ಬೆಂಗಳೂರು ಒನ್ ಕೇಂದ್ರದಲ್ಲೂ ಶೀಘ್ರವೇ ಇ-ಖಾತಾ ಲಭ್ಯ

ಬೆಂಗಳೂರು, ಅಕ್ಟೋಬರ್ 10: ಕರ್ನಾಟಕ ಸರ್ಕಾರ ಆಸ್ತಿಗಳ ನೋಂದಣಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಅಕ್ಟೋಬರ್ ತಿಂಗಳಿನಿಂದಲೇ ಆಸ್ತಿಗಳ ನೋಂದಣಿ ಮಾಡಲು ಇ-ಖಾತಾ ಕಡ್ಡಾಯವಾಗಿದೆ. ಹೊಸದಾಗಿ ಅನುಷ್ಠಾನಗೊಳಿಸಲಾಗಿರುವ ಫೇಸ್‌ಲೆಸ್, ಸಂಪರ್ಕ ರಹಿತ ಆನ್‌ಲೈನ್ ಇ-ಖಾತಾ ವ್ಯವಸ್ಥೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ. ಕೆಲವೇ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರದಲ್ಲಿಯೂ ಸಹ ಇ-ಖಾತಾ ಲಭ್ಯವಾಗಲಿದೆ.

ಬಿಬಿಎಂಪಿಯ ವಹಿಗಳಲ್ಲಿ ದಾಖಲಾಗಿರುವ ಎಲ್ಲಾ 'ಎ' ಖಾತಾ ಮತ್ತು 'ಬಿ' ಖಾತಾ ಎರಡನ್ನೂ ಡಿಜಿಟಲೀಕರಣ ಮಾಡಲಾಗಿದ್ದು, 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳನ್ನು ಯಾರಾದರೂ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ https://bbmpeaasthi.karnataka.gov.in

Get E Khatas Soon At Bangalore One Centers Says BBMP

'ಎ' ಖಾತಾ ಮತ್ತು 'ಬಿ' ಖಾತಾ ಸ್ವತ್ತುಗಳಿಗೆ ಸಂಬಂಧಿಸಿದ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜನರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆಯಿರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮತ್ತು ಸಂಪರ್ಕರಹಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸದ್ಯ ಜನರಿಗೆ ಇರುವ ಗೊಂದಲ ಬಗೆಹರಿಸಲು ಇ-ಖಾತಾ ಒದಗಿಸಲು ಪ್ರತಿ ಸಹಾಯಕ ಕಂದಾಯ ಅಧಿಕಾರಿ ಕಛೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ನಾಗರಿಕರು ಕೇಂದ್ರಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ ಇ-ಖಾತಾ ಪಡೆಯಬಹುದಾಗಿದೆ ಎಂದು ಬಿಬಿಎಂಪಿಯ ಪ್ರಕಟಣೆ ತಿಳಿಸಿದೆ. ಸುಮಾರು 22 ಲಕ್ಷಕ್ಕೂ ಅಧಿಕ ಕರಡು ಇ-ಖಾತಾಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಬೆಂಗಳೂರು ಒನ್ ಕೇಂದ್ರ: ಬೆಂಗಳೂರು ನಗರದಲ್ಲಿ ಹಲವು ನಾಗರಿಕ ಸೇವೆಗಳನ್ನು ನೀಡಲು ಬೆಂಗಳೂರು ಒನ್ ಕೇಂದ್ರವನ್ನು ಬಳಕೆ ಮಾಡಲಾಗುತ್ತದೆ. ಜನರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳನ್ನು ಪಡೆದುಕೊಳ್ಳುತ್ತಾರೆ.

ಕೆಲವೇ ದಿನಗಳಲ್ಲಿ ಇ-ಖಾತಾ ವ್ಯವಸ್ಥೆ ಸಹ ಬೆಂಗಳೂರು ಒನ್ ಕೇಂದ್ರದಲ್ಲಿ ಲಭ್ಯವಾಗಲಿದೆ. ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಸಾಧ್ಯವಾಗದ ಜನರು ಅಗತ್ಯ ದಾಖಲೆಗಳನ್ನು ನೀಡಿ ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಖಾತಾ ಪಡೆಯುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಈಗಾಗಲೇ ವೆಬ್‌ಸೈಟ್‌ನಲ್ಲಿ ವಾರ್ಡ್‌ವಾರು ಇ-ಖಾತಾ ಮಾಹಿತಿ ಲಭ್ಯವಿದೆ. ಸ್ವತ್ತಿನ ಆಸ್ತಿ ತೆರಿಗೆ ರಸೀದಿಯಿಂದ ವಾರ್ಡ್‌ ಹೆಸರು, ಸಂಖ್ಯೆ ತಿಳಿದುಕೊಳ್ಳಬಹುದು. ಮಾಲೀಕರ ಹೆಸರು ಹೊರತುಪಡಿಸಿ ಬೇರೆ ಆಯ್ಕೆಗಳ ಮೂಲಕ ಆಸ್ತಿಯನ್ನು ಹುಡುಕಲು ಸಾಧ್ಯವಿಲ್ಲ ಎಂದು ಜನರಿಗೆ ಮಾಹಿತಿ ನೀಡಲಾಗಿದೆ.

ಇ-ಖಾತಾ ಅನ್ನು ಆನ್‌ಲೈನ್‌ನಲ್ಲಿ ನೋಡುವ ಕ್ರಮ

* ಎಲ್ಲಾ ಕರಡು ಇ-ಖಾತಾಗಳನ್ನು (ಸುಮಾರು 22 ಲಕ್ಷ) ವಾರ್ಡ್ ವಾರು bbmpeaasthi.karnataka.gov.in ನಲ್ಲಿ ಬಿಡುಗಡೆ ಮಾಡಲಾಗಿದೆ.

* ನಿಮ್ಮ ಸ್ವತ್ತಿನ ಆಸ್ತಿ ತೆರಿಗೆಯ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ನೀವು ತಿಳಿದುಕೊಳ್ಳಬಹುದು.

* ಆನ್‌ಲೈನ್‌ನಲ್ಲಿ ಒಮ್ಮೆ ನೀವು ನಿಮ್ಮ ವಾರ್ಡ್‌ಗೆ ಭೇಟಿ ನೀಡಿದರೆ, ಆ ವಾರ್ಡ್‌ನ ಎಲ್ಲಾ ಡ್ರಾಫ್ಟ್ ಇ-ಖಾತಾ ಪಟ್ಟಿಮಾಡಲಾಗಿದ್ದು, ಇದು ನಿಮಗೆ ಲಭ್ಯವಿರುತ್ತದೆ.

* ಮೊದಲ ಬಾರಿಗೆ ಡಿಜಿಟಲೀಕರಣಗೊಂಡಿರುವುದರಿಂದ ಇ-ಪ್ರಾಪರ್ಟಿ ಐಡಿಯನ್ನು ಈಗ ರಚಿಸಲಾಗಿದೆ. ಆದ್ದರಿಂದ ಮಾಲೀಕರ ಹೆಸರನ್ನು ಹೊರತುಪಡಿಸಿ, ಆಸ್ತಿಯನ್ನು ಹುಡುಕಲು ಬೇರೆ ಆಯ್ಕೆ ಇರುವುದಿಲ್ಲ.

* ಆದ್ದರಿಂದ ಹೆಸರು ಹುಡುಕಾಟವನ್ನು ನೀಡಲಾಗಿದ್ದು, ಆಸ್ತಿಗಳನ್ನು ವಾರ್ಡ್‌ವಾರು ಪಟ್ಟಿಯಲ್ಲಿ ವರ್ಣಮಾಲೆಯಂತೆ ಪಟ್ಟಿ ಮಾಡಲಾಗಿದೆ (ಇಂಗ್ಲಿಷ್ ವರ್ಣಮಾಲೆಯಂತೆ).

ಬಿಬಿಎಂಪಿಯು ನಿರಂತರವಾಗಿ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಇ-ಖಾತಾ ನಾಗರೀಕರಿಗೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ತಲುಪಲು ಪ್ರಯತ್ನಿಸುತ್ತಿದೆ. ಯಾವುದೇ ಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಭೇಟಿ ಮಾಡದೆಯೇ ಪ್ರಕ್ರಿಯೆಯನ್ನು ಎಲ್ಲರಿಗೂ ಸಾಧ್ಯವಾದಷ್ಟು ಸುಗಮಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+