ಏರೋ ಇಂಡಿಯಾದಲ್ಲಿ ಎಚ್ಎಎಲ್ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ

ಬೆಂಗಳೂರು, ಫೆ. 12: ಏರೋ ಇಂಡಿಯಾ 2015ಕ್ಕೆ ಎಚ್ಎಎಲ್ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿವಿಧ ಪ್ರದರ್ಶನಗಳನ್ನು ನೀಡಲಿದೆ. ಪ್ರದರ್ಶನದಲ್ಲಿ ಎಚ್ಎಎಲ್ ನ ಲೈಟ್ ಕಾಂಬಾಟ್ ಹೆಲಿಕಾಪ್ಟರ್ (ಎಲ್ ಸಿಎಚ್) ಮತ್ತು ತೇಜಸ್ ಹಾರಾಟ ನಡೆಸಲಿವೆ.

ಕಂಪನಿ 75 ವರ್ಷಗಳಿಂದ ಮಾಡುತ್ತಿರುವ ಸಂಶೋಧನೆಗಳ ಅನಾವರಣ ಈ ಪ್ರದರ್ಶನದಲ್ಲಿ ಆಗಲಿದೆ. ಮೆಕ್ ಇನ್ ಇಂಡಿಯಾಕ್ಕೆ ಕೈ ಜೋಡಿಸಿರುವ ಸಂಸ್ಥೆ ನಮ್ಮ ದೇಶದಲ್ಲಿಯೇ ಅತ್ಯಾಧುನಿಕ ಯುದ್ಧೋಪಕರಣ ತಯಾರಿಕೆಗೆ ಮುಂದಾಗಿದೆ. ಇನ್ನು ಹೆಸರಿಡದ ಕೆಲ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ ಎಂದು ಎಚ್ ಎಎಲ್ ಅಧ್ಯಕ್ಷ ಟಿ. ಸುವರ್ಣ ರಾಜು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.['ಏರೋ ಇಂಡಿಯಾ' ಪ್ರದರ್ಶನದಲ್ಲಿ 'ಮೇಕ್ ಇನ್ ಇಂಡಿಯಾ']

hal

ಭೇಟಿ ನೀಡುವವರು ಹಾರಾಡಬಹುದು!
ಈ ಬಾರಿ ಪ್ರದರ್ಶನಕ್ಕೆ ಭೇಟಿ ನೀಡುವವರು ಯುದ್ಧ ವಿಮಾನದಲ್ಲಿನ ಹಾರಾಟದ ಅನುಭವ ಪಡೆಯಲು ಸಾಧ್ಯವಿದೆ. ನಾವು ಅತ್ಯಾಧುನಿಕ ಯುದ್ಧ ವಿಮಾನಗಳ ಹಾರಾಟ ನಡೆಸಲಿದ್ದೇವೆ. ಭಾರತದ ಸೇನೆಯೊಂದಿಗೆ ಹೊಂದಿರುವ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಪ್ರದರ್ಶನಕ್ಕೆ ಭೇಟಿ ನೀಡುವವರು ವಿಮಾನದಲ್ಲಿ ಕುಳಿತು ಭೂಮಿಯ ಮೇಲ್ಮೈ ನೋಡಬಹುದು ಎಂದು ರಾಜು ಮಾಹಿತಿ ನೀಡಿದ್ದಾರೆ.[ಪ್ರಧಾನಿ ಮೋದಿ ಯುದ್ಧ ವಿಮಾನ ಏರೋದಿಲ್ವೇ?]

hal 2

ರುದ್ರ, ಎಲ್ ಸಿಎಚ್, ತೇಜಸ್ ಎಸ್ ಪಿ-1 ನಂಥ ಯುದ್ಧ ವಿಮಾನಗಳು ವಿವಿಧ ಪ್ರದರ್ಶನ ನೀಡಲಿವೆ. ಇದೇ ಮೊದಲ ಬಾರಿಗೆ ಕಡಿಮೆ ಭಾರದ ಹೆಲಿಕಾಪ್ಟರ್ ಗಳು ಆಗಸದಲ್ಲಿ ಚಿತ್ತಾರ ಮೂಡಿಸಲಿವೆ. ಒಂದೇ ಇಂಜಿನ್ ಹೊಂದಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ವಿವಿಧ ಕೆಲಸಗಳಿಗೆ ಬಳಕೆಯಾಗಲಿದೆ. ತುರ್ತು ಸಂದರ್ಭದಲ್ಲಿ ಇದನ್ನು ಆಂಬುಲೆನ್ಸ್ ರೀತಿಯಲ್ಲೂ ಬಳಸಬಹುದು ಎಂದು ರಾಜು ತಿಳಿಸಿದ್ದಾರೆ.

hal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+