ಮಳೆಯ ಆರ್ಭಟ: ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಹಾನಿ?

Recommended Video

      ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಯಾಗಿದ್ದು ಅಷ್ಟಿಷ್ಟಲ್ಲ | Oneindia Kannada

      ಬೆಂಗಳೂರು, ಜೂನ್ 3: ನಗರದಲ್ಲಿ ಭಾನುವಾರ ಸುರಿದ ಮಳೆಗೆ 35ಕ್ಕೂ ಹೆಚ್ಚು ಮರಗಳು ಬುಡಮೇಲಾಗಿ ಬಿದ್ದಿವೆ. ಹಾಗಾಗಿ ಭಾನುವಾರ ಸಂಜೆ ವೇಳೆಗೆ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

      ಯಲಹಂಕದಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ, ದೇವಸಂದ್ರದಲ್ಲಿ ಮೂರು ಮರಗಳು ಹಾಗೂ ಸಿದ್ದಾಪುರದಲ್ಲಿ 2 ಮರಗಳು, ಜೆಪಿನಗರ, ದೊಮ್ಮಲೂರು ಹಾಗೂ ರಾಘವೇಂದ್ರ ವೃತ್ತ, ಹೆಬ್ಬಾಳ, ಲುಂಬಿನಿ ಗಾರ್ಡನ್, ಸುಲ್ತಾನ್ ಪಾಳ್ಯ, ಸಹಕಾರನಗರ, ಎಚ್‌ಬಿಆರ್ ಲೇಔಟ್, ವಿದ್ಯಾರಣ್ಯಪುರ, ಎಂಎಸ್ ಪಾಳ್ಯ, ಎಚ್‌ಎಸ್‌ಆರ್ ಲೇಔಟ್, ಭದ್ರಪ್ಪ ಲೇಔಟ್‌ನಲ್ಲಿ ಮರಗಳ ಬೇರುಗಳು ಸಡಿಲಗೊಂಡು ಬಿದ್ದವೆ.

      36ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೆಸ್ಕಾಂ ಮಾಹಿತಿ ಪ್ರಕಾರ ದೊಮ್ಮಲೂರು, ಜೆಪಿನಗರ ಎರಡನೇ ಹಂತ, ಎಇಸಿಎಸ್ ಲೇಔಟ್, ಸಿದ್ದಾಪುರ, ಬಾಬುಸಪಾಳ್ಯ, ದಾಸರಹಳ್ಳಿ , ದೇವಸಂದ್ರ, ಸಹಕಾರನಗರದಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿಸಿದ್ದಾರೆ.

      Heavy rain brings down trees

      ಕೊಡಿಗೆಹಳ್ಳಿಯ ಬಳ್ಳಾರಿ ರಸ್ತೆ ಎಕ್ಸ್‌ಪ್ರೆಸ್‌ ವೇನಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

      ನಗರದಲ್ಲಿ ಜೂನ್ 4ರವರೆಗೂ ಮಳೆ ಬರಲಿದ್ದು, ಮಳೆಯಾಗುವ ವೇಳೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+