ಬೆಂಗಳೂರಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರು, ಜೂನ್ 3: ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮನೆ ಮುಂದೆ ಇದ್ದ ಬಾಲಕಿಯನ್ನು ಹೊತ್ತೊಯ್ದ ದುಷ್ಕರ್ಮಿಗಳು ಈ ನೀಚ ಕೃತ್ಯ ಎಸಗಿದ್ದಾರೆ. ಆ ನಂತರ ಮನೆ ಮುಂದೆ ಬಿಸಾಡಿ ಹೋಗಿದ್ದಾರೆ.
ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಬಾಲಕಿಯನ್ನು ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಶಿವಾಜಿ ನಗರದಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕಿಯ ದೇಹ ಸ್ಥಿತಿ ತುಂಬ ಸೂಕ್ಷ್ಮವಾಗಿದೆ ಎದು ತಿಳಿದುಬಂದಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.[ಕೋಲಾರ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ]

ಬಾಲಕಿಯ ಮನೆ ಬಳಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇಲ್ಲ. ಜತೆಗೆ ಆರೋಪಿಗಳನ್ನು ಗುರುತು ಹಿಡಿಯುವಂಥ ಪ್ರತ್ಯಕ್ಷದರ್ಶಿಗಳು ಇಲ್ಲ. ಇಡೀ ಘಟನೆ ಬಗ್ಗೆ ಆ ಬಾಲಕಿಯೇ ಮಾಹಿತಿ ನೀಡಬೇಕಿದೆ. ಆದರೆ ಆರೋಪಿಗಳ ಪತ್ತೆಗಾಗಿ ಕಾಡುಗೊಂಡನಹಳ್ಳಿ ಪೊಲೀಸರು ಶೋಧ ನಡೆಸಿದ್ದಾರೆ.[ಬೀದರಿನ ಅಂಗನವಾಡಿ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ]
KG Halli:5 yr old shifted to hospital by Hoyasala patrol with history of head injury; doctors found raped by unknown; special team formed. pic.twitter.com/lSbFUlkfa7
— Hemant Nimbalkar IPS (@crimebangalore) 3 June 2017
ಇಂಥ ಹೇಯ ಕೃತ್ಯ ಎಸಗಿದವರ ಬಂಧನವನ್ನು ಶೀಘ್ರವಾಗಿ ಮಾಡಬೇಕು ಎಂದು ಒತ್ತಡ ಹೆಚ್ಚುತ್ತಿದೆ.












Click it and Unblock the Notifications