ಬೆಂಗಳೂರು-ಹೊಸೂರಿಗೆ ಮೆಟ್ರೋ ವಿಸ್ತರಣೆ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರ

Namma Metro: ಜನಸಂಖ್ಯೆ ಹೆಚ್ಚಿದಂತೆಲ್ಲ ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದೆ. ಅಲ್ಲದೆ, ನಗರದ ಜನರ ಜೀವನಾಡಿ ಸಾರಿಗೆಯಾದ ನಮ್ಮ ಮೆಟ್ರೋ ಕೂಡ ವಿಸ್ತರಣೆ ಆಗುತ್ತಲೇ ಇದೆ. ಇನ್ನು ಬೆಂಗಳೂರಿನಿಂದ ಹೊಸೂರುವೆರೆಗೆ ನಮ್ಮ ಮೆಟ್ರೋ ವಿಸ್ತರಣೆಗೆ ಈಗಾಗಲೇ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ಇದರ ಬೆನ್ನೆಲೆ ಇದೀಗ ಈ ಮಾರ್ಗದ ಮೆಟ್ರೋ ನಿರ್ಮಾಣಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಬೆಂಗಳೂರಿನ ಜನಕ್ಕೆ ಬೇಕಾದರೂ ಅನುಕೂಲ ಆಗುವಂತೆ ಮೆಟ್ರೋ ವಿಸ್ತರಣೆ ಮಾಡಿದೆ. ಅದು ಬಿಟ್ಟು ತಮಿಳುನಾಡಿನ ಹೊಸೂರಿನವರೆಗೂ ಮೆಟ್ರೋ ವಿಸ್ತರಣೆ ಯಾಕೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆದಿದ್ದವು. ಇದೀಗ ಇದರ ಬೆನ್ನಲ್ಲೇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Government has important decision taken about Bengaluru-Hosur Metro Expansion

ಬೆಂಗಳೂರಿನಿಂದ ತಮಿಳುನಾಡಿನವರೆಗೆ ಮೆಟ್ರೋ ನಿರ್ಮಾನ ಮಾಡಿವ ಬಗ್ಗೆ ಹೊಸೂರು ಮೆಟ್ರೋ ನಿರ್ಮಾಣಕ್ಕೆ ಇದೀಗ ರಾಜ್ಯ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಬೆಂಗಳೂರಿನಿಂದ ಹೊಸೂರುವರೆಗೆ ಮೆಟ್ರೋ ವಿಸ್ತರಣೆ ಮಾಡದಂತೆ ಹಿರಿಯ ಸಚಿವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆ ಹೊಸೂರಿಗೆ ಬೆಂಗಳೂರಿನಿಂದ ಮೆಟ್ರೋ ಬೇಡ ಎಂದು ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರೊಬ್ಬರು ಸಲಹೆ ನೀಡಿದ್ದಾ ಎನ್ನಲಾಗಿದೆ. ಆದ್ದರಿಂದ ಸದ್ಯ ಬೆಂಗಳೂರಿನಿಂದ ಹೊಸೂರಿನವರೆಗೆ ಮೆಟ್ರೋ ನಿರ್ಮಾಣಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

ಒಂದು ವೇಳೆ ಬೆಂಗಳೂರಿನಿಂದ ಹೊಸೂರಿನವರೆಗೆ ಮೆಟ್ರೋ ರೈಲು ನಿರ್ಮಾಣ ಮಾಡಿದರೆ, ರಾಜ್ಯದಲ್ಲಿ ಇರುವಂತಹ ಕೈಗಾರಿಕಾ ಸಂಸ್ಥೆಗಳಿಗೆ ತುಂಬಾ ಹೊಡೆತ ಬೀಳಲಿದೆ. ಹೊಸೂರಿನಲ್ಲಿ ಈಗಾಗಲೇ ಕೈಗಾರಿಕಾ ಕಾರ್ಖಾನೆಗಳು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಜನರು ಸಾಮಾನ್ಯವಾಗಿ ಹೊಸೂರಿಗೆ ಮೆಟ್ರೋ ಮೂಲಕ ಸಂಚರಿಸಿ ಅಲ್ಲಿ ಕಾರ್ಯ ನಿರ್ವಹಿಸಬಹುದು. ಆದ್ದರಿಂದ ರಾಜ್ಯದಲ್ಲಿ ಕೈಗಾರಿಕರಣ ಸಹಜವಾಗಿ ಕುಂಠಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ರೈಲು ಸೇವೆ ವಿಸ್ತರಣೆ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಇನ್ನೂ ಇದೀಗ ಗಣೇಶ ಹಬ್ಬ ಹಿನ್ನೆಲೆ ಊರಿಗೆ ಹೊರಡುವ ಹಾಗೂ ಹಬ್ಬ ಮುಗಿದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್‌ ಆಗುವವರ ಸಂಖ್ಯೆ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿರುತ್ತದೆ. ಆದ್ದರಿಂದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.

ಎರ್ನಾಕುಲಂ-ಯಲಹಂಕ ನಡುವೆ ವಾರಕ್ಕೆ 3 ದಿನ ಸಂಚರಿಸುತ್ತಿದ್ದ ವಿಶೇಷ ರೈಲ ಸೇವೆಯನ್ನು ಸೆಪ್ಟೆಂಬರ್ 19ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಸೆಪ್ಟೆಂಬರ್ 7ರ ವರೆಗೆ ರೈಲು ಸಂಚರಿಸಲಿದೆ ಎಂದು ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಿದಲು ಈ ಸೇವೆಯನ್ನು ವಿಸ್ತರಣೆ ಮಾಡಿದೆ.

ರೈಲು ಸಂಖ್ಯೆ 06101/06102 ಎರ್ನಾಕುಲಂ ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್‌ ​ಫಾಸ್ಟ್ ವೀಕ್ಲಿ ಎಕ್ಸ್​​ಪ್ರೆಸ್​​ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಟ್ವೀಟ್‌ ಮೂಲಕ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಎರ್ನಾಕುಲಂ ಯಲಹಂಕ ಗರೀಬ್ ರಥ್ ಸೂಪರ್‌ ​ಫಾಸ್ಟ್ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್ 8, 11, 13, 15 ಹಾಗೂ 18ರಂದು ಸಂಚರಿಸಲಿದೆ. ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್‌ ಪಾಸ್ಟ್‌ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 9, 12, 14, 16, 19ರಂದು ಓಡಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+