ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ದಿನದ ಪಾಸಿನ ಮೇಲೆ 10 ರೂ. ಕ್ಯಾಷ್ ಬ್ಯಾಕ್

By Gururaj
|
Google Oneindia Kannada News

ಬೆಂಗಳೂರು, ಜೂನ್ 03 : ಬಿಎಂಟಿಸಿಯ ವಾಯುವಜ್ರ ಬಸ್ಸಿನಲ್ಲಿ ಪ್ರಯಾಣ ಮಾಡುವವರು ದಿನದ ಪಾಸನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಡೆದರೆ 10 ರೂ. ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಜೂನ್ 4ರ ಸೋಮವಾರದಿಂದ ಡಿಜಿಟಲ್ ಫ್ಲಾಟ್ ಫಾರ್ಮ್ ಮೂಲಕ ದಿನದ ಪಾಸು ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಮೇ 28ರಿಂದಲೇ ಪ್ರಾಯೋಗಿಕ ವಾಗಿ ಇದಕ್ಕೆ ಚಾಲನೆ ಸಿಕ್ಕಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಬಿಎಂಟಿಸಿ ಪ್ರಯಾಣಕ್ಕೆ ಪ್ರತ್ಯೇಕ ಸ್ಮಾರ್ಟ್‌ಕಾರ್ಡ್ಬಿಎಂಟಿಸಿ ಪ್ರಯಾಣಕ್ಕೆ ಪ್ರತ್ಯೇಕ ಸ್ಮಾರ್ಟ್‌ಕಾರ್ಡ್

https://nammapass.series-5.com/ ವೆಬ್ ಸೈಟ್ ಮೂಲಕ ಜನರು ದಿನದ ಪಾಸನ್ನು ಖರೀದಿ ಮಾಡಬಹುದಾಗಿದೆ. ಡಿಜಿಟಲ್ ಗೇಟ್ ವೇ ಪೇಮೆಂಟ್, ಪೋನ್ ಪೇ ಮೂಲಕ ಪಾಸು ಖರೀದಿ ಮಾಡಿದರೆ 10 ರೂ. ಕ್ಯಾಷ್ ಬ್ಯಾಕ್ ದೊರೆಯಲಿದೆ.

BMTC

ವೆಬ್ ಸೈಟ್ ಬಿಡುಗಡೆ ಯಾದ ದಿನ, ಜನರನ್ನು ಆಕರ್ಷಣೆ ಮಾಡಲು 10 ರೂ. ಕ್ಯಾಷ್‌ ಬ್ಯಾಕ್ ನೀಡಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾಸು ಪಡೆಯುವ ವ್ಯವಸ್ಥೆ ಸಂಪೂರ್ಣವಾಗಿ ಕ್ಯಾಷ್ ಲೆಸ್ ಆಗಲಿದೆ.

ದೂರುಗಳ ಸುರಿಮಳೆ: ಬಿಎಂಟಿಸಿ ಆ್ಯಪ್ ಮೇಲ್ದರ್ಜೆಗೇರಿಸಲು ಚಿಂತನೆದೂರುಗಳ ಸುರಿಮಳೆ: ಬಿಎಂಟಿಸಿ ಆ್ಯಪ್ ಮೇಲ್ದರ್ಜೆಗೇರಿಸಲು ಚಿಂತನೆ

ಪಡೆಯುವುದು ಹೇಗೆ? : ವೆಬ್ ಸೈಟ್ ಮೂಲಕವೂ ಜನರು ದಿನದ ಪಾಸನ್ನು ಪಡೆಯಬಹುದಾಗಿದೆ. ವಾಯು ವಜ್ರ ಬಸ್ಸಿನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನರು ಪಾಸುಗಳನ್ನು ಪಡೆಯಬಹುದಾಗಿದೆ.

English summary
People travelling by the Bangalore Metropolitan Transport Corporation (BMTC) air-conditioned Vajra buses will get a cashback of Rs 10 if they buy digital daily passes through the payment gateway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X