• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗೆ ಮತ್ತೊಂದು ಎಲಿವೇಟೆಡ್ ಕಾರಿಡಾರ್, ಎಲ್ಲಿಂದ ಎಲ್ಲಿವರೆಗೆ?

|

ಬೆಂಗಳೂರು, ಮಾರ್ಚ್ 12: ಕರ್ನಾಟಕ ಸರ್ಕಾರವು ಬೆಂಗಳೂರಲ್ಲಿ ಇನ್ನೊಂದು ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಚಿಂತನೆ ನಡೆಸಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಹಡ್ಸನ್ ವೃತ್ತದಿಂದ ಮಾಗಡಿ ರಸ್ತೆಯವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಮನವಿ ಸಲ್ಲಿಸಿದೆ.

ಕೆಆರ್‌ಡಿಸಿಎಲ್ ಸೋಮವಾರ ಟೆಂಡರ್ ಕರೆದಿತ್ತು, ಒಟ್ಟು 10 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ನಗರದಲ್ಲಿ ಒಟ್ಟು 88 ಕಿ.ಮೀ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತದೆ ಅದರ ಮೊದಲ ಹಂತದಲ್ಲಿ ಟೆಂಡರ್ ಕರೆಯಲಾಗಿದೆ. ಹಾಗೆಯೇ ಹೆಬ್ಬಾಳ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಕಾರಿಡಾರ್ ಯೋಜನೆಗೂ ಟೆಂಡರ್ ಕರೆಯಲಾಗಿದೆ.

ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ, ವರದಿ ಸಲ್ಲಿಕೆಗೆ 2 ತಿಂಗಳ ಗಡುವು

ಹಡ್ಸನ್ ವೃತ್ತದಿಂದ ನಿರ್ಮಾಣವಾಗುವ ಕಾರಿಡಾರ್ ಶೇಷಾದ್ರಿ ರಸ್ತೆ, ಓಕಳೀಪುರಂ, ರಾಜಾಜಿನಗರ, ವಿಜಯನಗರ, ಔಟರ್‌ ರಿಂಗ್ ರಸ್ತೆ ಮೂಲಕ ಮಾಗಡಿ ರಸ್ತೆ ಸೇರುತ್ತದೆ. ಈ ಹೊಸ ಕಾರಿಡಾರ್ 4ರಿಂದ ಆರು ಪಥಗಳಿರುತ್ತವೆ. ಇದರಿಂದ ಬೆಂಗಳೂರಿನ ಟ್ರಾಫಿಕ್‌ನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ.

ಈ ಕುರಿತು ವರದಿ ಸಲ್ಲಿಕೆಗೆ 2 ತಿಂಗಳ ಗಡುವು ನೀಡಲಾಗಿದೆ. ಎಲಿವೇಟೆಡ್ ಕಾರಿಡಾರ್‌ನ ಉತ್ತರ-ದಕ್ಷಿಣ ಮಾರ್ಗದ ಮೊದಲ ಹಂತದ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಿದ ಬೆನ್ನಲ್ಲೇ ಸರ್ಕಾರ ಈ ನಿಲುವು ಕೈಗೊಂಡಿದೆ.

ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

ಎಸ್ಟೀಮ್ ಮಾಲ್ ನಿಂದ ಆರಂಭವಾಗಬೇಕಿದ್ದ ಮೊದಲ ಹಂತ ಎಲಿವೇಟೆಡ್ ಕಾರಿಡಾರ್ ಮಾರ್ಗಕ್ಕೆ ಟ್ರಾಫಿಕ್ ದಟ್ಟಣೆ ಹಾಗೂ ಇತರೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕಿರುವ ಕಾರಣ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿಗೆ ಸ್ಥಳಾಂತರಗೊಂಡಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

ಹೆಬ್ಬಾಳ ಜಂಕ್ಷನ್‌ನಲ್ಲಿ ಮೇಲು ರಸ್ತೆಯ ಹೆಚ್ಚುವರಿ ಪಥ ನಿರ್ಮಾಣದ ಕಾಮಗಾರಿ ನೆನಗುದಿದೆ ಬಿದ್ದದೆ. ವರ್ತುಲ ರಸ್ತೆಯ ಸಿಗ್ನಲ್‌ನಲ್ಲಿ ಕೆಳ ರಸ್ತೆ ನಿರ್ಮಿಸುವ ಪ್ರಸ್ತಾಪವೂ ಇದೆ. ಜೊತೆಗೆ ಇಲ್ಲಿನ ರೈಲ್ವೆ ಹಳಿ ಬಳಿ ಪಾದಚಾರಿಗಳ ಅನುಕೂಲಕ್ಕೆ ಸುರಂಗ ಮಾರ್ಗ ನಿರ್ಮಿಸುವ ಉದ್ದೇಶ ಇದೆ.

English summary
The government seems to be in a great hurry when it comes to fast-tracking elevated corridors in the city. The KRDCL has proposed yet another elevated corridor (10km) between Hudson Circle and Sumanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X