ವೈಯಕ್ತಿಕ ವಿಷಯ ನಿಮಗ್ಯಾಕ್ರಿ: ಕುಮಾರ್ ಬಂಗಾರಪ್ಪಗೆ ಎಚ್ಡಿಕೆ ತಿರುಗೇಟು

Recommended Video

      ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಕ್ಕೆ ಕುಮಾರ್ ಬಂಗಾರಪ್ಪ ಮೇಲೆ ಎಚ್ ಡಿ ಕೆ ಗರಂ | Oneindia Kannada

      ಬೆಂಗಳೂರು, ಅಕ್ಟೋಬರ್ 30: ನನ್ನ ಸ್ವಂತ ವಿಚಾರದ ಬಗ್ಗೆ ಪ್ರಶ್ನೆ ಮಾಡುವ ಯಾವ ಅಧಿಕಾರವೂ ನಿಮಗಿಲ್ಲ, ಚುನಾವಣೆ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡುವುದು ಬಿಟ್ಟು ಕುಟುಂಬದ ವಿಚಾರ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕುಮಾರ ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

      ಕುಮಾರಬಂಗಾರಪ್ಪ ಅವರ ಹೇಳಿಕೆ ಬಗ್ಗೆ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎಚ್‌ಡಿ ಕುಮಾರಸ್ವಾಮಿ, ನಾನು ಯಾವುದೇ ತಪ್ಪು ಮಾಡಿಲ್ಲ, ಎಲ್ಲವನ್ನೂ ಎದುರಿಸುವ ಶಕ್ತಿ ನನ್ನಲ್ಲಿದೆ ನನ್ನ ವಯಕ್ತಿಕ ವಿಚಾರ ಎಂದು ಗರಂ ಆಗಿಯೇ ನುಡಿದರು. ಕುಮಾರ್ ಬಂಗಾರಪ್ಪ ಅವರು ಕುಮಾರಸ್ವಾಮಿ ಅನಿತಾ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರಲಿ ಎಂದು ಸವಾಲು ಹಾಕಿದ್ದರು. ಇದಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

      ಬಂಗಾರಪ್ಪ ಅವರ ಮಗನಾಗಿ ಕುಮಾರ್ ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಏನು ಕೆಲಸ ಮಾಡಿದ್ದಾರೆ, ರಾಜ್ಯಕ್ಕೆ ಕುಮಾರ್ ಬಂಗಾರಪ್ಪ ಅವರ ಕೊಡುಗೆ ಏನು, ಬಂಗಾರಪ್ಪ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಮತ ಯಾಚನೆ ಮಾಡುವ ಅಗತ್ಯ ನಮಗಿಲ್ಲ, ಮಧು ಬಂಗಾರಪ್ಪ ಸ್ಮಾರಕದ ವಿನ್ಯಾಸ ತಯಾರಿಸಿದ್ದಾರೆ ಅದರಂತೆಯೇ ಕೆಲಸ ಮಾಡುತ್ತೇವೆ ಎಂದರು.

      HDK slams Kumar Bangarappa on his personal life comment

      ಚುನಾವಣೆ ಸಂದರ್ಭದಲ್ಲಿ ವಯಕ್ತಿಕ ವಿಚಾರ ಚರ್ಚೆ ಮಾಡುವುದಿಲ್ಲ, ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದ ಅವರು, ಕುಮಾರ್ ಬಂಗಾರಪ್ಪ ಅವರ ಅಭಿರುಚಿಯ ಪ್ರದರ್ಶನ ಇದೀಗ ಆಗಿದೆ, ನಾನು ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ, ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+