Gen Z ಯೋಚನೆ ಮಾಡೋದೇ ಹೀಗೆ: ಬಾಸ್‌ಗಳಿಗೆ ನಿದ್ದೆ ಬರಲ್ಲ ಅಂದ್ರೆ ಅದು ಯಾರ್ ಪ್ರಾಬ್ಲಂ
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಟೆಕ್ ಕಂಪನಿಯೊಂದರಲ್ಲಿ ನಡೆದ ಘಟನೆ ಇದು. 23 ವರ್ಷದ ನೂತನ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್‌ಗೆ, "ಕ್ಲೈಂಟ್‌ಗೆ ಇಮೇಲ್ ಕಳುಹಿಸುವ ಬದಲು 'ವಾಯ್ಸ್ ನೋಟ್' (Voice Note) ಕಳುಹಿಸಬಹುದೇ?" ಎಂದು ಕೇಳಿದಾಗ, ಆ ಮ್ಯಾನೇಜರ್‌ಗೆ ನಗಬೇಕೋ ಅಥವಾ ಅಳಬೇಕೋ ತಿಳಿಯದಂತಾಯಿತಂತೆ. ಇದು ಕೇವಲ ಒಂದು ಕಂಪನಿಯ ಕಥೆಯಲ್ಲ; ಇಂದು ಬಹುತೇಕ ಬೋರ್ಡ್‌ರೂಮ್‌ಗಳು ಮತ್ತು ಎಚ್‌ಆರ್ ವಾಟ್ಸಾಪ್ ಗ್ರೂಪ್‌ಗಳಲ್ಲಿ ಕೇಳಿಬರುತ್ತಿರುವ ಸಾಮಾನ್ಯ ದೂರು ಇದಾಗಿದೆ.
ಇಂದಿನ ಯುವ ಪೀಳಿಗೆ ಅಥವಾ 'ಜೆನ್ ಝೀ' (Gen Z - 1997 ರಿಂದ 2012ರ ನಡುವೆ ಜನಿಸಿದವರು) ಉದ್ಯೋಗಿಗಳಲ್ಲಿ "ವಿಮರ್ಶಾತ್ಮಕ ಚಿಂತನೆ" (Critical Thinking) ಇಲ್ಲ, ಅವರು ಸ್ವತಂತ್ರವಾಗಿ ಆಲೋಚಿಸುವುದಿಲ್ಲ ಮತ್ತು ವಿಷಯಗಳನ್ನು ತರ್ಕಬದ್ಧವಾಗಿ ಜೋಡಿಸುವುದಿಲ್ಲ ಎಂಬುದು ಮ್ಯಾನೇಜರ್‌ಗಳ ಬಲವಾದ ವಾದವಾಗಿದೆ. ಆದರೆ, ಯುವಜನತೆಯನ್ನು ಕೇಳಿದರೆ, ಅವರ ಉತ್ತರವೇ ಬೇರೆ ಇದೆ. "ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡುವ ಬದಲು, ನಾವು ಎಷ್ಟು ಹೊತ್ತು ಡೆಸ್ಕ್ ಮುಂದೆ ಕುಳಿತಿರುತ್ತೇವೆ ಎಂಬುದರ ಮೇಲೆ ನಮ್ಮನ್ನು ಏಕೆ ಅಳೆಯಬೇಕು?" ಎಂದು ಕೇಳುತ್ತಾರೆ.

ಎಲ್ಲವನ್ನೂ ಹೇಳಿಕೊಡಬೇಕು: ಉದ್ಯೋಗದಾತರ ದೂರು
ಬೆಂಗಳೂರಿನ ಟೆಕ್ ಕಂಪನಿಯೊಂದರ ಎಚ್‌ಆರ್ ಮುಖ್ಯಸ್ಥರೊಬ್ಬರ ಪ್ರಕಾರ, ಸಮಸ್ಯೆ ಇರುವುದು ಇವರ ಸಾಮರ್ಥ್ಯದಲ್ಲಿ ಅಲ್ಲ; ಆಲೋಚನಾ ಕ್ರಮದಲ್ಲಿ. "ನಮಗೆ ಬುದ್ಧಿವಂತ ಮಕ್ಕಳು ಸಿಗುತ್ತಿದ್ದಾರೆ, ಆದರೆ ಅವರಲ್ಲಿ ಸ್ವತಂತ್ರವಾಗಿ ಆಲೋಚಿಸು, ನಿರ್ಧರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಿದೆ. ಪ್ರತಿಯೊಂದು ಕೆಲಸವನ್ನೂ ಹಂತಹಂತವಾಗಿ (Step by step) ವಿವರಿಸಬೇಕು ಎಂದು ಅವರು ಬಯಸುತ್ತಾರೆ. ಒಂದು ವೇಳೆ ಕೆಲಸದ ಬ್ರೀಫ್ ಸ್ವಲ್ಪ ಬದಲಾದರೂ, ಅವರು ಗೊಂದಲಕ್ಕೀಡಾಗಿ ಸುಮ್ಮನಾಗುತ್ತಾರೆ," ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಮ್ಯಾನೇಜರ್‌ಗಳು ಪ್ರಮುಖವಾಗಿ ಗುರುತಿಸುವ ಸಮಸ್ಯೆಗಳಿವು
1. ಸಂಕೀರ್ಣ (ಜಟಿಲ) ಸಮಸ್ಯೆಗಳನ್ನು ವಿಶ್ಲೇಷಿಸಲು ಕಷ್ಟಪಡುವುದು.
2. ಪ್ರತಿಯೊಂದಕ್ಕೂ ಗೂಗಲ್, ಎಐ (AI) ಅಥವಾ ಟೆಂಪ್ಲೇಟ್‌ಗಳ ಮೇಲೆ ಅತಿಯಾದ ಅವಲಂಬನೆ.
3. ಬರವಣಿಗೆ ಮತ್ತು ರಚನಾತ್ಮಕ ಚಿಂತನೆಯಲ್ಲಿ ಹಿನ್ನಡೆ.
4. ಟೀಕೆ ಅಥವಾ ಫೀಡ್‌ಬ್ಯಾಕ್ ಸ್ವೀಕರಿಸಲು ಇರುವ ಅಸಹನೆ.
ಜೆನ್ ಝೀ ತಿರುಗೇಟು
ಆದರೆ, ಜೆನ್ ಝೀ ಉದ್ಯೋಗಿಗಳು ಈ ಆರೋಪಗಳನ್ನು ಒಪ್ಪುವುದಿಲ್ಲ. "ನಾವು ಕೂಡ ವಿಮರ್ಶಾತ್ಮಕವಾಗಿ ಯೋಚಿಸುತ್ತೇವೆ. ಆದರೆ ದೀರ್ಘವಾದ ಮೀಟಿಂಗ್‌ಗಳು ಮತ್ತು ಪಿಡಿಎಫ್‌ಗಳ ಮೂಲಕ ಅಲ್ಲ," ಎನ್ನುತ್ತಾರೆ 22 ವರ್ಷದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆರವ್ ಶರ್ಮಾ. "ನಮಗೆ ಮಾಹಿತಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಮತ್ತು ಅನಗತ್ಯ ಗೊಂದಲಗಳನ್ನು ನಿವಾರಿಸಲು ತರಬೇತಿ ಸಿಕ್ಕಿದೆ," ಎಂಬುದು ಅವರ ವಾದ.
ಬೇರೆಬೇರೆ ಮೆದುಳು, ಬೇರೆಬೇರೆ ತರಬೇತಿ
ತಜ್ಞರ ಪ್ರಕಾರ, ಇದು ಬುದ್ಧಿವಂತಿಕೆಯ ಕೊರತೆಯಲ್ಲ, ಬದಲಿಗೆ ಎರಡು ತಲೆಮಾರುಗಳ ನಡುವಿನ 'ಚಿಂತನಾ ಕ್ರಮ'ದ ವ್ಯತ್ಯಾಸವಾಗಿದೆ. ಇಂದಿನ ಜೆನ್ ಝೀ ಬೆಳೆದಿರುವುದು ಮಾಹಿತಿಯ ಮಹಾಪೂರದ ಮಧ್ಯೆ. ಅವರು ವೀಡಿಯೊಗಳು, ರೀಲ್ಸ್ ಮತ್ತು ಡ್ಯಾಶ್‌ಬೋರ್ಡ್‌ಗಳ ಮೂಲಕ ಕಲಿಯಲು ಇಷ್ಟಪಡುತ್ತಾರೆ. ಎಐ (AI) ಉಪಕರಣಗಳು ಅವರ ಮಿದುಳಿನ ಹೊರೆಯನ್ನು ತಗ್ಗಿಸಿವೆ. ಅವರಿಗೆ ನಿರಂತರವಾಗಿ 'ಲೈಕ್ಸ್' ಮತ್ತು 'ಕಾಮೆಂಟ್'ಗಳ ರೂಪದಲ್ಲಿ ಫೀಡ್‌ಬ್ಯಾಕ್ ಸಿಗುತ್ತಲೇ ಇರುತ್ತದೆ.
ಆದರೆ ಸಾಂಪ್ರದಾಯಿಕ ಕಚೇರಿಗಳು ಇನ್ನೂ ರೇಖಾತ್ಮಕ ಚಿಂತನೆ (Linear Thinking), ದೀರ್ಘ ಬರವಣಿಗೆ ಮತ್ತು ವಿಳಂಬಿತ ಫಲಿತಾಂಶಗಳನ್ನು ನಂಬಿಕೊಂಡಿವೆ. "ಎರಡು ಭಿನ್ನ ಆಲೋಚನಾ ವ್ಯವಸ್ಥೆಗಳು ಮುಖಾಮುಖಿಯಾದಾಗ, ಎರಡೂ ಕಡೆಯವರು ಮತ್ತೊಬ್ಬರನ್ನು ಅಸಮರ್ಥರು ಎಂದು ಭಾವಿಸುವುದು ಸಹಜ," ಎನ್ನುತ್ತಾರೆ ಶಿಕ್ಷಣ ಮನಶ್ಶಾಸ್ತ್ರಜ್ಞರು.
ಯಾರು ಸರಿ? ಯಾರು ತಪ್ಪು?
ಸತ್ಯವೇನೆಂದರೆ, ಎರಡೂ ಕಡೆಯವರ ವಾದದಲ್ಲಿ ಹುರುಳಿದೆ. ಸಂಶೋಧನೆಗಳ ಪ್ರಕಾರ, ಜೆನ್ ಝೀ ಉದ್ಯೋಗಿಗಳಿಗೆ ಸಮಸ್ಯೆ ಬಗೆಹರಿಸುವುದು ಕಷ್ಟವಲ್ಲ, ಆದರೆ ಒಂದೇ ವಿಷಯದ ಮೇಲೆ ದೀರ್ಘಕಾಲ ಏಕಾಗ್ರತೆ ವಹಿಸುವುದು (Deep Focus) ಕಷ್ಟವಾಗುತ್ತಿದೆ. ಮ್ಯಾನೇಜರ್‌ಗಳು ಇದನ್ನು 'ಸೋಮಾರಿತನ' ಎಂದು ಕರೆದರೆ, ಯುವಕರು ಇದನ್ನು 'ನಿಧಾನಗತಿಯ ಪ್ರಕ್ರಿಯೆ' ಎಂದು ಕರೆಯುತ್ತಾರೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications