ಬಿಜೆಪಿ ಶಾಸಕರು ಹೋಟೆಲ್‌ನಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರಾ? ಸಿಎಂ ಪ್ರಶ್ನೆ

ಬೆಂಗಳೂರು, ಜನವರಿ 17: ಇತ್ತೀಚಿನ ದಿನಗಳಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಹೆಚ್ಚಾಗಿದೆ, ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿ ಕುಳಿತು ಬರ ವೀಕ್ಷಣೆ ಮಾಡುತ್ತಿದ್ದಾರೆಯೇ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಗ್ರಾಮದಲ್ಲಿ ಬಿಜೆಪಿ ಶಾಸಕರನ್ನು ಕೂಡಿ ಹಾಕಿದ್ದಾರೆ, ಹೋಟೆಲ್‌ನಲ್ಲಿ ಕುಳಿತು ಶಾಸಕರು ಬರ ವೀಕ್ಷಣೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ನಾನು ಎರಡು ದಿನ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಕ್ಕೆ ಬಿಎಸ್‌ವೈ ವಿವಾದ ಮಾಡಿದ್ದರು, ಈಗ 100 ಮಂದಿ ಶಾಸಕರಿಗೆ ದಿಗ್ಬಂಧನ ಹಾಕಿ ಕೂಡಿ ಹಾಕಿದ್ದೀರ ಇದಕ್ಕೇನು ಉತ್ತರ ಕೊಡುತ್ತೀರ ಎಂದರು.

HDK attack BJP of resort politics in times of Drought

ನಿಮ್ಮ ಹಾಗೆ ನಾವು ಶಾಸಕರನ್ನು ಎಲ್ಲೂ ಕೂಡಿಹಾಕಿಲ್ಲ, ನಮ್ಮ ಶಾಸಕರನ್ನು ಫ್ರೀಯಾಗಿ ಬಿಟ್ಟಿದ್ದೇವೆ, ನಮ್ಮ ಯಾವ ಶಾಸಕರಿಗೀ ದಿಗ್ಬಂಧನ ಹಾಕಿರಲಿಲ್ಲ, ಬಿಜೆಪಿಯ ಶಾಸಕರನ್ನು ಸೆಳೆಯುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

ಬಿಜೆಪಿಯವರು ರೆಸಾರ್ಟ್ ಪಾಲಿಕ್ಸ್ ಮಾಡುತ್ತಿದ್ದಾರೆ ಎಂದು ನಾವು ಭಯದಿಂದ ಕುಳಿತಿಲ್ಲ, ನಾನು ಕೂಲ್ ಆಗಿಯೇ ಇದ್ದೇನೆ, ನಮ್ಮ ಶಾಸಕರು ಏನು ಎಂದು ನಮಗೆ ತಿಳಿದಿದೆ ಯಾವುದೇ ಆತಂಕವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+