Get Updates
Get notified of breaking news, exclusive insights, and must-see stories!

ಮೈತ್ರಿಯಾ ಕೇಸ್: ಕಾರ್ತಿಕ್ ಗೌಡಗೆ ಮತ್ತೆ ವಿಚಾರಣೆ ಭೀತಿ

ಬೆಂಗಳೂರು, ಜ.29: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರು ನಟಿ ಮೈತ್ರಿಯಾ ಗೌಡ ತಮ್ಮ ವಿರುದ್ಧ ನೀಡಿರುವ ಅತ್ಯಾಚಾರ, ವಂಚನೆ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಕಾರ್ತಿಕ್ ಗೌಡ ಅವರು ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ನಡೆಸಿ, ತೀರ್ಪನ್ನು ಜ.29ಕ್ಕೆ ಕಾಯ್ದಿರಿಸಿತ್ತು. ಕಾರ್ತಿಕ್ ಗೌಡ ಅವರ ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಲಾಗಿದೆ.

ಹೀಗಾಗಿ ಮೈತ್ರಿಯಾ ಪ್ರೇಮ ಪ್ರಸಂಗ ಪ್ರಕರಣದಲ್ಲಿ ಕಾರ್ತಿಕ್ ಗೌಡ ಮತ್ತೊಮ್ಮೆ ಪೊಲೀಸರ ತನಿಖೆಗೆ ಲಭ್ಯವಾಗಿದ್ದು, ತನಿಖಾಧಿಕಾರಿಗಳು ಅಗತ್ಯ ಬಿದ್ದಾಗ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಬಹುದಾಗಿದೆ. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]

Karnataka High Court rejects Karthik Gowda's plea, Mythriya karthik case

ಕಾರ್ತಿಕ್ ಗೌಡ ಅವರ ತಂದೆ ಪ್ರಭಾವಿ ರಾಜಕಾರಣಿ ಹಾಗೂ ಕೇಂದ್ರ ಸಚಿವರಾಗಿರುವುದರಿಂದ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿಯ ದೂರು ನೀಡಲಾಗಿದೆ. ಮೈತ್ರಿಯಾ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದಂತೆ ಅತ್ಯಾಚಾರ ನಡೆದಿಲ್ಲ ದೂರನ್ನು ರದ್ದುಗೊಳಿಸಿ ಎಂದು ಕಾರ್ತಿಕ್ ಗೌಡ ಪರ ಕೆ.ಎಂ.ನಟರಾಜ್ ವಾದಿಸಿದ್ದರು. ಆದರೆ, ನಟರಾಜ್ ಅವರ ವಾದವನ್ನು ಹೈಕೋರ್ಟ್ ಪೀಠ ತಿರಸ್ಕರಿಸಿದೆ. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]

ಮೈತ್ರಿಯಾ ಜೊತೆ ಮದುವೆ ಆಗಿಲ್ಲ: ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಳ್ಳಿ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ. [ಕೌಟುಂಬಿಕ ಕೋರ್ಟಿಗೆ ಕಾಲಿಟ್ಟಿದ್ದೇಕೆ?]

ಇದಾದ ಬಳಿಕ ಕಾನೂನಿನ ಹೋರಾಟದಿಂದ ಕೆಲ ಕಾಲ ಬ್ರೇಕ್ ತೆಗೆದುಕೊಂಡ ಮೈತ್ರಿಯಾ ಅವರು ಮತ್ತೊಮ್ಮೆ ಜಾಹೀರಾತು, ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಮದುವೆ ತಯಾರಿಯಲ್ಲಿದ್ದ ಕಾರ್ತಿಕ್ ಈಗ ವಿಚಾರಣೆಯ ಭೀತಿ ಎದುರಿಸುತ್ತಿದ್ದರೂ ತಕ್ಕಮಟ್ಟಿನ ನಿರಾಳತೆ ಹೊಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+