ಐಪಿಎಲ್ ಮ್ಯಾಚ್‌ಗೆ ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರು, ಮೇ 4: ಚೆನ್ನೈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲಾ ಐಪಿಎಲ್ ಪಂದ್ಯಾಟಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಲಿದ್ದಾರೆ.
ಮೇ 4, 9, 11, 13 ಮತ್ತು 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಕ್ರೀಡಾಂಗಣದ ಭದ್ರತೆಗೆ 1 ಸಾವಿರ ಪೊಲೀಸರನ್ನು ನಿಯೋಜಿಸಿದ್ದು, 86 ಸಿಸಿ ಟಿವಿಯನ್ನು ಅಳವಡಿಸಲಾಗಿದೆ.
ಪಂದ್ಯ ನಡೆಯುವ ಮೂರು ಗಂಟೆ ಮೊದಲುಸಾರ್ವಜನಿಕರ ಪ್ರವೇಶಕ್ಕೆ ಕ್ರೀಡಾಂಗಣದ ಎಲ್ಲಾ ದ್ವಾರಗಳನ್ನು ತೆರೆಯಲಾಗುತ್ತದೆ. ಕ್ರೀಡಾಂಗಣ ಹೊರಗೆ ಮತ್ತು ಒಳಗಡೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಯಾವುದೇ ರೀತಿಯ ವಸ್ತುಗಳನ್ನು ಒಳಗಡೆಗೆ ತೆಗೆದುಕೊಂಡು ಹೋಗುವಂತಿಲ್ಲ.[ಮೇ.4 ಆರ್ ಸಿಬಿ ಮ್ಯಾಚ್, ವಾಹನ ನಿಲುಗಡೆ ಎಲ್ಲೆಲ್ಲಿ]

ಕ್ರೀಡಾಂಗಣದ ಒಳಗಡೆ ಲೈಟರ್, ಸಿಗರೇಟ್, ಬೈನಾಕ್ಯುಲರ್, ಕ್ಯಾಮೆರಾ, ಧ್ವನಿವರ್ಧಕಗಳು, ಯಾವುದೇ ಹರಿತವಾದ ಅಸ್ತ್ರಗಳು, ಹೆಲ್ಮೆಟ್ಸ್, ಮದ್ಯದ ಬಾಟಲಿಗಳು, ಪಟಾಕಿ, ಬಣ್ಣದ ಪುಡಿ, ಸೌಂದರ್ಯ ವರ್ಧಕಗಳು, ಛತ್ರಿಗಳು, ಬೊಂಬೆಗಳು, ಬ್ಯಾಟರಿ ಟಾರ್ಚ್‌ಗಳನ್ನು ನಿಷೇಧಿಸಲಾಗಿದೆ.[ಐಪಿಎಲ್ ಮ್ಯಾಚ್: ಬಿಎಂಟಿಸಿ, ಮೆಟ್ರೋದಿಂದ ಹೆಚ್ಚುವರಿ ಸೇವೆ]
ಪ್ರೇಕ್ಷಕರು ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬೇಕು.ಕ್ರೀಡಾಂಗಣದ ಸುತ್ತಮುತ್ತ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡಿರುವುದಿಲ್ಲ. ಅನುಮಾನಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಬೆಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.












Click it and Unblock the Notifications