ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್
'ನೀ ನನ್ನ ಕಣ್ಣಲೇ ಹರಸಿದೆ ನನ್ನ ಬಾನೆತ್ತರ ಬೆಳೆಸಿದೆ..' ಎಂದು ಆರಂಭಗೊಳ್ಳುವ ಸಾಲುಗಳುಳ್ಳ ವಿಶೇಷ ಗೀತೆ ವಿಶ್ವದ ಎಲ್ಲಾ ಅಮ್ಮಂದಿರಿಗೆ ಅರ್ಪಿತವಾಗಿದೆ. ಗಾಯಕ, ಸಂಗೀತಗಾರ ವಾಸು ದೀಕ್ಷಿತ್ ಅವರು ಸಂಯೋಜಿಸಿ ಹಾಡಿರುವ ಈ ಗೀತೆ 'ವಿಶ್ವ ಅಮ್ಮಂದಿರ ದಿನ' ಕ್ಕಾಗಿ ನಿಮ್ಮ ಮುಂದಿದೆ.
ಪ್ರತಾಪ್ ಸಿ ಅವರ ಅರ್ಥಪೂರ್ಣ ಸಾಹಿತ್ಯಕ್ಕೆ ಸಂಯೋಜನೆ ಒದಗಿಸಿ ದನಿ ನೀಡಿರುವ ವಾಸು ಅವರು ಹಾಡಿನ ಚಿತ್ರೀಕರಣವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರೆ. [ವಿಡಿಯೋ : ವಿಶ್ವ ತಾಯಂದಿರ ದಿನಕ್ಕೆ ಒನ್ ಇಂಡಿಯಾದಿಂದ ಕಾಣಿಕೆ]
ಅಮ್ಮನನ್ನು ಕೂರಿಸಿಕೊಂಡು ಮಕ್ಕಳು ತಮ್ಮ ತಾಯಿಯ ಬಗ್ಗೆ ಕೈ ಸನ್ನೆಯಲ್ಲಿ ವಿವರಿಸುವ ರೀತಿ ಅನನ್ಯವಾಗಿದೆ. ಯಾವ ಭಾಷೆ, ಪದಕ್ಕೂ ನಿಲುಕದ ಸಂಬಂಧ, ಅನುಬಂಧವನ್ನು ಈ ರೀತಿ 4.10 ನಿಮಿಷಗಳ ವಿಡಿಯೋದಲ್ಲಿ ತೋರಿಸಲಾಗಿದೆ.

ನೀ ನನ್ನ ಕಣ್ಣಲೇ ಹರಸಿದೆ.. ನನ್ನ ಬಾನೆತ್ತರ ಬೆಳೆಸಿದೆ
ಕಲ್ಪನೆಗಳ ಆಚೆಗೆ ಸೆಳೆದೆ, ಕಂಬನಿಗಳಿಗೆ ಕೊಡೆ ಹಿಡಿದು
ಅಂದು ನೀ.. ಕಂಡ ಕನಸು ನಾನಲ್ಲವೇ
ಅಮ್ಮ... ಅಮ್ಮ... ಅಮ್ಮ
ಮೊದಲ ನೋಡದ ಅರಿವೇ ಇಲ್ಲ
ಎಡವಿದಾಗ ನಡೆಸಿದೆ ಮೆಲ್ಲ
ತುಂಬು ಪ್ರೀತಿಯ ಚಿಲುಮೆಯ ಹರಿಸಿ
ನನ್ನ ಮುಖದಲ್ಲಿ ನಗುವನ್ನು ತರಿಸಿ
ಆಸೆಗಳಿಗೆ ನೀರೆರೆದು, ನೋವುಗಳ ತಡೆಹಿಡಿದು
ಸೋಲುಗಳಲ್ಲಿ ಜೊತೆ ನಿಂತು
ಗುರಿಯೆಡೆಗೆ ಕೈ ಹಿಡಿದು
ನೀ ಅಕ್ಕರೆಯ ಸಿಹಿ ಇನ್ನೆಲ್ಲಿದೆ
ಅಮ್ಮ....ಅಮ್ಮ... ಅಮ್ಮ...(ನೀ ನನ್ನ ಬಾಳ ಬೆಳಗಿದೆ...)

ಬೆಂಗಳೂರು ಮೂಲದ ಮ್ಯೂಸಿಕಲ್ ಬ್ಯಾಂಡ್ ಸ್ವರಾತ್ಮದ ಭಾಗವಾಗಿರುವ ವಾಸು ದೀಕ್ಷಿತ್ ಅವರು ಗಾಯಕ ಹಾಗೂ ಗಿಟಾರಿಸ್ಟ್ ಆಗಿ ಜನಪ್ರಿಯರಾಗಿದ್ದಾರೆ. [ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]
ಗಾಯಕ ರಘು ದೀಕ್ಷಿತ್ ಅವರ ಸೋದರ ವಾಸು ಅವರು ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮಕಾವ್ಯಂ ಕನ್ನಡ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications