ಜಯನಗರ ಸಬ್ಜ್ ಹೋಟೆಲ್ ನ ಬೊಂಬಾಟ್ ಊಟ ಇನ್ನೂ ಮಾಡಿಲ್ವ!

ದಕ್ಷಿಣ ಭಾರತ, ಉತ್ತರ ಭಾರತ ಎರಡರ ಕಾಂಬಿನೇಷನ್ ನ ಭರ್ಜರಿ ಬಫೆ ಊಟಕ್ಕೆ ಜಯನಗರದಲ್ಲಿರುವ ಸಬ್ಜ್ ಹೋಟೆಲ್ ಗೆ ಒಮ್ಮೆ ಭೇಟಿ ಕೊಡಿ. ಹೋಟೆಲ್ ನಲ್ಲಿ ಸಿಗುವ ಊಟದ ಮೆನು, ಬೆಲೆ, ಸಂಪರ್ಕ ಸಂಖ್ಯೆ ಎಲ್ಲದರ ಮಾಹಿತಿ ಇಲ್ಲಿದೆ, ನಿಮಗಾಗಿ..

ಬೆಂಗಳೂರು, ಫೆಬ್ರವರಿ 18: ಶನಿವಾರ-ಭಾನುವಾರದ ವಾರಾಂತ್ಯ ಮನಸ್ಥಿತಿಯಲ್ಲಿದ್ದೀರಾ? ಒಂದೊಳ್ಳೆ ವೆಜಿಟೇರಿಯನ್ ಹೋಟೆಲ್ ಗೆ ಹೋಗಬೇಕು ಅನ್ನೋದು ನಿಮ್ಮ ಇರಾದೆಯಾ? ಅಲ್ಲಿ ಉತ್ತರ ಭಾರತ- ದಕ್ಷಿಣ ಭಾರತ, ಇಟಾಲಿಯನ್ ಹೀಗೆ ವಿವಿಧ ರೀತಿ ಆಹಾರ ಸಿಗಬೇಕು ಅನ್ನೋದು ನಿಮ್ಮ ಆದ್ಯತೆ ಅನ್ನೋದಾದರೆ ನಮ್ಮ ಆಯ್ಕೆಯ ಹೋಟೆಲ್ ವೊಂದನ್ನು ಈ ವಾರ ನಿಮಗೆ ಪರಿಚಯಿಸ್ತಿದೀವಿ.

ಜಯನಗರದಲ್ಲಿ ಸ್ವಿಮ್ಮಿಂಗ್ ಪೂಲ್ ರಸ್ತೆಯಲ್ಲಿ ಕಾಸ್ಮೋ ಪಾಲಿಟನ್ ಕ್ಲಬ್ ನ ಕೆಳಗೆ ಇರುವ 'ಸಬ್ಜ್' ಹೋಟೆಲ್ ಗೆ ನೀವಿನ್ನೂ ಹೋಗಿಲ್ಲ ಅಂದರೆ, ಖಂಡಿತಾ ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು. ಇಲ್ಲಿ ಬಫೆ ಸರ್ವೀಸ್. ಕನಿಷ್ಠ 25 ಬಗೆಯ ಆಹಾರ ಪದಾರ್ಥಗಳು ಇರುತ್ತವೆ. ವಾರದ ಐದು ದಿನ ಒಂದು ದರವಾದರೆ, ಶನಿವಾರ ಹಾಗೂ ಭಾನುವಾರ ಉಳಿದ ದಿನಕ್ಕಿಂತ ಹೆಚ್ಚಿರುತ್ತದೆ.[ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ]

Have you taste food in Jayanagar Subz hotel?

ಆರಂಭದಲ್ಲಿ ಎರಡು ಬಗೆಯ ಸೂಪ್ ಇಂಡಿಯನ್ ಅಥವಾ ಚೈನೀಸ್- ಅದು ನಿಮ್ಮ ಆಯ್ಕೆ. ಪಾನಿಪುರಿ, ಮಸಾಲಪುರಿ ಇನ್ನೂ ಕೆಲವು, ಗೋಬಿ ಮಂಚೂರಿ, ಪನ್ನೀರ್ ಟಿಕ್ಕಾ, ನೂಡಲ್ಸ್, ಇಟಾಲಿಯನ್ ಪಾಸ್ತಾ, ವೆಜ್ ಬಿರಿಯಾನಿ, ರೋಟಿ ಅಥವಾ ಕುಲ್ಚಾ, ಅದಕ್ಕೆ ಎರಡು ಥರ ಸೈಡ್ಸ್, ಅನ್ನ, ರಸಂ, ಸಾಂಬಾರ್, ಮೊಸರನ್ನ...

Have you taste food in Jayanagar Subz hotel?

ಎರಡರಿಂದ ಮೂರು ಥರದ ಸಿಹಿ, ಪಾಯಸ, ಹಣ್ಣು, ಪೇಸ್ಟ್ರಿ, ಐಸ್ ಕ್ರೀಂ...ಪಟ್ಟಿ ಇನ್ನೂ ಮುಂದುವರಿಯುತ್ತದೆ. ಮಧ್ಯಾಹ್ನ 12ರಿಂದ 3.30 ಮತ್ತು ರಾತ್ರಿ 7ರಿಂದ 11ರವರೆಗೆ ಇಲ್ಲಿ ಊಟ ಸಿಗುತ್ತದೆ. ಮುಂಚಿತವಾಗಿಯೇ ಫೋ 080-45128747 ಗೆ ಕರೆ ಮಾಡಿ, ಸೀಟು ಕೂಡ ಕಾಯ್ದಿರಿಸಬಹುದು.[ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!]

Have you taste food in Jayanagar Subz hotel?

ಸೋಮವಾರದಿಂದ ಗುರುವಾರ ಮಧ್ಯಾಹ್ನ 12ರಿಂದ 3.30 ಒಬ್ಬರಿಗೆ 338+ ತೆರಿಗೆ
ಸೋಮವಾರದಿಂದ ಗುರುವಾರ ರಾತ್ರಿ 7ರಿಂದ 11ರವರೆಗೆ ಒಬ್ಬರಿಗೆ 427+ ತೆರಿಗೆ[ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]

Have you taste food in Jayanagar Subz hotel?

ಶುಕ್ರವಾರದಿಂದ ಭಾನುವಾರದವರೆಗೆ ಮಧ್ಯಾಹ್ನ 12ರಿಂದ 3.30 ಒಬ್ಬರಿಗೆ 479+ ತೆರಿಗೆ
ಶುಕ್ರವಾರದಿಂದ ಭಾನುವಾರದವರೆಗೆ ರಾತ್ರಿ 7ರಿಂದ 11ರವರೆಗೆ ಒಬ್ಬರಿಗೆ 519+ ತೆರಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+