ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳ ಹಸುಗೂಸನ್ನು ಕೊಲೆ ಮಾಡಿದ್ದು ಅಜ್ಜಿಯೇ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಒಂದೂವರೆ ತಿಂಗಳ ಮಗುವಿನ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮಗುವನ್ನು ಕೊಂದಿದ್ದು ಅಜ್ಜಿ ಎನ್ನುವುದು ತಿಳಿದುಬಂದಿದೆ.

ನೀಲಸಂದ್ರ ನಿವಾಸಿ ಮೃತ ಮಗುವಿನ ಅಜ್ಜಿ ವಿಜಯಲಕ್ಷ್ಮೀ(52) ಬಂಧಿತೆ, ಪುತ್ರ ಕಾರ್ತಿಕ್ ಮತ್ತು ಸೊಸೆ ಸ್ಟೆಲ್ಲಾ ಮೇಲಿನ ದ್ವೇಷಕ್ಕ ಮಗುವನ್ನು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿ ಮಹಿಳೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು : ಒಂದು ತಿಂಗಳ ಹಸುಗೂಸು ಉಸಿರುಗಟ್ಟಿಸಿ ಕೊಲೆ ಬೆಂಗಳೂರು : ಒಂದು ತಿಂಗಳ ಹಸುಗೂಸು ಉಸಿರುಗಟ್ಟಿಸಿ ಕೊಲೆ

ಕಾರ್ತಿಕ್ ಮತ್ತು ಸ್ಟೆಲ್ಲಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದರು. ಅಂತರ್ ಧರ್ಮೀಯ ವಿವಾಹಕ್ಕೆ ಕಾರ್ತಿಕ್ ಪೋಷಕರ ವಿರೋಧವಿತ್ತು. ಪೋಷಕರ ವಿರೋಧದ ನಡುವೆಯೂ ಅವರು ಮದುವೆಯಾಗಿದ್ದರು. ಕಾರ್ತಿಕ್ ಕಳೆದ ಫೆಬ್ರವರಿಯಲ್ಲಿ ಸ್ಟೆಲ್ಲಾ ಅವರನ್ನು ವಿವಾಹವಾಗಿದ್ದ, ಬಳಿಕ ಕಾರ್ತಿಕ್ ಪೋಷಕರೊಂದಿಗೆ ನೆಲೆಸಿದ್ದರು.

Grand mother held for infants murder

ಕಾರ್ತಿಕ್ ಕೂಡ ಕೆಲಸಕ್ಕೆ ಹೋಗದೆ ಮನೆಗೆ ಕುಡಿದು ಬರುತ್ತಿದ್ದ ಸಾಲವನ್ನೂ ಮಾಡಿದ್ದ, ಇದೇ ವಿಚಾರಕ್ಕೆ ಕಾರ್ತಿಕ್‌ನೊಂದಿಗೆ ಕೂಡ ಪೋಷಕರು ನಿತ್ಯ ಜಗಳವಾಡುತ್ತಿದ್ದರು. ಕೌಟುಂಬಿಕ ಕಲಹ ಹೆಚ್ಚಾದ ಬಳಿಕ ಕಾರ್ತಿಕ್ ಪೋಷಕರು ಪ್ರತ್ಯೇಕವಾಗಿ ನೆಲೆಸಿದ್ದರು. ಈ ನಡುವೆ ಸ್ಟೆಲ್ಲಾ ಅವರಿಗೆ ನ.22ರಂದು ಅವಳಿ ಗಂಡು ಮಕ್ಕಳು ಜನಿಸಿದ್ದವು.

ಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ ಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ

ಡಿ.21ರಂದು ಕಾರ್ತಿಕ್ ಅವರ ಎರಡನೇ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ತಿಕ್ ಮೊದಲ ಮಗುವನ್ನು ತನ್ನ ತಾಯಿಯ ಬಳಿ ಬಿಟ್ಟು, ಪತ್ನಿ ಜೊತೆ ಎರಡನೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ! ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ಮನೆಗೆ ವಾಪಸ್ ಬಂದಾಗ ಮಗುವಿಗೆ ಹಾಲುಣಿಸಬೇಕೆಂದು ಹೇಳಿದ್ದರು. ಸ್ಟೆಲ್ಲಾ ಹಾಲು ಬಿಸಿ ಮಾಡಿ ಶೌಚಾಲಯಕ್ಕೆ ಹೋಗಿಬರುವಷ್ಟರಲ್ಲಿ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ಮಂಚದ ಕೆಳಗೆ ಆಟಿಕೆಗಳ ಮಧ್ಯೆ ಯಾರಿಗೂ ಗೊತ್ತಾಗದಂತೆ ಇರಿಸಿದ್ದರು.

English summary
The 29-day-old infant found murdered under a cot at his house in Neelasandra, near Viveknagar, was smothered to death allegedly by his grandmother. Vijayalakshmi, 52, arrested by Ashoknagar police on Tuesday, confessed to the crime, saying she did it to save her unemployed son from slipping into a financial crisis because of the unhealthy baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X