Greater Bengaluru: ಬೆಂಗಳೂರು ವಿಭಜನೆಗೆ ಕುಮಾರಸ್ವಾಮಿ ವಿರೋಧ, ಜೆಡಿಎಸ್ ಸಾಥ್!
Greater Bengaluru: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ವಿಭಜನೆ ಮಾಡುವ ಪ್ರಸ್ತಾವನೆಗೆ ಇದೀಗ ಜೆಡಿಎಸ್ ಸಹ ಒಪ್ಪಿಗೆ ಸೂಚಿಸಿದೆ. ಹೌದು ಬೆಂಗಳೂರು ಪಾಲಿಕೆಯನ್ನು ವಿಭಜನೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಈ ರೀತಿ ಇರುವಾಗಲೇ ಮೇಲ್ಮನೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಜೆಡಿಎಸ್‌ನಿಂದ ಬೆಂಬಲ ವ್ಯಕ್ತವಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡರಲ್ಲೂ ವಿಧೇಯಕ ಮಂಡನೆಯಾಗುವ ಮೂಲಕ ಮೊದಲ ಹಂತದ ಪ್ರಕ್ರಿಯೆಗಳು ಪೂರ್ಣಗೊಂಡತೆ ಆಗಿದೆ.
ಈ ವಿಧೇಯಕ ಮಂಡನೆಯನ್ನು ವಿರೋಧ ಮಾಡುವ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನಡುವೆ ಹೊಂದಾಣಿಕೆ ಕಂಡು ಬರಲಿಲ್ಲ. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರೆ ಜೆಡಿಎಸ್‌ನ ಸದಸ್ಯರು ಸದನದಲ್ಲೇ ಉಳಿಯುವ ಮೂಲಕ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 (Greater Bengaluru Bill 2024) ಅಂಗೀಕಾರವಾದಂತೆ ಆಗಿದೆ.

ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ: ಇನ್ನು ಬೆಂಗಳೂರನ್ನು ವಿಭಜನೆ ಮಾಡುವುದಕ್ಕೆ ಜೆಡಿಎಸ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಸದಸ್ಯರು ತಟಸ್ಥವಾಗಿ ಉಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಧೇಯಕದ ಬಗ್ಗೆ ಮಾತನಾಡಿದ್ದ ಎಚ್.ಡಿ ಕುಮಾರಸ್ವಾಮಿ ಅವರು, ಗ್ರೇಟರ್ ಬೆಂಗಳೂರು ಪರಿಕಲ್ಪನೆಗೆ ಕೆಂಡವಾಗಿದ್ದರು.
ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ. 75 ವರ್ಷದಿಂದ ಇದನ್ನೇ ಮಾಡಿದೆ. ಇದೀಗ ಮುಂದುವರಿಸಿದೆ. ಕಾಂಗ್ರೆಸ್ ನೀತಿಯೇ Divide and Rule ಎಂದಿದ್ದರು. ಕಾಂಗ್ರೆಸ್ ಅಂದು: ಅಖಂಡ ಭಾರತವನ್ನು ಹೋಳು ಮಾಡಿತು ಇಂದು: ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ. ದುರುದ್ದೇಶವಿಷ್ಟೇ; ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದು ಎಂದಿದ್ದರು.
ಮುಂದುವರಿದು ಗ್ರೇಟರ್ ಬೆಂಗಳೂರು ಹೆಸರಿಗಷ್ಟೇ. ಲೂಟರ್ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ.. ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ. ಇದು ಲೂಟಿಯ ವಿಕೇಂದ್ರೀಕರಣ. ಲೂಟಿಕೋರ ಮಹಮ್ಮದ್ ಘಜ್ನಿ ಮತ್ತು ಮೊಹಮದ್ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಈಗ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು ವಿಭಜನೆಗೆ ಇನ್ನೊಂದೇ ಹೆಜ್ಜೆ: ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅನುಮೋದನೆ ಆಗುವ ಮೂಲಕ ಈ ವಿಧೇಯಕ ಜಾರಿಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿರುವಂತೆ ಆಗಿದೆ. ಈಗ ಈ ವಿಧೇಯಕವನ್ನು ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಸುಗಮ ಹಾದಿ ಸಿಕ್ಕಂತೆ ಆಗಿದೆ. ಈಗ ಬೆಂಗಳೂರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತ್ರ ಇದೆ. ಇನ್ಮುಂದೆ 5ರಿಂದ 7 ಪಾಲಿಕೆಗಳು ಸೃಷ್ಟಿಯಾಗಲಿವೆ.












Click it and Unblock the Notifications