ಬೆಂಗಳೂರಲ್ಲಿ ಜೋರು ಮಳೆ: ಸಂಚಾರ ಅಸ್ತವ್ಯಸ್ತ
ಬೆಂಗಳೂರು, ಸೆಪ್ಟೆಂಬರ್ 16: ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದ್ದ ಬೆಂಗಳೂರಲ್ಲಿ ರಾತ್ರಿ ವೇಳೆಗೆ ಧಾರಾಕಾರ ಮಳೆ ಪ್ರಾರಂಭವಾಗಿದೆ.
9 ಗಂಟೆ ಸುಮಾರಿಗೆ ಆರಂಭವಾದ ಮಳೆ ಧೋ ಎಂದು ಸುರಿದು, ಮನೆ ತಲುಪುವ ಗಡಿ-ಬಿಡಿಯಲ್ಲಿದ್ದ ಬೆಂಗಳೂರಿಗರು ಕಿರಿ-ಕಿರಿ ಅನುಭವಿಸುವಂತೆ ಮಾಡಿದೆ.
ಜೊರಾಗಿ ಸುರಿದ ಮಳೆಗೆ ನಗರದ ಬಹುಪಾಲು ರಸ್ತೆಗಳು ಮಾಮೂಲಿನಂತೆ ತುಂಬಿವೆ. ಮಳೆಯಿಂದಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮೆಜೆಸ್ಟಿಕ್, ಜಯನಗರ, ಮಲ್ಲೇಶ್ವರ, ಎಲೆಕ್ಟ್ರಾನಿಕ್ ಸಿಟಿ, ವಿಧಾನಸೌಧ ಸುತ್ತಮುತ್ತ, ಎಂಜಿ ರಸ್ತೆ, ಮಾರ್ಕೆಟ್, ಚಾಮರಾಜನಗರ ಸೇರಿ ನಗರದ ಹಲವೆಡೆ ಒಂದು ತಾಸಿನ ವರೆಗೆ ಸತತ ಮಳೆ ಸುರಿದಿದೆ.
ಮಳೆ ನಿಲ್ಲಲು ಜನ ಕಾಯ್ದ ಕಾರಣ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ ಜನರಿಂದ ತುಂಬಿ ಹೋಗಿತ್ತು. ಮಳೆ ಇಳಿಯುವವರೆಗೆ ಕಾದ ಜನ, ಆಟೊ-ಕ್ಯಾಬ್‌ಗಳ ಮೂಲಕ ಲಘು-ಬಗೆಯಲ್ಲಿ ಮನೆ ಸೇರಲು ಧಾವಂತ ತೋರಿದ್ದು ಕಂಡು ಬಂದಿತು.
ಹವಾಮಾನ ಇಲಾಖೆಯ ಪ್ರಕಾರ ನಾಳೆಯೂ ನಗರದಲ್ಲಿ ಮಳೆ ಆಗಲಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಜಿಲ್ಲೆಗಳು, ಮೈಸೂರು, ಚಿಕ್ಕಬಳ್ಳಾಪುರಗಳಲ್ಲಿಯೂ ಮಳೆಯ ಸಂಭವ ಇದೆ.












Click it and Unblock the Notifications