ಅನಂತ ಕುಮಾರ್ ನಮ್ಮ ನೆನಪಿನಿಂದ ಎಂದಿಗೂ ಮಾಸಲಾರರು: ಕುಮಾರಸ್ವಾಮಿ
Recommended Video

ಬೆಂಗಳೂರು, ನವೆಂಬರ್ 12: ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಅನಂತ ಕುಮಾರ್ ಒಬ್ಬ ಮೌಲ್ಯಯುತ ರಾಜಕಾರಣಿ, ಜನನಾಯಕ, ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅನಂತ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅನಂತ ಕುಮಾರ್ ಎಂದಿಗೂ ನಮ್ಮ ನೆನಪಿನಿಂದ ಮಸಲಾರರು ಎಂದು ಹೇಳಿದ್ದಾರೆ.

ಅನಂತ ಕುಮಾರ್ ನಿಧನದಿಂದಾಗಿ ನವೆಂಬರ್ 12ರಂದು ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೂರು ದಿನಗಳ ಕಾಲ ಶೋಕಾಚರಣೆಗೆ ಸರ್ಕಾರ ಆದೇಶ ನೀಡಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿಯವರು ಅನಂತ ಕುಮಾರ್ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.
Deeply pained to hear about the untimely death of Uni.Minister and a dear friend #Ananthakumar.
— CM of Karnataka (@CMofKarnataka) November 12, 2018
A value-based politician, a pro people leader, who made a significant contribution to the country as an MP &Uni.Minister. I have lost a great friend.
May his soul rest in peace pic.twitter.com/FBRicd64M2












Click it and Unblock the Notifications