ಸಚಿವ ಮಹೇಶ್ ರಾಜಿನಾಮೆ, ರಾಜ್ಯಪಾಲರಿಗೆ ರವಾನೆ : ಎಚ್ಡಿಕೆ ಸ್ಪಷ್ಟನೆ

Recommended Video

      ಸಚಿವ ಎನ್ ಮಹೇಶ್ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ | Oneindia Kannada

      ಬೆಂಗಳೂರು, ಅಕ್ಟೋಬರ್ 15: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿಎಸ್‌ಪಿಯ ಎನ್ ಮಹೇಶ್ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿರುವುದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

      ಸೋಮವಾರ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಮಹೇಶ್ ರಾಜಿನಾಮೆಯನ್ನು ರಾಜ್ಯಪಾಲರಿಗೆ ರವಾನಿಸಿದ್ದು,, ಶೀಘ್ರದಲ್ಲೇ ಸ್ವೀಕೃತಗೊಳ್ಳುವ ಸಾಧ್ಯತೆ ಇದೆ. ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಸಚಿವ ಮಹೇಶ್ ಅವರು ರಾಜಿನಾಮೆ ನೀಡಿದ್ದರು.

      ಹೀಗಾಗಿ ಬಿಎಸ್‌ಪಿಯ ಆಂತರಿಕ ವಿಚಾರ ಆಗಿರುವುದರಿಂದ ಆ ಬಗ್ಗೆ ಮರು ಪ್ರಶ್ನಿಸದೆ ರಾಜಿನಾಮೆ ಅಂಗೀಕರಿಸಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದೊಂದಿಗೆ ಬಿಎಸ್‌ಪಿ ಕೂಡ ಒಟ್ಟಾಗಿಯೇ ಹೋರಾಟ ನಡೆಸಲಿದೆ.

      HDK accept minister N Mahesh resignation

      ಮೈಸೂರು ದಸರಾ - ವಿಶೇಷ ಪುರವಣಿ

      ಇದೀಗ ಘೋಷಣೆಯಾಗಿರುವ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಎಸ್‌ಪಿ ಸರ್ಕಾರದೊಂದಿಗಿದೆ ಇದರ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.

      ಈ ಮೊದಲು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಾರೆ ಅಲ್ಲಿವರೆಗೆ ಮಹೇಶ್ ರಾಜಿನಾಮೆ ಅಂಗೀಕಾರ ಮಾಡುವುದಿಲ್ಲ ಎಂದಿದ್ದರು. ಆದರೆ ಇದೀಗ ಅವರ ರಾಜಿನಾಮೆ ಅಂಗೀಕಾರ ಮಾಡಿ ರಾಜ್ಯಪಾಲರಿಗ ಕಳುಹಿಸಿದ್ದಾರೆ. ಎನ್‌ ಮಹೇಶ್ ಅಕ್ಟೋಬ್ರ 11ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+