ದಂಪತಿಗೆ ದುಃಸ್ವಪ್ನವಾದ ಹೊಸ ವರ್ಷಾಚರಣೆ! ಪತಿ ಎದುರಲ್ಲೇ ಪತ್ನಿ ಮೇಲೆ ದೌರ್ಜನ್ಯ!

ಬೆಂಗಳೂರು, ಜನವರಿ 01: ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆಯ ವೇಳೆ ಮಹಿಳೆಯ ಮೇಲೆ ಮೂವರು ಅಸಭ್ಯವಾಗಿ ವರ್ತಿಸಿ, ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಎಂಜಿ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ವಾಪಸ್ಸಾಗುತ್ತಿದ್ದ ದಂಪತಿಯನ್ನು ರಿಚ್ಮಂಡ್ ರಸ್ತೆಯಲ್ಲಿ ಮೂವರು ದುಷ್ಕರ್ಮಿಗಳು ತಡೆದಿದ್ದಾರೆ. ನಂತರ ಪತಿಯ ಎದುರಲ್ಲೇ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಆಕೆಯ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ, ಫೋನ್ ಅನ್ನೂ ಕಸಿದು ಕೊಂಡಿದ್ದಾರೆ.

ನಂತರ ಕಷ್ಟಪಟ್ಟು ತಪ್ಪಿಸಿಕೊಂಡು ಬಂದ ದಂಪತಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪರಿಣಾಮ, ಓರ್ವ ಆರೋಪಿ ಸೆರೆ ಸಿಕ್ಕಿದ್ದಾನೆ. ಇನ್ನೂ ಇಬ್ಬರು ಆರೋಪಿಗಳ ಶೋಧಕಾರ್ಯ ನಡೆಯುತ್ತಿದೆ.

Harassment on woman in MG Road after new year celebration

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಗಳಲ್ಲಿ ಪ್ರತಿ ವರ್ಷವೂ ಹೊಸ ವರ್ಷಾಚರಣೆಯ ವೇಳೆ ಅಹಿತಕರ ಘಟನೆ ನಡೆಯುತ್ತಲೇ ಇದೆ. ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ, ಪುಂಡರನ್ನು ನಿಯಂತ್ರಿಸುವುದು ಸವಾಲಿನ ವಿಷಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+