ಪ್ರಜಾತಂತ್ರದಲ್ಲಿ ನಂಬಿಕೆ ಕಳೆದುಕೊಂಡ್ರಾ ಬೆಂಗಳೂರಿನ ಅರ್ಧದಷ್ಟು ಜನ: ಐತಿಹಾಸಿಕ ನೀರಸ ಪ್ರತಿಕ್ರಿಯೆ

ಮತದಾನ ಮಾಡಿ ಎಂದು ಚುನಾವಣಾ ಆಯೋಗ ಸಾಕಷ್ಟು ಪ್ರಚಾರ ಮಾಡಿದ ಬಳಿಕವೂ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನದ ಪ್ರಮಾಣವನ್ನು ನೋಡಿದರೆ ಬೆಂಗಳೂರಿನ ಅರ್ಧದಷ್ಟು ಜನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡ್ರಾ ಎನ್ನುವ ಅನುಮಾನ ಬರುತ್ತಿದೆ.

ಬೆಂಗಳೂರು ಶೇಕಡಾ 50 ರಷ್ಟು ಮಾತ್ರ ಮತದಾನವಾಗಿದ್ದು, ಶಿಕ್ಷಿತ ಸಮುದಾಯದ ಜನರೇ ಪ್ರಜಾಪ್ರಭುತ್ವದ ಕರ್ತವ್ಯದಿಂದ ವಿಮುಖರಾಗಿದ್ದಾರೆ. ಮತದಾನದ ದಿನ ರಜೆಯ ಮಜಾ ಅನುಭವಿಸಿ ಬಳಿಕ ಅಭಿವೃದ್ಧಿ, ಸರ್ಕಾರದ ಬಗ್ಗೆ ಮಾತನಾಡಬೇಡಿ ಎಂದು ಮತದಾನ ಮಾಡಿದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Have Bengaluru Voters Lost Faith in Democracy Dismal Response to Lok Sabha Polls

ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

ರಾಜ್ಯದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ಒಟ್ಟಾರೆ 64.4% ರಷ್ಟು ಮತದಾನವಾಗಿದೆ. ಆದರೆ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ದಕ್ಷಿಣದಲ್ಲಿ 49.37% ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 49.21% ಮತ್ತು ಬೆಂಗಳೂರು ಉತ್ತರದಲ್ಲಿ 50.91% ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರ 61.78% ರಷ್ಟು ಮತದಾನವಾಗಿದ್ದು, ಇದ್ದಿದ್ದರಲ್ಲಿ ಉತ್ತಮವಾಗಿದೆ.

ಕ್ಷೇತ್ರವಾರು ಮತದಾನದ ವಿವರ

ಮಂಡ್ಯದಲ್ಲಿ 74.87%ರಷ್ಟು ಮತದಾನವಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ. ಚಾಮರಾಜನಗರ 69.6%, ಚಿಕ್ಕಬಳ್ಳಾಪುರ 71.85%, ಚಿತ್ರದುರ್ಗ 67.52%, ದಕ್ಷಿಣ ಕನ್ನಡ 72.3%, ಹಾಸನ 72.13%, ಕೋಲಾರ 73.25%, ಮೈಸೂರು 66.96%, ತುಮಕೂರು 72.1, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 72.69% ರಷ್ಟು ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+