ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಸಿಬ್ಬಂದಿ ಕಾವಲಿಗೆ ಬರಲಿದೆ ಜಿಪಿಎಸ್

|
Google Oneindia Kannada News

ಬೆಂಗಳೂರು, ಮಾರ್ಚ್ 24: ಸರ್ಕಾರಿ ನೌಕರರ ಕೆಲಸದ ಮೇಲೆ ನಿಗಾ ಇಡಲು ಜಿಪಿಎಸ್ ಟ್ರ್ಯಾಕಿಂಗ್ ಪದ್ಧತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಚೇರಿ ಸಮಯದಲ್ಲಿ ಕೆಲಸ ಮಾಡದೆ ಕಳ್ಳಾಟ ಆಡುವ ಸರ್ಕಾರಿ ನೌಕರರಿಗೆ ಕಡಿವಾಣ ಬೀಳಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ತಂತ್ರಜ್ಞಾನದ ಮೂಲಕ ಕೆಲಸದಲ್ಲಿ ಪಾರದರ್ಶಕತೆ ತರುವ ಜತೆಯಲ್ಲೇ ಆಡಳಿತಕ್ಕೆ ಚುರುಕು ಮುಟ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಕಿಯೋನಿಕ್ಸ್ ಗೆ ಹೊಣೆ: ಐಟಿಬಿಟಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಟ್ರ್ಯಾಂಕಿಂಗ್ ಸಿಸ್ಟಂ ಅನುಷ್ಠಾನದ ಹೊಣೆ ಹೊತ್ತಿದೆ.

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್

ಏಪ್ರಿಲ್‌ನಲ್ಲಿ ಯೋಜನೆ ಶುರುವಾಗಲಿದೆ. ನೌಕರರ ಮೊಬೈಲ್ ಮೂಲಕವೇ ಪ್ರತಿಯೊಂದು ಚಲನವಲನದ ಸಂದೇಶ ರವಾನೆಯಾಗಲಿದ್ದು, ಪ್ರಾಯೋಗಿಕವಾಗಿ ಕೆಲವು ಉದ್ಯೋಗಿಗಳು ಟ್ರ್ಯಾಂಕಿಗ್ ಸಿಸ್ಟಂಗೆ ಒಳಪಡಲಿದ್ದಾರೆ.

Govt employees will be under tracking by GPS

ಹಂತಹಂತವಾಗಿ ಎಲ್ಲ ಉದ್ಯೋಗಿಗಳು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಇದರ ನಿರ್ವಹಣೆ ಮಾಡುವುದರಿಂದ ಖರ್ಚು ಕಡಿಮೆ ಆಗಿರಲಿದೆ. ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಟ್ರ್ಯಾಕಿಂಗ್ ಸಿಸ್ಟಂ ಕಾರ್ಯನಿರ್ವಹಿಸುವುದು ವಿಶೇಷವಾಗಿದೆ.

ಜಿಪಿಎಸ್ ಸಿಸ್ಟಂ ಉದ್ಯೋಗಿಗಳಿಗೂ ಉಪಯೋಗಕಾರಿ. ಗುರುತಿನ ಚೀಟಿಯಲ್ಲಿ ಇರುವ ಎಸ್‌ಒಎಸ್ ಬಟನ್ ಅನ್ನು ತುರ್ತು ಸಂದರ್ಭದಲ್ಲಿ ಒತ್ತದರೆ ನಿಯಂತ್ರಣಾಧಿಕಾರಿಗೆ ಸಂದೇಶ ರವಾನೆಯಾಗಲಿದೆ. ಇದರಿಂದ ಅಪ್ಲಿಕೇಷನ್ ಮೂಲಕವೇ ಸಂಕಷ್ಟ ಸಿಲುಕಿದ ವ್ಯಕ್ತಿಗೆ ಕರೆ ಮಾಡಿ, ಸ್ಥಳದಲ್ಲಿನ ವಸ್ತುಸ್ಥಿತಿ ಗ್ರಹಿಸಬಹುದಾಗಿದೆ.

ಐಡಿ ಕಾರ್ಡ್‌ನಲ್ಲಿ ಚಿಪ್: ಕಿಯೋನಿಕ್ಸ್ ಟ್ರ್ಯಾಕಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಆಡ್ ಟೆಕ್ನಾಲಜೀಸ್ ಇಂಡಿಯಾ ಲಿ.ಗೆ ಟೆಂಡರ್ ನೀಡಿದೆ. ಉದ್ಯೋಗಿಗಳ ಗುರುತಿನ ಚೀಟಿಗೆ ಜಿಪಿಎಸ್ ಚಿಪ್ ಅಳವಡಿಕೆ ಮಾಡಲಾಗುತ್ತದೆ.

English summary
The state government has decided to track with GPS of all the employees throug their cell phone during working hours to avoid wasting time nad skip the work. The government has issued notification of adopting GPS in all the office through KEONICS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X