುತ್ತಿದೆ. 20 ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಒಂದು ಮತಗಟ್ಟೆಯಲ್ಲಿ 2 ಎಲೆಕ್ಟ್ರಾನಿಕ್ ಮತಯಂತ್ರದ ವ್ಯವಸ್ಥೆ ಮಾಡಲಾಗಿದೆ' ಎಂದು ಕುಮಾರ್ ನಾಯಕ್ ಅವರು ವಿವರಣೆ ನೀಡಿದರು.

ನೋಟಾಕ್ಕೆ ಅವಕಾಶವಿದೆ : ಫೆಬ್ರವರಿ 11ರಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಅಭ್ಯರ್ಥಿಗಳ ಪಟ್ಟಿ ಮುಗಿದ ಬಳಿಕ ನೋಟಾ (ಮೇಲಿನ ಯಾರಿಗೂ ಮತವಿಲ್ಲ) ಮತ ಚಲಾವಣೆಗೆ ಅವಕಾಶ ನೀಡಲಾಗಿದೆ.

ಒಟ್ಟು ಮತದಾರರು : ಒಟ್ಟು ಮತದಾರರು 2,43,703, ಪುರುಷರು 1,26,313, ಮಹಿಳೆಯರು 1,17,376.

2015ರ ನವೆಂಬರ್ 23ರಂದು ಹೆಬ್ಬಾಳ ಕ್ಷೇತ್ರದ ಶಾಸಕ ಜಗದೀಶ್ ಕುಮಾರ್ (ಬಿಜೆಪಿ) ಹೃದಯಾಘಾತದಿಂದ ನಿಧನರಾಗಿದ್ದು, ತೆರವಾಗಿರುವ ಕ್ಷೇತ್ರದಲ್ಲಿ ಫೆ.13ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನಿಂದ ರೆಹಮಾನ್‌ ಷರೀಫ್‌, ಬಿಜೆಪಿಯಿಂದ ವೈ.ನಾರಾಯಣ ಸ್ವಾಮಿ ಮತ್ತು ಜೆಡಿಎಸ್‌ನಿಂದ ಇಸ್ಮಾಯಿಲ್‌ ಷರೀಫ್‌ ಅವರು ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+