ಆಡಿಯೋ ಬಿಡುಗಡೆ ಕೇಸ್ : ಎಚ್ಡಿಕೆ ವಿರುದ್ಧದ ದೂರು, ಕಾನೂನು ತಜ್ಞರ ಮೊರೆ
Recommended Video

ಬೆಂಗಳೂರು, ಫೆಬ್ರವರಿ 11: ಅಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಹುಚರ್ಚಿತವಾಗಿರುವ ಆಡಿಯೋ ಮುದ್ರಿಕೆ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಿಎಂ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಇನ್ನು ಎಫ್ ಐಆರ್ ದಾಖಲಿಸಿಲ್ಲ. ಈ ಕೇಸಿನಲ್ಲಿ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದರ ಬಗ್ಗೆ, ಕಾನೂನು ಸಲಹೆಗಾರ ಗಣೇಶ್ ಬಾಬು ಅವರಿಗೆ ಪತ್ರ ಪೊಲೀಸರು ಪತ್ರ ಬರೆದಿದ್ದಾರೆ.
ಸಿಎಂ ಕುಮಾರಸ್ವಾಮಿ ಮತ್ತು ಶರಣಗೌಡ ವಿರುದ್ಧ ಬಿಎಸ್ವೈ ಮಾಧ್ಯಮ ಸಲಹೆಗಾರ ಮರಂಕಲ್ ಅವರು ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದರು. ಈ ದೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ಸಿಡಿ ನಕಲಿಯಾಗಿದ್ದು, ಆಡಿಯೋ ಕಟ್ ಮಾಡಲಾಗಿದೆ ಉಳಿದ ಆಡಿಯೋ ತಿರುಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕುಮಾರಸ್ವಾಮಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ದೇವನದುರ್ಗ ಅತಿಥಿ ಗೃಹಕ್ಕೆ ಗುರುಮಠಕಲ್ ಶಾಸಕರ ಪುತ್ರ ಶರಣಗೌಡ ಹೋದಾಗ ಅಲ್ಲಿ ಪತ್ರಕರ್ತ ಮರಮಕಲ್ ಸೇರಿ ಹಲವರು ಇದ್ದರು ಎಂದು ಹೇಳಿದ್ದರು.
ಸಿಎಂ ಬಿಡುಗಡೆ ಮಾಡಿರುವ ಆಡಿಯೋ ನಕಲಿಯಾಗಿದ್ದು, ತಮಗೆ ಬೇಕಾದಂತೆ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ, ಸಿಎಂ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ದೂರಿನಲ್ಲಿ ಮರಮ್ಕಲ್ ಉಲ್ಲೇಖಿಸಿದ್ದಾರೆ.












Click it and Unblock the Notifications