ಇಂದಿರಾನಗರದಲ್ಲಿ ಪುಂಡರ ಅಟ್ಟಹಾಸ, ಯುವತಿ ಮೇಲೂ ಹಲ್ಲೆ

Recommended Video

      ಇಂದಿರಾನಗರದಲ್ಲಿ ಪುಂಡರ ಅಟ್ಟಹಾಸ, ಯುವತಿ ಮೇಲೂ ಹಲ್ಲೆ | Oneindia Kannada

      ಬೆಂಗಳೂರು, ಜನವರಿ 16: ನಗರದ ಇಂದಿರಾನಗರದಲ್ಲಿ ಹೊಸ ವರ್ಷದಂದು ಪುಂಡರ ಗುಂಪೊಂದು ಯುವತಿ ಹಗೂ ಯುವಕನೊಬ್ಬನಿಗೆ ಮನಸೋಇಚ್ಛೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

      ಹೊಸ ವರ್ಷದಂದು ತಡ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಡಾರ್ಜಲಿಂಗ್ ಮೂಲದ ಅಣ್ಣ-ತಂಗಿಯ ಮೇಲೆ ಕುಡಿದ ಮತ್ತಿನಲ್ಲಿದ್ದ ಗುಂಪೊಂದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ, ಹಲ್ಲೆಯ ವಿಡಿಯೋ ತಡವಾಗಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ.

      ಇಂದಿರಾನಗರದಲ್ಲಿ ಹೊಸ ವರ್ಷದಂದು ರಸ್ತೆ ಮಧ್ಯೆ 20ಕ್ಕೂ ಹೆಚ್ಚು ಮಂದಿ ಪಾನಮತ್ತರಾಗಿ ಕುಣಿಯುತ್ತಿದ್ದರು. ಈ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಅಣ್ಣ-ತಂಗಿಯ ಮೇಲೆ ಒಮ್ಮೆಲೆ ಮುಗಿಬಿದ್ದ ಗುಂಪು ಮನಸೋಇಚ್ಛೆ ಇಬ್ಬರಿಗೂ ಥಳಿಸಿದ್ದಾರೆ.

      Goons beaten young girl and man in Indiranagar

      ಘಟನೆ ನಂತರ ಹೆದರಿದ ಅಣ್ಣ-ತಂಗಿ ಯಾವುದೇ ದೂರು ದಾಖಲಿಸಿರಲಿಲ್ಲ, ಆದರೆ ಈಗ ಈ ಹಲ್ಲೆಯ ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

      ಹಲ್ಲೆ ನಡೆಸಿದವರಲ್ಲಿ ಇಂದಿರಾನಗರ ವಾಸಿಗಳಾದ ಅಂಬರೀಶ್ ಮತ್ತು ಲೊಕೇಶ್ ಎಂಬ ಇಬ್ಬರನ್ನು ಗುರುತಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+