ಹಂದಿಜ್ವರ ಪೀಡಿತ ಮಹಿಳೆ ಸಾವು, ಆಸ್ಪತ್ರೆ ಗಾಜು ಪುಡಿಪುಡಿ

ಬೆಂಗಳೂರು, ಮಾ. 7: ಎಚ್ 1 ಎನ್ 1 ನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿದ ಆಕೆಯ ಸಂಬಂಧಿಕರು ಆಸ್ಪತ್ರೆಯ ಐಸಿಯು ಕೊಠಡಿ ಗಾಜುಗಳನ್ನು ಶನಿವಾರ ಪುಡಿ ಪುಡಿ ಮಾಡಿದ್ದಾರೆ.

ಬೆಂಗಳೂರಿನ ವಸಂತನಗರದ ಜೈನ್ ಆಸ್ಪತ್ರೆ ಮೃತಳ ಸಂಬಂಧಿಕರ ಆಕ್ರೋಶಕ್ಕೆ ತುತ್ತಾಗಿದೆ. ಯಲಹಂಕ ನಿವಾಸಿ ಆಲಬೇಬಿ (54) ಎಂಬುವರು ಹಂದಿಜ್ವರ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಮುಂಜಾನೆ ಆಕೆ ಮೃತಪಟ್ಟಿದ್ದಾಳೆ.[ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?]

h1n1

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆಕೆಯ ಸಂಬಂಧಿಕರು ಐಸಿಯು ಕೊಠಡಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಯ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.[ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]

ಆಸ್ಪತ್ರೆಯ ಸಿಬ್ಬಂದಿ ವರ್ತನೆ ಸರಿಯಾಗಿರಲಿಲ್ಲ. ದಾದಿಗಳು ರೋಗಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದರು. ಇದರಿಂದಲೇ ಆಲಬೇಬಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಲಬೇಬಿಯವರನ್ನು ಕಳೆದ 14 ದಿನಗಳ ಹಿಂದೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೆವು. ಆದರೆ, ಸಂಬಂಧಿಕರು ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲು ನಿರಾಕರಿಸಿ ನಮಗೆ ತೊಂದರೆ ನೀಡಿದ್ದರು. ಇದರಿಂದ ರೋಗ ಉಲ್ಬಣಗೊಂಡು ಚಿಕಿತ್ಸೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.[ಹಂದಿಜ್ವರ ರೋಗಿಯ ಪ್ರಾಣ ತೆಗೆದ ಕರೆಂಟ್ ಕಣ್ಣಾಮುಚ್ಚಾಲೆ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+