ಮೆಟ್ರೋ ನೌಕರರ ಮುಷ್ಕರವಿಲ್ಲ: ಎಂದಿನಂತೆ ಮೆಟ್ರೋ ಸಂಚಾರ

ಬೆಂಗಳೂರು, ಏಪ್ರಿಲ್ 27: ಮೇ.28ರೊಳಗೆ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರುವಂತೆ ಬಿಎಂಆರ್ ಸಿಎಲ್ ಆಡಳಿತ ಮಂಡಳಿ ಹಾಗೂ ನೌಕರರ ಸಂಘಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕಳೆದ ಒಂದು ತಿಂಗಳಿನಿಂದ ಸಭೆ ನಡೆಸಿ, ನೌಕರರ ಪರವಾಗಿ ಯಾವುದೇ ನರ್ಧಾರವನ್ನು ಬಿಎಂಆರ್ ಸಿಎಲ್ ಅಧಿಕಾರಿಗಳು ಕೈಗೊಳ್ಳದ ಹಿನ್ನೆಲೆಯಲ್ಲಿ ನೌಕರರು ಏ.28ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ವಿವಿಧ ಬೇಡಿಕೆಗಳ ಈಡೇರಿಕೆಯಾಗಿ ನೌಕರರು ಮುಷ್ಕರವನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಇದರ ಮಧ್ಯೆ ಬಿಎಂಆರ್ ಸಿಎಲ್ ಅಧಿಕಾರಿಗಳು ದೇಶದಲ್ಲಿರುವ ಎಲ್ಲಾ ಮೆಟ್ರೋಗಳಿಗೂ ಎಸ್ಮಾ ಕಾಯ್ದೆ ಜಾರಿ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನೌಕರರು ಮುಷ್ಕರವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

hc stays BMRCL emlpoyees strike

ಮೆಟ್ರೋ ರೈಲ್ವೆ ಕಾಯ್ದೆ 2002ರ ಸೆಕ್ಷನ್ 90 ರ ಪ್ರಕಾರ ಮೆಟ್ರೋ ನೌಕರರು ಸಾರ್ವಜನಿಕ ಸೇವೆಯಲ್ಲಿರುವವರಾಗಿದ್ದಾರೆ. ಮೆಟ್ರೋ ಸೇವೆಯನ್ನು ಪ್ರತಿದಿನ ಲಕ್ಷಾಂತರ ಜನರು ಬಳಸಿಕೊಳ್ಳುವುದರಿಂದ ಒಂದು ದಿನವೂ ಸೇವೆ ಸ್ಥಗಿತಗೊಳಿಸದಂತೆ ಕ್ರಮ ಕೈಗೊಳ್ಳಬೇಕಿದೆ. ದೇಶದ ಎಲ್ಲ ಮೆಟ್ರೋ ಸೇವೆಗಳನ್ನು ಕೇಂದ್ರದ ಎಸ್ಮಾ ಕಾಯ್ದೆ 1981 ರಡಿ ಅಗತ್ಯ ಸೇವೆಗಳು ಎಂದು ಹೆಸರಿಸುವ ಅಗತ್ಯವಿದೆ.

ಹೈಕೋರ್ಟ್ ನಿರ್ದೇಶನದಂತೆ ಒಂದು ತಿಂಗಳು ಸಭೆ ನಡೆದಿದ್ದರೂ ಒಂದೂ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿಲ್ಲ, ಈಡೇರಿಸಲಿರುವ ಬೇಡಿಕೆಗಳ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡುತ್ತೇವೆಯೇ ಹೊರತು ನೌಕರರ ಸಂಘಕ್ಕಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರರು ಸಂಧಾನವನ್ನು ಬಿಟ್ಟು ಮುಷ್ಕರದ ಹಾದಿಯಲ್ಲಿ ತೆರಳಲು ಮುಂದಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+