Happy New Year 2026: ಹೊಸ ವರ್ಷದ ಶುಭಾಶಯಗಳ ಮೆಸೇಜ್ ಓದುವ ಮೊದಲು ಎಚ್ಚರ!
ಕನ್ನಡ ನಾಡು ಸೇರಿದಂತೆ ಇಡೀ ಜಗತ್ತಿನಲ್ಲಿ ಸಂಭ್ರಮ ಮನೆಮಾಡಿದೆ, ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿರುವ ಸಮಯದಲ್ಲಿ 2025ಕ್ಕೆ ಗುಡ್ಬೈ ಹೇಳಿ 2026ಕ್ಕೆ ಹಾಯ್ ಹೇಳಲು ಜನ ರೆಡಿಯಾಗಿ ಕೂತಿದ್ದಾರೆ. ಪ್ರತಿಯೊಬ್ಬರು ತಮ್ಮ ಸ್ನೇಹಿತರು ಹಾಗೇ ಪ್ರೀತಿ ಪಾತ್ರರಿಗೆ ಹೊಸ ವರ್ಷದ ಶುಭಾಶಯ ಸಾರುವ ಮೆಸೇಜ್ ಕಳಿಸಲು ಸಜ್ಜಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ನೀವು ಎಚ್ಚರವಾಗಿ ಇರದಿದ್ದರೆ ನಿಮ್ಮ ಅಕೌಂಟ್ನಿಂದ ಹಣ ಹೋಗುವ ಜೊತೆಗೆ ನಿಮ್ಮ ಮೊಬೈಲ್ ಕೂಡ ಹ್ಯಾಕ್ ಆಗಬಹುದು ಎಚ್ಚರ! ಯಾಕೆ ಅನ್ನೋದನ್ನ ವಿವರವಾಗಿ ಓದೋಣ ಬನ್ನಿ...
ಸಾಮಾನ್ಯವಾಗಿ ಹೊಸವರ್ಷ ಬಂದರೆ ನೂರಾರು ಮೆಸೇಜ್ ಮೊಬೈಲ್ಗೆ ಬರುತ್ತದೆ. ಅದರಲ್ಲೂ ಈ ರೀತಿ ಬರುವ ಸಂದೇಶಗಳನ್ನು ನಾವು ಓದಲು ಲಿಂಕ್ ಮೇಲೆ ಕ್ಲಿಕ್ ಮಾಡುತ್ತೇವೆ. ಹೀಗೆಲ್ಲಾ ಜನರ ಸಂಭ್ರಮದ ಕ್ಷಣವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಖದೀಮರು, ಮೋಸ ಮಾಡಿ ನಿಮ್ಮ ಅಕೌಂಟ್ನಲ್ಲಿ ಇರುವ ಹಣದ ಸಮೇತ ನಿಮ್ಮ ಖಾಸಗಿ ಮಾಹಿತಿ ಕದಿಯಲು ಕಾಯುತ್ತಾ ಕೂತಿದ್ದಾರೆ. ಈ ಬಗ್ಗೆ ಇದೀಗ ಪೊಲೀಸ್ ಪಡೆ ಎಚ್ಚರಿಕೆ ಸಂದೇಶ ರವಾನಿಸಿದೆ, ಅದರಲ್ಲೂ ಒಂದೇ ಒಂದು ಕ್ಲಿಕ್ ನಿಮ್ಮನ್ನು ಯಾಮಾರಿಸಬಹುದು ಹುಷಾರ್.

ಹೊಸ ವರ್ಷದ ಶುಭಾಶಯ ಓದುವವರೇ ಎಚ್ಚರ!
ಹೌದು, ಬೆಂಗಳೂರು ನಗರ ಪೊಲೀಸರು ಹಾಗೂ ಕರ್ನಾಟಕ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿ ಅಧಿಕಾರಿಗಳು ಕನ್ನಡ ನಾಡಿನ ಜನರಿಗೆ ಎಚ್ಚರದಿಂದ ಇರಲು ಸಂದೇಶ ನೀಡಿದ್ದಾರೆ. ಈ ಪೈಕಿ ನ್ಯೂ ಇಯರ್ ಅಂದ್ರೆ ಹೊಸ ವರ್ಷದ ಶುಭಾಶಯ ಕೋರುವ ಸಂದೇಶ ಬಂದಾಗ, ನೀವು ಅಲರ್ಟ್ ಆಗಿ ಇರಬೇಕು. ಯಾಕಂದ್ರೆ ನಿಮಗೆ ಬರುವ ಮೆಸೇಜ್ ಲಿಂಕ್ ಮೂಲಕ ಇದ್ದರೆ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಶುಭಾಶಯದ ಜೊತೆ ಅಟ್ಯಾಚ್ ಮಾಡಿದ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಅಂದ್ರೆ ಎಪಿಕೆ ಫೈಲ್ಗಳನ್ನ ಒತ್ತುವ ಮೊದಲು ಎಚ್ಚರಿಕೆ ವಹಿಸಿ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಎಪಿಕೆ ಫೈಲ್ ಅಥವಾ ಲಿಂಕ್ ಮೂಲಕ ಸೈಬರ್ ಕಳ್ಳರು ಜನ ಸಾಮಾನ್ಯರಿಗೆ ಮೋಸ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಸ ವರ್ಷದ ಹಿನ್ನೆಲೆಯಲ್ಲಿ ಈ ರೀತಿ ದೊಡ್ಡ ಮಟ್ಟದಲ್ಲಿ ಮೊಸ ಮಾಡುವ ಜಾಲ ಕೂಡ ಕಾಯುತ್ತಿದೆ. ನಿಮ್ಮ ಮೊಬೈಲ್ಗೆ ವಾಟ್ಸಾಪ್, ಟೆಲಿಗ್ರಾಮ್ ಹಾಗೂ ಇನ್ಸ್ಟಾಗ್ರಾಮ್ ಸೇರಿ ಟೆಕ್ಸ್ಟ್ ಹೀಗೆ ಯಾವುದೇ ರೀತಿಯಲ್ಲಿ ಮೆಸೇಜ್ ಬಂದರೂ ಅದನ್ನು ಒತ್ತುವ ಮೊದಲು ಅಲರ್ಟ್ ಆಗಿರಿ. ಈ ಬಗ್ಗೆ ಕರ್ನಾಟಕ ಪೊಲೀಸರು ಜನರಿಗೆ ಎಚ್ಚರದಿಂದ ಇರಲು ಸಂದೇಶ ರವಾನಿಸಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications