• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭ?

|

ಬೆಂಗಳೂರು, ನವೆಂಬರ್ 3: ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭ ಮಾಡುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬಳಿ ಎಚ್‌ಎಎಲ್ ಮನವಿ ಮಾಡಿದೆ.

2008ರಿಂದ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಧ್ಯಕ್ಕೆ ಬಿಐಎಎಲ್ ಬಳಿ ಮೊದಲ ಸುತ್ತಿನಮಾತುಕತೆ ನಡೆದಿದೆ, ಇನ್ನೂ ಯಾವುದೇ ಅಗ್ರಿಮೆಂಟ್ ಆಗಿಲ್ಲ, ಒಂದೊಮ್ಮೆ ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡಿದರೆ ಯುದ್ಧ ವಿಮಾನಗಳ ತಪಾಸಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿನಂತೆಯೇ ಅದು ಮುಂದುವರೆಯಲಿದೆ ಎಂದು ಎಚ್‌ಎಎಲ್‌ನ ಮುಖ್ಯಸ್ಥ ಆರ್ ಮಾಧವನ್ ತಿಳಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಎಚ್‌ಎಎಲ್ ವಿಮಾನ ನಿಲ್ದಾಣವು 2008ರಲ್ಲಿ ಮುಚ್ಚಲಾಗಿದ್ದು ಯಾವುದೇ ವಾಣಿಜ್ಯ ವಿಮಾನಗಳು ಅಲ್ಲಿಂದ ತೆರಳದಂತೆ ಬಿಐಎಎಲ್ ಜೊತೆಗೆ ಒಪ್ಪಂದ ನಡೆದಿತ್ತು. ಈ ಹಿಂದೆ 2015ರಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭಿಸುವ ಕುರಿತು ಮನೋಹರ್ ಪರಿಕ್ಕರ್ ಅವರು ನಾಗರಿಕ ವಿಮಾನ ಯಾನ ಇಲಾಖೆಗೆ ಪತ್ರ ಬರೆದಿದ್ದರು.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಎಚ್‌ಎಎಲ್ ವಿಮಾನ ನಿಲ್ದಾಣ ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಏರ್‌ಪೋರ್ಟ್ ಮುಚ್ಚಿದ ಬಳಿಕ ಎಚ್‌ಎಎಲ್‌ಗೆ ತೀವ್ರ ಆದಾಯ ನಷ್ಟವಾಗುತ್ತಿದೆ ಎಂದು ತಿಳಿಸಲಾಗಿತ್ತು.

ಏರ್‌ಪೋರ್ಟ್‌ನ 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಏರ್‌ಪೋರ್ಡ್ ಇರುವಂತಿಲ್ಲ

ಏರ್‌ಪೋರ್ಟ್‌ನ 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಏರ್‌ಪೋರ್ಡ್ ಇರುವಂತಿಲ್ಲ

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಡಳಿ(ಹಿಂದಿನ ಬಿಐಎಎಲ್) ಹೊಸ ಏರ್‌ಪೋರ್ಟ್ ಸುತ್ತಲಿನ 150 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಹೊಸ ಏರ್‌ಪೋರ್ಟ್ ಇರುವಂತಿಲ್ಲ ಎಂದು ಷರತ್ತು ವಿಧಿಸಿತ್ತು ಎಂದು ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಂಡನ್ ಇನ್ನು ಬೆಂಗಳೂರಿಗೆ ಹತ್ತಿರ: ಧನ್ಯವಾದ ಏರ್ ಇಂಡಿಯಾ

ರಕ್ಷಣಾ ಇಲಾಖೆ ಉಪಯೋಗಕ್ಕೆ

ರಕ್ಷಣಾ ಇಲಾಖೆ ಉಪಯೋಗಕ್ಕೆ

ಎಚ್‌ಎಎಲ್ ವಿಮಾನ ನಿಲ್ದಾಣವನ್ನು ರಕ್ಷಣಾ ಇಲಾಖೆ ಉಪಯೋಗಕ್ಕೆ ಬಳಕೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ ಎಚ್‌ಎಎಲ್‌ಗೆ ವಾರ್ಷಿಕವಾಗಿ ರು. 2 ಸಾವಿರ ಕೋಟಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ರು. 900 ಕೋಟಿ ನಷ್ಟವಾಗುತ್ತಿದೆ.

ಕೆಐಎನಲ್ಲಿ ರದ್ದಾಗಲಿದೆ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು

2008ರಿಂದ ಎಚ್‌ಎಎಲ್ ವಿಮಾನ ನಿಲ್ದಾಣ ಮುಚ್ಚಲಾಗಿದೆ

2008ರಿಂದ ಎಚ್‌ಎಎಲ್ ವಿಮಾನ ನಿಲ್ದಾಣ ಮುಚ್ಚಲಾಗಿದೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಳಿಸಿದ ದಿನದಿಂದ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಬಳಿಕ ರಕ್ಷಣಾ ಇಲಾಖೆಯ ಯುದ್ಧ ವಿಮಾನಗಳ ತಪಾಸಣೆಗೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಪುನಃ ಎಚ್‌ಎಎಲ್ ಬಿಐಎಲ್ ಜತೆ ಮಾತುಕತೆ ನಡೆಸಿದ್ದು ವಿಮಾನ ನಿಲ್ದಾಣವನ್ನು ಪುನರಾರಂಭ ಮಾಡುವಂತೆ ಮನವಿ ಮಾಡಿದೆ.

ಕೆಂಪೇಗೌಡ ಏರ್‌ಪೋರ್ಟ್ 7 ನಗರಗಳನ್ನು ಸಂಪರ್ಕಿಸಲಿದೆ

ಕೆಂಪೇಗೌಡ ಏರ್‌ಪೋರ್ಟ್ 7 ನಗರಗಳನ್ನು ಸಂಪರ್ಕಿಸಲಿದೆ

ಚಳಿಗಾಲದ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಹೊಸ ನಿಲ್ದಾಣಗಳಿಗೆ ವಿಮಾನ ಹಾರಾಟ ಆರಂಭವಾಗಲಿದ್ದು, ಮತ್ತೆರಡು ಹೊಸ ವಿಮಾನಗಳು ಹಾರಾಟ ನಾಳೆ ಆರಂಭಿಸಲಿವೆ. ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ಈಗಿರುವ 691ರಿಂದ 766ಕ್ಕೆ ಏರಿಕೆಯಾಗಲಿದೆ.

ವಾಯು ದಟ್ಟಣೆ ಸಂಚಾರದ ಗುರಿಯನ್ನು ತಲುಪಲು ಈ ವರ್ಷದ ಚಳಿಗಾಲದಲ್ಲಿ ಪ್ರತಿದಿನ 744 ವಿಮಾನ ಸಂಚಾರ ನಡೆಸಲಿದೆ. ಅವುಗಳಲ್ಲಿ 659 ಸ್ಥಳೀಯ ಮತ್ತು 85 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅದಿನ್ನು ಪ್ರತಿದಿನ 766ನ್ನು ತಲುಪಲಿದೆ. ಇತ್ತೀಚೆಗೆ ಬೇಸಿಗೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಬಿಎಲ್ಆರ್) ಸರಾಸರಿ 691 ವಿಮಾನಗಳು ಹಾರಾಟ ನಡೆಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Defence PSU Hindustan Aeronautics Limited (HAL) is in talks with the Bengaluru International Airport Limited (BIAL), which operates Kempegowda International Airport (KIA), to reopen the old HAL airport which has been defunct since the opening of KIA in 2008.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more