'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ

ಬೆಂಗಳೂರು, ಮಾರ್ಚ್ 16: ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವುದರಿಂದ ಟ್ರಾಫಿಕ್ ಸಮಸ್ಯೆಗೆ ಶಾಸ್ವತ ಪರಿಹಾರ ದೊರೆಯಲಿದೆ ಎಂದಿರುವ ಸಿಎಂ ಕುಮಾರಸ್ವಾಮಿ ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನೂರಾರು ವಿಘ್ನಗಳು ಎದುರಾಗುತ್ತಿವೆ.

ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ವಿರೋಧಿಸಿ ಸಿಟಿಜನ್ ಫಾರ್ ಬೆಂಗಳೂರು ಫೋರಂ ಮಾರ್ಚ್ 16ರಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು.

HDK invited elevated corridor protesters to talk

ನಗರದಲ್ಲಿ ಸರ್ಕಾರದ ಎಲಿವೇಟೆಡ್ ಕಾರಿಡಾರ್ ಯೋಜನೆ ಪೂರ್ಣಗೊಳ್ಳಲು ಮೂರು ಸಾವಿರಕ್ಕೂ ಅಧಿಕರ ಮರಗಳು ಧರೆಗೆ ಉರುಳುತ್ತಿವೆ. ಜೊತೆಗೆ ಪ್ರಮುಖ ಕೆರೆಗಳ ಒತ್ತುವರಿಯಾಗುತ್ತಿದೆ. ಈ ಯೋಜನೆ ನಗರದ ವಾತಾವರಣದ ಮೇಲೆ ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ಮರಗಳ ಮಾರಣಹೋಮ ಮಾಡುವ ಬದಲು ಉಪನಗರ ರೈಲು, ಬಸ್ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆಯತ್ತ ಹೆಚ್ಚು ಗಮನವಹಿಸಬೇಕು. ನಮಗೆ ಕಾಂಕ್ರೀಟ್ ಸಾಕು, ಸಮೂಹ ಸಾರಿಗೆ ಬೇಕು ಎಂದು ಆಗ್ರಹಿಸಿದ್ದಾರೆ.

ಬೃಂದಾ ಶ್ರೀಧರ್ ಎನ್ನುವವರು ಎಲಿವೇಟೆಡ್ ಕಾರಿಡಾರ್ ಬೇಡ ಎಂದು ಸಹಿ ಅಭಿಯಾನವನ್ನೂ ಕೂಡ ಆರಂಭಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟಗಾರರನ್ನು ಚರ್ಚೆಗೆ ಕರೆದು ಎಲಿವೇಟೆಡ್ ಕಾರಿಡಾರ್‌ನಿಂದ ಆಗುವ ಉಪಯೋಗವನ್ನು ಮನದಟ್ಟು ಮಾಡಿಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ಟ್ವಿಟ್ಟರ್‌ ಮೂಲಕ ಕುಮಾರಸ್ವಾಮಿಯವರು ಹೋರಾಟಗಾರರಿಗೆ ಆಹ್ವಾನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+