ಗೌರಿ ಅವರಿಗೆ ತಿಂಗಳ ಹಿಂದೆಯೇ ಬಂದಿತ್ತು ಬೆದರಿಕೆ ಕರೆ!
ಗೌರಿ ಲಂಕೇಶ್ ಅವರಿಗೆ ತಿಂಗಳ ಹಿಂದೆಯೇ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದ ಗೌರಿ ಲಂಕೇಶ್.
Recommended Video

ಬೆಂಗಳೂರು, ಸೆಪ್ಟೆಂಬರ್ 5: ತಮಗೆ ಯಾರೋ ಕರೆ ಮಾಡಿ ಹತ್ಯೆಯ ಬೆದರಿಕೆ ಹಾಕಿಕೊಂಡಿದ್ದಾರೆಂದು ಕೇವಲ ಒಂದು ತಿಂಗಳ ಹಿಂದಷ್ಟೇ ಗೌರಿ ಲಂಕೇಶ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರೆಂದು ವರದಿಯಾಗಿದೆ.
ಮಾಜಿ ಸಚಿವೆ ಹಾಗೂ ತಮ್ಮ ಆಪ್ತೆಯಾದ ಬಿ.ಟಿ. ಲಲಿತಾ ನಾಯಕ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದಾಗಲೂ ಅವರು ''ಯಾರೋ ಅನಾಮಧೇಯ ವ್ಯಕ್ತಿಗಳು ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನಿನ್ನನ್ನು ಉಳಿಸೋಲ್ಲ, ಕೊಂದೇ ಕೊಲ್ತೀವಿ ಎಂದು ಬೆದರಿಕೆ ಹಾಕಿದ್ದಾರೆ'' ಎಂದು ಹೇಳಿದ್ದರಂತೆ. ಇನ್ನೂ ಆಪ್ತರೊಂದಿಗೆ ಈ ವಿಚಾರವನ್ನು ಅವರು ಹೇಳಿಕೊಂಡಿದ್ದರೆಂದು ಹೇಳಲಾಗಿದೆ.
ಗೌರಿ ಲಂಕೇಶ್ ಹತ್ಯೆ ಅತ್ಯಂತ ಹೇಯ ಕೃತ್ಯː ಸಿದ್ದರಾಮಯ್ಯ

ಆದರೆ, ಈ ಬಗ್ಗೆ ಅವರು ಪೊಲೀಸರಿಗೆ ಏಕೆ ದೂರು ನೀಡಲಿಲ್ಲ ಎಂಬುದು ಸ್ಪಷ್ಟವಾಗಿಲ್ಲ. ಇದೇ ಕೇವಲ ಬೆದರಿಕೆಯಷ್ಟೇ ಎಂದು ಅದನ್ನು ಅವರು ತಾತ್ಸಾರ ಮಾಡಿದರೆಂದು ಹೇಳಲಾಗುತ್ತಿದೆ. ಆದರೆ, ಮತ್ತೆ ಕೆಲವು ಆಪ್ತರಲ್ಲಿ ತಾವು ಪೊಲೀಸರಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಗೌರಿ ಹೇಳಿದ್ದರೆನ್ನಲಾಗಿದೆ. ಆದರೆ, ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications